ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ ಅಖಂಡ ಭಜನೆ

KannadaprabhaNewsNetwork |  
Published : Jun 10, 2026, 02:45 AM IST
ಅಖಂಡ ಭಜನೆ | Kannada Prabha

ಸಾರಾಂಶ

ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದಲ್ಲಿನ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದಲ್ಲಿ ಜೂ. 7ರಿಂದ 13ರ ವರೆಗೆ ನಡೆಯಲಿರುವ ಶ್ರೀ ಗ್ರಂಥರಾಜ ಜ್ಞಾನೇಶ್ವರಿಯ ಸಾಮುದಾಯಿಕ ಪಾರಾಯಣ ಹಾಗೂ ಅಖಂಡ ಹರಿನಾಮ ಸಪ್ತಾಹದ ಉದ್ಘಾಟನೆ ಮತ್ತು ಗ್ರಂಥರಾಜ ಜ್ಞಾನೇಶ್ವರಿಯ ಬಿಡುಗಡೆ ಸೋಮವಾರ ನಡೆಯಿತು.

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದಲ್ಲಿನ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದಲ್ಲಿ ಜೂ. 7ರಿಂದ 13ರ ವರೆಗೆ ನಡೆಯಲಿರುವ ಶ್ರೀ ಗ್ರಂಥರಾಜ ಜ್ಞಾನೇಶ್ವರಿಯ ಸಾಮುದಾಯಿಕ ಪಾರಾಯಣ ಹಾಗೂ ಅಖಂಡ ಹರಿನಾಮ ಸಪ್ತಾಹದ ಉದ್ಘಾಟನೆ ಮತ್ತು ಗ್ರಂಥರಾಜ ಜ್ಞಾನೇಶ್ವರಿಯ ಬಿಡುಗಡೆ ಸೋಮವಾರ ನಡೆಯಿತು.

ಕ್ಷೇತ್ರದ ಪೀಠಾಧೀಶ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಉಪಸ್ಥಿತಿಯಲ್ಲಿ ಪಂಡರಾಪುರ ಶ್ರೀ ಚೈತನ್ಯ ಸದ್ಗುರು ಹರಿಪ್ರಸಾದ ಶರದಸ್ವಾಮಿ ಶಿವೂರಕರ ಅವರ ನೇತೃತ್ವದಲ್ಲಿ ಅಧಿಕ ಮಾಸದ ನಿಮಿತ್ತ ಕಾರ್ಯಕ್ರಮ ನಡೆಯುತ್ತಿದೆ.ಕ್ಷೇತ್ರದ ಮಠಾಧೀಶ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿ, ಆಶೀರ್ವಚನ ನೀಡಿದರು.

ಸನಾತನ ಹಿಂದೂ ಧರ್ಮದ ಆಚಾರ ವಿಚಾರಗಳನ್ನು ಅರಿತುಕೊಂಡು ನಮ್ಮಲ್ಲಿರುವ ಆತ್ಮ ಒಂದೇ ಎಂಬ ಭಾವನೆಯಿಂದ ಬದುಕಿ ಮತ್ತೊಬ್ಬರ ಬಗ್ಗೆ ಚಿಂತನೆ ದ್ವೇಷ ಬಿಟ್ಟು ಬಾಳಿದಾಗ ನೆಮ್ಮದಿ ಸಾಧ್ಯ. ಪಾಂಡುರಂಗ ಭಜನೆಯ ಶಕ್ತಿಯಿಂದ ಇಲ್ಲಿ ಆಗಮಿಸಿದ ಪಂಡರಾಪುರ ಭಕ್ತ ವೃಂದ, ಶಿಷ್ಯರು ಧನ್ಯರು, ಭಜನೆ, ಧ್ಯಾನದಿಂದ ನಮ್ಮಲ್ಲಿನ ದುಃಖವನ್ನು ನಿವಾರಿಸುವ ಶಕ್ತಿ ಇದೆ ಎಂದು ಅವರು ಹೇಳಿದರು.

