ಸುಬ್ರಹ್ಮಣ್ಯ: ಯುವರಕ್ತ ನಿಧಿ ಬೆಳ್ಳಾರೆ ಉದ್ಘಾಟನಾ ಕಾರ್ಯಕ್ರಮ ಹಾಗೂ ರಕ್ತ ದಾನ ಶಿಬಿರವು ಬೆಳ್ಳಾರೆ ಸಿ ಎ ಬ್ಯಾಂಕ್ ಸಭಾಭವನದಲ್ಲಿ ಭಾನುವಾರ ನಡೆಯಿತು.
ಪ್ರಾದೇಶಿಕ ರಕ್ತ ವರ್ಗಾವಣೆ ಕೇಂದ್ರ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಇದರ ಹಿರಿಯ ರೋಗ ಶಾಸ್ತ್ರಜ್ಞ ಡಾ. ಶರತ್ ಕುಮಾರ್ ರಾವ್ ರಕ್ತದಾನ ಮಾಹಿತಿ ನೀಡಿದರು.
ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸದಸ್ಯರಾದ ಡಾ. ಮುರಳಿಮೋಹನ್ ಚೂಂತಾರು ಮಾತನಾಡಿ ದೇಶದಲ್ಲಿ ಒಟ್ಟು ಯೋಚನೆ ಮಾಡಿದಾಗ ರಕ್ತ ನೀಡುವವರ ಸಂಖ್ಯೆ ಕಡಿಮೆ ಇದೆ. ರಕ್ತದಾನದ ಬಗ್ಗೆ ಅರಿವು ಅಗತ್ಯವಿದೆ ಎಂದರು.ರೆಡ್ ಕ್ರಾಸ್ ಸೊಸೈಟಿ ಸುಳ್ಯ ಸಭಾಪತಿ ಪಿ. ಬಿ ಸುಧಾಕರ್ ರೈ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಮಿತಾ ಎಲ್ ರೈ ಕಾರ್ಯಕ್ರಮದಲ್ಲಿ ಡಾ. ಮುರಳಿಮೋಹನ್ ಚೂಂತಾರು, ಸುಧಾಕರ್ ರೈ ಪಿ ಬಿ ಹಾಗೂ ಪ್ರತೀಕ್ ಕುಲಾಲ್ ಅವರನ್ನು ಸನ್ಮಾನಿಸಿದರು.
ಮೊದಲು ರಕ್ತ ದಾನ ಮಾಡಿದ ದಾನಿಗಳನ್ನು ಗುಲಾಬಿ ಹೂ ನೀಡಿ ಗೌರವಿಸಲಾಯಿತು. 89 ಜನರು ರಕ್ತದಾನ ಮಾಡಿದರು. ಪ್ರಾದೇಶಿಕ ರಕ್ತ ವರ್ಗಾವಣೆ ಕೇಂದ್ರ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು ವೈದ್ಯರ ತಂಡ ಶಿಬಿರ ನಡೆಸಿಕೊಟ್ಟರು. ಯುವ ರಕ್ತ ನಿಧಿ ನಿರ್ವಹಣಾ ಸಮಿತಿಯ ಆರ್ ಕೆ ಭಟ್ ಸ್ವಾಗತಿಸಿ, ನಿಶ್ಮಿತಾ ಬೆಳ್ಳಾರೆ ವಂದಿಸಿದರು. ಪ್ರದೀಪ್ ಕುಮಾರ್ ರೈ ಪನ್ನೆ ನಿರೂಪಿಸಿದರು.