ಬೆಳಗಾವಿ ಸಾಧಾರಣವಾಗಿ ಲಿಂಬೆ ಹಣ್ಣು, ಅರಿಶಿಣ ಕುಂಕುಮ ಇಟ್ಟು ವಾಮಾಚಾರ ಮಾಡೋದು ಸಾಮಾನ್ಯ. ಆದರೆ ಬೆಳಗಾವಿಯಲ್ಲೊಂದು ಹೈಟೆಕ್ ವಾಮಾಚಾರ ಪ್ರಕರಣ ಬೆಳಕಿಗೆ ಬಂದಿದೆ.
ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದ ಹೊರವಲಯದ ರೈತ ಸದಾನಂದ ದೇಸಾಯಿ ಎನ್ನುವ ರೈತನ ಹೊಲದಲ್ಲಿ ಮೊಬೈಲ್ ಇಟ್ಟು ವಾಮಾಚಾರ ಮಾಡಲಾಗಿದೆ.
ಜಮೀನಿನ ರೈತರು ರೈತ ಮುಖಂಡ ರಾಜು ಮರವೆ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಅವರು ಸ್ಥಳಕ್ಕೆ ಹೋಗಿ ನೋಡಿದಾಗ ಲಿಂಬೆಹಣ್ಣು, ಮೊಸರನ್ನ ಜೊತೆಗೆ ಸ್ಮಾರ್ಟ್ ಫೋನ್ ಇರುವುದು ಕಂಡುಬಂದಿದೆ. ಇದು ಸ್ಮಾರ್ಟ್ ವಾಮಾಚಾರ ಎಂದೇ ಹೇಳಲಾಗುತ್ತಿದೆ. ಮೊಬೈಲ್ ಜೊತೆಗೆ ಲಿಂಬೆಹಣ್ಣು, ತೆಂಗಿನಕಾಯಿ, ಎಲೆ ಅಡಿಕೆ, ಕ್ಯಾರ್ ಬೀಜ ಹಾಕಿ, ಗಿಡಕ್ಕೆ ಗಂಟು ಕಟ್ಟಲಾಗಿದೆ. ಕೆಲ ತಿಂಗಳಿಂದ ಸತತವಾಗಿ ಇಲ್ಲಿ ವಾಮಾಚಾರದ ವಸ್ತುಗಳು ಪತ್ತೆಯಾಗುತ್ತಿವೆ ಎನ್ನಲಾಗಿದೆ.