ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಸುಜಾತ ಗುರುವಾರ ಕೆಲಸಕ್ಕೆ ಹೋಗಲು ತಮ್ಮೂರು ಬಂಗಾರಪೇಟೆ ತಾಲೂಕು ಕತ್ತಹಳ್ಳಿಯಿಂದ ಕೋಲಾರಕ್ಕೆ ಬಂದಿದ್ದಳು.
ಕನ್ನಡಪ್ರಭ ವಾರ್ತೆ ಕೋಲಾರಎಲ್ಲೆಡೆ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಸೂರ್ಯನೂ ತನ್ನ ಪಥ ಬದಲಾಯಿಸಿ ಉದಯಿಸಿದ್ದ ಹೀಗಿರುವಾಗಲೇ ತನ್ನ ಪ್ರಿಯತಮೆ ತನ್ನನ್ನು ಮದುವೆಯಾಗುವಂತೆ ಗೋಗರೆದಿದ್ದ ಪ್ರಿಯತಮೆಯನ್ನೇ ಬರ್ಬರವಾಗಿ ಕ್ಷಣಾರ್ಧದಲ್ಲಿ ವ್ಯಕ್ತಿಯೊಬ್ಬ ಹತ್ಯೆ ಮಾಡಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಕೋಲಾರದಲ್ಲಿ ಗುರುವಾರ ನಡೆದಿದೆ.ನಗರದ ಹೊರವಲಯದ ಬಂಗಾರಪೇಟೆ ವೃತ್ತದಲ್ಲಿ ಚಿರಂಜೀವಿ ಎಂಬಾತ ತನ್ನ ಪ್ರಿಯತಮೆ ಸುಜಾತ ಎಂಬಾಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಸುಜಾತ ಗುರುವಾರ ಕೆಲಸಕ್ಕೆ ಹೋಗಲು ತಮ್ಮೂರು ಬಂಗಾರಪೇಟೆ ತಾಲೂಕು ಕತ್ತಹಳ್ಳಿಯಿಂದ ಕೋಲಾರಕ್ಕೆ ಬಂದಿದ್ದಳು.
ಈ ವೇಳೆ ತನ್ನ ಜೊತೆಯಲ್ಲೇ ಬಂದಿದ್ದ ಬಂಗಾರಪೇಟೆಯ ಯಳಬುರ್ಗಿ ಗ್ರಾಮದ ಚಿರಂಜೀವಿ ಬಸ್‌ನಲ್ಲಿ ಜಗಳವಾಡಿಕೊಂಡ ಬಂದರು. ಇಬ್ಬರೂ ಕೋಲಾರದ ಹೊರವಲಯದ ಬಂಗಾರಪೇಟೆ ರಸ್ತೆಯಲ್ಲಿ ಇಳಿಯುತ್ತಿದ್ದಂತೆ ಚಿರಂಜೀವಿ ಏಕಾಏಕಿ ತನ್ನ ಕೀ ಚೈನಿನಲ್ಲಿದ್ದ ಚಾಕುವೊಂದನ್ನು ಬಳಸಿ ಸುಜಾತಳ ಕತ್ತು ಕುಯ್ದಿದ್ದ. ಕತ್ತು ಸೀಳುತ್ತಿದ್ದಂತೆ ನೋಡ ನೋಡುತ್ತಿದ್ದಂತೆ ಸುಜಾತ ಕ್ಷಣಾರ್ಧದಲ್ಲೇ ಕೊನೆಯುಸಿರೆಳೆದಳು.