ಕನ್ನಡಪ್ರಭ ವಾರ್ತೆ ಬೆಳಗಾವಿ
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜತ್ ವಿಧಾನಸಭಾ ಕ್ಷೇತ್ರದ ಉಮದಿಯಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಭಾಗವಹಿಸಿ ಮಹಾ ವಿಕಾಸ ಅಘಾಡಿ ಅಭ್ಯರ್ಥಿ ಕಾಂಗ್ರೆಸ್ ನ ವಿಕ್ರಮಸಿಂಹ ಬಾಳಾಸೋ ಸಾವಂತ್ ಪರವಾಗಿ ಅವರು ಮಾತನಾಡಿದರು.
ಗೃಹಲಕ್ಷ್ಮೀ ಯೋಜನೆ ಕುರಿತು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಈ ಕುರಿತ ಸುಳ್ಳು ಜಾಹಿರಾತನ್ನೂ ನೋಡಿದ್ದೇನೆ. ಈವರೆಗೆ ₹ 30 ಸಾವಿರ ಕೋಟಿ ಗಿಂತ ಹೆಚ್ಚು ಹಣವನ್ನು ನಾವು ಕರ್ನಾಟಕದ ಮಹಿಳೆಯರಿಗೆ ಹಾಕಿದ್ದೇವೆ. ಕಳೆದ 14 ತಿಂಗಳಿನಿಂದ ನಿರಂತರವಾಗಿ ಯೋಜನೆ ನಡೆಯುತ್ತಿದೆ. ಅಪಪ್ರಚಾರಕ್ಕೆ ಯಾರೂ ಕಿವಿಗೊಡಬೇಡಿ ಎಂದು ಅವರು ಮನವಿ ಮಾಡಿದರು.ಇಲ್ಲಿಯ ಸರಕಾರ ಭಾವನೆಗಳ ಮೇಲೆ ಆಡ ಆಡಲು ಮುಂದಾಗಿದೆ. ನಾವು ಬದುಕಿನ ಮೇಲೆ ಆಡಳಿತ ನಡೆಸುತ್ತೇವೆ. ಇಲ್ಲಿನ ಅಭ್ಯರ್ಥಿ ವಿಕ್ರಮ ಸಿಂಹ್ ಹಿಂದೆ ಜಿಪಂ ಸದಸ್ಯರಾಗಿ ಕೆಲಸ ಮಾಡಿದವರು. ಅತ್ಯುತ್ತಮ ಕೆಲಸ ಮಾಡುವ ಮನೋಭಾವ ಉಳ್ಳವರು. ಈ ಹಿಂದೆ ವಿಧಾನಸಭೆಯಲ್ಲಿ ಒಮ್ಮೆ ಸೋತರು ಜನಸೇವೆ ನಿಲ್ಲಿಸಲಿಲ್ಲ. ಜನಸಂಪರ್ಕ ಇಟ್ಟುಕೊಂಡು ಬರುತ್ತಿದ್ದಾರೆ. ಹಾಗಾಗಿ ಅವರಿಗೆ ಹೆಚ್ಚಿನ ಮತ ನೀಡಿ ಕನಿಷ್ಟ 30 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಲಕ್ಷ್ಮೀ ಹೆಬ್ಬಾಳಕರ್ ವಿನಂತಿಸಿದರು.
ಈ ಭಾಗದಲ್ಲಿ ಕನ್ನಡಿಗರು ದೊಡ್ಡ ಸಖ್ಯೆಯಲ್ಲಿದ್ದಾರೆ. ನನಗೂ ಈ ಭಾಗಕ್ಕೂ ಅವಿನಾಭಾವ ಸಂಬಂಧವಿದೆ. ಇಲ್ಲಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಹೇಳಿದ್ದಾರೆ.
ಈ ವೇಳೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಮಾಜಿ ಸಚಿವರಾದ ಎಸ್.ಆರ್.ಪಾಟೀಲ, ವಿಠ್ಠಲ ಕಟ್ಲಗೊಂಡ, ನಾನಾ ಶಿಂಧೆ, ಚನ್ನಪ್ಪ ಹೊರ್ತಿಕರ್, ರೇಷ್ಮಾ ಹೊರ್ತಿಕರ್, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.