ಆರ್‌ಎಸ್‌ಎಸ್‌ ಹಿರಿಯ ಪ್ರಮುಖ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ಹಿಂದೂ ಧರ್ಮದ ಸಂಸ್ಕೃತಿ, ಸಂಸ್ಕಾರವನ್ನು ಜಗತ್ತಿನಲ್ಲಿ ಉಳಿಸಿ ಬೆಳೆಸಿದೆ. ನಾವೆಲ್ಲ ಒಟ್ಟಾಗಿ ಪಾರಾಯಣದ ಮೂಲಕ ಅನುಷ್ಠಾನ ಮಾಡಿದಾಗ ನೆಮ್ಮದಿ ಸಿಗುವುದು ಎಂದರು.ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ, ಫಂಡರಾಪುರದ ವಿಠಲ ಕನ್ಯಾಡಿಗೆ ಬಂದು ಭಕ್ತ ವೃಂದದ ಮೂಲಕ ಶಕ್ತಿ ನೀಡುವ ಕಾರ್ಯ ಆಗಿದೆ. ಇದರಿಂದ ಹಿಂದೂ ಸಂಸ್ಕೃತಿ, ಸಂಸ್ಕಾರ ಉಳಿಯಲು ಸಾಧ್ಯ. ಹಿಂದೂ ಸಮಾಜಕ್ಕೆ ಇಲ್ಲಿ ನಡೆಯುವ ಪಾರಾಯಣ ಸಪ್ತಾಹ ಒಂದು ದೊಡ್ಡ ಯಜ್ಞವಾಗಿದೆ. ನಮಗೂ ಪಂಡರಾಪುರದ ಭಕ್ತರೊಂದಿಗೆ ಸೇರುವ ಅವಕಾಶ ಸಿಕ್ಕಿದೆ ಎಂದರು.ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ದೇವರ ಎದುರು ಎಲ್ಲರೂ ಸಮಾನರು ಅಧಿಕ ಮಾಸದ ನಿಮಿತ್ತ ಮಾಡಿರುವ ಪಾರಾಯಣ ಎಲ್ಲರಲ್ಲಿ ಭಕ್ತಿಯನ್ನು ತೋರಿಸುತ್ತದೆ ಎಂದರು.ಗುರುದೇವ ಮಠದ ಟ್ರಸ್ಟಿ ಸುಜಿತಾ ವಿ. ಬಂಗೇರ, ತುಕಾರಾಮ ಸಾಲಿಯಾನ್ ಆರ್ಲ, ಕೃಷ್ಣಪ್ಪ ಗುಡಿಗಾರ್, ನಾನಾ ಮಠಗಳ ಸ್ವಾಮೀಜಿಗಳಾದ ಶ್ರೀ ಚೈತನ್ಯ ಸದ್ಗುರು ಹರಿಪ್ರಸಾದ ಮಹಾರಾಜ್, ಶ್ರೀ ಚೈತನ್ಯ ಸದ್ಗುರು ಗೋಪಾಲ ಕಾಕಾ ಮಕಾಶಿರ, ಹಿರೇಮಠದ ಡಾ. ಕಲ್ಲೇಶ್ವರ ಮಹಾ ಸ್ವಾಮೀಜಿ, ದಾದಾನಪಿ ಶಿವಾನಂದ ಮಠದ ಶ್ರೀ ನಿಜಾನಂದ ಸ್ವಾಮೀಜಿ, ವೀರಾನಂದ ಆಶ್ರಮದ ಚೆನ್ನಮಲ್ಲಯ್ಯ ಸ್ವಾಮೀಜಿ, ವೀರಮಲ್ಲೇಶ್ವರ ಸ್ವಾಮೀಜಿ, ಬಸವರಾಜ್ ಸ್ವಾಮೀಜಿ ಅಂದ್ರಲಾ, ಸ್ವಾಮಿ ಬೋಳಗಿರಿ ಉಪಸ್ಥಿತರಿದ್ದರು.

ಫಂಡರಾಪುರ ಶಿವೂರಕರ ಸಂಸ್ಥೆ ವತಿಯಿಂದ ಶ್ರೀ ಗ್ರಂಥರಾಜ ಜ್ಞಾನೇಶ್ವರಿ ಗ್ರಂಥವನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು.

ಅಧಿಕ ಮಾಸ ಪಾರಾಯಣ ಸೇವಾ ಸಮಿತಿ ಅಧ್ಯಕ್ಷ ಆರ್.ಟಿ . ಪಾಟೀಲ್ ಧ್ವಜಾರೋಹಣ ನೇರವೇರಿಸಿದರು.ಅಧಿಕಮಾಸ ಪಾರಾಯಣ ಸೇವಾ ಸಮಿತಿ ಉಪಾಧ್ಯಕ್ಷ ರಮೇಶ ಪಾ. ಅರಕೇರಿ ಸ್ವಾಗತಿಸಿ, ಸದಸ್ಯ ಭೀಮ್ ಸಿಂಗ್ ವಿ. ರಜಮತ ವಿಜಯಪುರ ಕಾರ್ಯಕ್ರಮ ನಿರೂಪಿಸಿದರು.ಶ್ರೀ ರಾಮ ಕ್ಷೇತ್ರದಲ್ಲಿ 7 ದಿನಗಳ ಕಾಲ ಅಖಂಡ ಹರಿನಾಮ ಸಪ್ತಾಹ ಪಂಢರಾಪುರ ಅಧಿಕ ಮಾಸ ಪಾರಾಯಣವು ಸಮಿತಿ1008 ಸದಸ್ಯರಿಂದ ನಡೆಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರ್‌.ಬಿ.ತಿಮ್ಮಾಪುರಗೆ ಸಚಿವ ಸ್ಥಾನ ನೀಡಿ
ಕೃಷ್ಣಾ ನ್ಯಾಯಾಧಿಕರಣ ತಿರ್ಪೀನಂತೆ ಅಧಿಸೂಚನೆ ಹೊರಡಿಸಲಿ: ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