ಈ ಎಲ್ಲಾ ದೃಶ್ಯಗಳನ್ನು ನೋಡುತ್ತಿದ್ದ ಸಲ್ಲಿದ್ದ ಸ್ಥಳೀಯರು ಕೊಲೆ ಮಾಡಿ ಅಲ್ಲಿಂದ ತಪ್ಪಿಸಿಕೊಳ್ಳಲು ಹೋದ ಚಿರಂಜೀವಿ ಯನ್ನು ಹಿಡಿದು ತಳಿಸಿದ್ದಾರೆ. ಅಷ್ಟೇ ಅಲ್ಲದೆ ಆತನ ಬಟ್ಟೆ ಬಿಚ್ಚಿ ಜನರು ಅಯ್ಯೋ ಅನ್ಯಾಯವಾಗಿ ಒಂದು ಜೀವ ತೆಗೆದುಬಿಟ್ಟಲ್ಲೋ ಎಂದು ಅಲ್ಲಿದ್ದ ಜನರು ಕೋಪದಿಂದ ಥಳಿಸಿದರು. ನಂತರ ಕೊಲಾರ ನಗರ ಠಾಣಾ ಪೊಲೀಸರು ಪೋನ್ ಕರೆ ಮಾಡಿ ತಿಳಿಸಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದರು. ಸ್ಥಳಕ್ಕೆ ಬಂದಿದ್ದ ಕೋಲಾರ ನಗರ ಠಾಣಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದರು, ಇನ್ನು ಸ್ಥಳಕ್ಕೆ ಬಂದಿದ್ದ ಎಸ್ಪಿ ಕನ್ನಿಕಾ ಸುಕ್ರಿವಾಲ್ ಹಾಗೂ ಸೋಕೋ ಟೀಂ ಪರಿಶೀಲನೆ ನಡೆಸಿ ಪ್ರಕರಣ ಸಂಬಂಧ ತನಿಖೆ ಕೈಗೊಂಡಿದೆ.ಬಂಗಾರಪೇಟೆ ತಾಲೂಕಿನ ಕತ್ತಹಳ್ಳಿಯ ಕೃಷ್ಣಮೂರ್ತಿ ಮಗಳು ಸುಜಾತ, ಈಕೆಗೆ ಮದುವೆಯಾಗಿ ಒಂದು ಗಂಡು ಮಗುವಿದೆ, ಆದರೆ ಕೆಲವು ವರ್ಷಗಳ ಹಿಂದೆ ಗಂಡನಿಂದ ಈಕೆ ವಿಚ್ಚೇದನ ಪಡೆದಿದ್ದಳು, ನಂತರ ಈಕೆ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದಳು, ಇತ್ತೀಚೆಗೆ ಅಂದರೆ ಕಳೆದ ಮೂರು ತಿಂಗಳ ಹಿಂದಷ್ಟೇ ಕೋಲಾರ ತಾಲೂಕು ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಬೆಲ್‌ರೈಸ್ ಅನ್ನೋ ಕಂಪನಿಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು.ಈಕೆಗೆ ಇಂಡಸ್ ಬ್ಯಾಂಕ್‌ನಲ್ಲಿ ಕ್ರೆಡಿಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಚಿರಂಜೀವಿರೊಂದಿಗೆ ಪರಿಚಯವಾಗಿತ್ತು. ಮಹಿಳಾ ಸ್ತ್ರೀಶಕ್ತಿ ಸಂಘಗಳಿಗೆ ಸಾಲ ನೀಡುವ ವಿಚಾರವಾಗಿ ಗ್ರಾಮಕ್ಕೆ ಬಂದು ಹೋಗಿ ಮಾಡುತ್ತಿದ್ದ ಚಿರಂಜೀವಿ ಪರಿಚಯವಾಗಿ ನಂತರ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಚಿರಂಜೀವಿ ಕೂಡಾ ಆಕೆಗೆ ಬೇಕಾದ ಹಣ ಕೊಡೋದು ತೊಗೊಳೋದು ಮಾಡುತ್ತಿದ್ದ, ಹೀಗಿರುವಾಗಲೇ ಒಂದು ದಿನ ಚಿರಂಜೀವಿಗೆ ಮದುವೆಯಾಗಿದೆ ಅನ್ನೋ ವಿಚಾರ ತಿಳಿಯುತ್ತದೆ, ಚಿರಂಜೀವಿಗೆ ಮದುವೆಯಾಗಿ ಮಕ್ಕಳಿದ್ದಾರೆ ಅನ್ನೋ ವಿಷಯ ತಿಳಿದ ನಂತರ ಸುಜಾತ ಚಿರಂಜೀವಿಯ ಜೊತೆಗೆ ಮಾತು ಕಡಿಮೆ ಮಾಡಿದ್ದಳು. ಇದು ಚಿರಂಜೀವಿಗೆ ಕಷ್ಟವಾಗಿತ್ತು, ಆಗ ತಾನು ಕೊಟ್ಟಿದ್ದ ಹಣ ವಾಪಸ್ ಕೊಡು ಇಲ್ಲ ನನ್ನನ್ನು ಮದುವೆಯಾಗು ಎಂದು ಹಠಕ್ಕೆ ಬಿದಿದ್ದ ಆಕೆಯೊಂದಿಗೆ ಗಲಾಟೆ ಮಾಡಿಕೊಂಡಿದ್ದ ಈ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕಳೆದ ಡಿ. 20ರಂದು ಒಂದು ಪ್ರಕರಣ ಕೂಡಾ ದಾಖಲಾಗಿತ್ತು.
ಇದೆಲ್ಲದರ ನಡುವೆ ಸುಜಾತ ಚಿರಂಜೀವಿಯನ್ನು ಮಾತಾಡದೆ ಆತನನ್ನು ಆವೈಡ್ ಮಾಡಲು ಮುಂದಾಗಿದ್ದು ಚಿರಂಜೀವಿಗೆ ನುಂಗಲಾರದ ತುತ್ತಾಗಿತ್ತು. ಇಂದು ಕೂಡಾ ಸುಜಾತ ಕೆಲಸಕ್ಕೆಂದು ಹೊರಟಾಗ ಆಕೆಯೊಂದಿಗೆ ಬಸ್‌ನಲ್ಲಿ ಜಗಳ ಮಾಡಿಕೊಂಡೇ ಬಂದಿದ್ದ ಚಿರಂಜೀವಿ ಕೋಲಾರ ಹೊರವಲಯದಲ್ಲಿ ಬಸ್ ಇಳಿದು ಕಂಪನಿ ಬಸ್‌ಗಾಗಿ ಕಾಯುತ್ತಿದ್ದ ಸುಜಾತಳ ಬಳಿ ಜಗಳ ಮಾಡುತ್ತಲೇ ಇದ್ದವನು ಏಕಾಏಕಿ ಸುಜಾತಳಿಗೆ ತನ್ನ ಕೀ ಬಂಚ್‌ನಲ್ಲಿದ್ದ ಸಣ್ಣ ಚಾಕುವಿನಿಂದ ಆಕೆಯ ಕುತ್ತಿಗೆ ಕುಯ್ದು ಪರಾಗಿಯಾಗಲು ಯತ್ನಿಸಿದ್ದ ಆಗ ಅಲ್ಲಿದ್ದ ಸ್ಥಳೀಯರು ಚಿರಂಜೀವಿಯನ್ನು ಹಿಡಿದು ಆತನ ಬಟ್ಟೆ ಬಿಚ್ಚಿಸಿ ಥಳಿಸಿ, ನಂತರ ಆತನನ್ನು ಕೋಲಾರ ನಗರ ಠಾಣಾ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ತನಗೆ ಮದುವೆಯಾಗಿದ್ದರು ತನ್ನನ್ನು ಒರಿಸಲು ಒಲ್ಲದ ಕಾರಣದಿಂದ ತನ್ನ ಪ್ರಿಯತಮೆಯನ್ನು ಚಿರಂಜೀವಿ ತನ್ನ ಕೈಯಾರೆ ಹತ್ಯೆ ಮಾಡಿ ಜೈಲು ಪಾಲಾಗಿದ್ದಾನೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.