ಮೂಡುಬಿದಿರೆ: ಮೂಡುಬಿದಿರೆ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ-2026ರಲ್ಲಿ ಮತ್ತೊಮ್ಮೆ ಶ್ರೇಷ್ಠ ಸಾಧನೆ ಮೆರೆದಿದ್ದಾರೆ.ಮೊದಲ 10 ರ್‍ಯಾಂಕ್‌ಗಳಲ್ಲಿ 3 ರ್ಯಾಂಕ್ ಮೊದಲ 50 ರ್‍ಯಾಂಕ್‌ಗಳಲ್ಲಿ 15 ರ್ಯಾಂಕ್, ಮೊದಲ 100 ರ್‍ಯಾಂಕ್‌ಗಳಲ್ಲಿ 18 ರ್ಯಾಂಕ್, ಮೊದಲ 200 ರ್‍ಯಾಂಕ್‌ಗಳಲ್ಲಿ 46 ರ್ಯಾಂಕ್, ಮೊದಲ 500 ರ್‍ಯಾಂಕ್‌ಗಳಲ್ಲಿ 187 ರ್ಯಾಂಕ್, ಮೊದಲ 1,000 ರ್‍ಯಾಂಕ್‌ಗಳಲ್ಲಿ 429, ಮೊದಲ 2000 ರ್‍ಯಾಂಕ್‌ಗಳಲ್ಲಿ 914 ರ್‍ಯಾಂಕ್‌ಗಳನ್ನು ಆಳ್ವಾಸ್ ವಿದ್ಯಾರ್ಥಿಗಳು ಪಡೆದುಕೊಂಡಿರುತ್ತಾರೆ.
ಭಾವನಾ ಬಿ.ಆರ್, ಕೃಷಿ, ಆಹಾರ ವಿಜ್ಞಾನ, ಸೆರಿಕಲ್ಚರ್ ವಿಷಯಗಳ ಪ್ರಾಯೋಗಿಕ ವಿಷಯಗಳಲ್ಲಿ 2ನೇ ರ‍್ಯಾಂಕ್, ಕ್ಲಾರೆನ್ಸ್ ಡಿಸೋಜಾ ಬಿಎಸ್ಸಿ ಅಗ್ರಿ, ಸೆರಿಕಲ್ಚರ್ ವಿಷಯದಲ್ಲಿ 14ನೇ ರ‍್ಯಾಂಕ್, ಬಿ. ಫಾರ್ಮ ಹಾಗೂ ಡಿ.ಫಾರ್ಮದಲ್ಲಿ 35ನೇ ರ‍್ಯಾಂಕ್, ನ್ಯಾಚುರೋಪತಿಯಲ್ಲಿ 20ನೇ ರ‍್ಯಾಂಕ್, ಇಂಜಿನಿಯರಿಂಗ್‌ನಲ್ಲಿ 42ನೇ ರ್‍ಯಾಂಕ್, ನರ್ಸಿಂಗ್‌ನಲ್ಲಿ 44ನೇ ರ್‍ಯಾಂಕ್, ಪಶು ವೈದ್ಯಕೀಯದಲ್ಲಿ 44ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ.ಸುಹರ್ಷ ಹರೀಶ್ ಹೆಗ್ಡೆ ನರ್ಸಿಂಗ್ ಹಾಗೂ ಪಶು ವೈದ್ಯಕೀಯದಲ್ಲಿ 31ನೇ ರ್‍ಯಾಂಕ್, ಬಿಫಾರ್ಮ, ಫಾರ್ಮ ಡಿಯಲ್ಲಿ 47ನೇ ರ್‍ಯಾಂಕ್, ರಕ್ಷಿತಾ ಮಂಜುನಾಥ್ ಸಂಗನಪೇಟ್ ಬಿಪಿಟಿ ಹಾಗೂ ಎಎಚ್‌ಎಸ್‌ನಲ್ಲಿ 39ನೇ ರ್‍ಯಾಂಕ್, ಪ್ರೀತಮ್ ಭೀಮಪ್ಪ ಕೊಣ್ಣೂರ್ ಪಶು ವೈದ್ಯಕೀಯದಲ್ಲಿ 70ನೇರ್‍ಯಾಂಕ್, ಫುಡ್ ಸೈನ್ಸ್ ನಲ್ಲಿ 108ನೇ ರ್‍ಯಾಂಕ್, ಗಣೇಶ್ ಗೋಪಾಲ್ ಕುಂಬಾರ್ ಬಿಪಿಒದಲ್ಲಿ 97ನೇ ರ್‍ಯಾಂಕ್, ದಿಶಾ ಎಚ್. ಶೆಟ್ಟಿ ಬಿಪಿಒನಲ್ಲಿ 99ನೇ ರ್‍ಯಾಂಕ್, ಕುಶಾಲ್ ಕೆಯು ಅಗ್ರಿ ಹಾಗೂ ಫುಡ್ ಸೈನ್ಸ್ನಲ್ಲಿ 106ನೇ ರ್‍ಯಾಂಕ್, ಬಸವರಾಜ್ ಮಲ್ಲಪ್ಪ ಬಿಪಿಟಿ ಹಾಗೂ ಹೋಮ್ ಸೈನ್ಸ್‌ನಲ್ಲಿ 120ನೇ ರ್‍ಯಾಂಕ್, ವೈಭವಿ ಎಂ. ಫುಡ್ ಸೈನ್ಸ್, ಸೆರಿಕಲ್ಚರ್ ಹಾಗೂ ಬಿಎಸ್ಸಿ ಅಗ್ರಿಯಲ್ಲಿ 122ನೇ ರ್‍ಯಾಂಕ್ ಹಾಗೂ ನ್ಯಾಚುರೋಪಥಿಯಲ್ಲಿ 136ನೇ ರ್‍ಯಾಂಕ್, ವೈಭವಿ ಟಿ.ಎಚ್. ಅಗ್ರಿ ಹಾಗೂ ಫುಡ್ ಸೈನ್ಸ್ನಲ್ಲಿ 149ನೇ ರ್‍ಯಾಂಕ್, ಮೆಲ್ರೋಯ್ ಕ್ಯಾಸ್ಟಲಿನೋ ಬಿಪಿಒ 161ನೇ ರ್‍ಯಾಂಕ್, ಸರ‍್ಯಕಾಂತ್ ಎಸ್. ಪಾಟೀಲ್ ಪಶು ವೈದ್ಯಕೀಯ 172ನೇ ರ್‍ಯಾಂಕ್, ಬಿಎಸ್ಸಿ ನರ್ಸಿಂಗ್ 173ನೇ ರ್‍ಯಾಂಕ್, ಕಿರಣ್ ಕುಮಾರ್ ಪಶುವೈದ್ಯಕೀಯ 180ನೇ ರ್‍ಯಾಂಕ್, ಸಾನ್ವಿ ಸುದೀರ್ ಅಗ್ರಿ, ಫುಡ್ ಸೈನ್ಸ್ ಹಾಗೂ ಸೆರಿಕಲ್ಚರ್ ವಿಷಯಗಳಲ್ಲಿ 187ನೇ ರ್‍ಯಾಂಕ್, ಸುಮಿತ್ ವಿಕೆ ಅಗ್ರಿ, ಫುಡ್ ಸೈನ್ಸ್, ಸೆರಿಕಲ್ಚರ್ 196ನೇ ರ್‍ಯಾಂಕ್, ರಾಹುಲ್ ಜಂಭಗಿ ಪಶುವೈದ್ಯಕೀಯ 196ನೇ ರ್‍ಯಾಂಕ್, ನರ್ಸಿಂಗ್ 197ನೇ ರ್‍ಯಾಂಕ್‌ಗಳನ್ನು ಪಡೆದುಕೊಂಡಿದ್ದಾರೆ.
ಪ್ರಮುಖವಾಗಿ ಇಂಜಿನಿಯರಿಂಗ್ ವಿಭಾಗದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮೊದಲ 1000 ರ್‍ಯಾಂಕ್‌ಗಳಲ್ಲಿ 38 ವಿದ್ಯಾರ್ಥಿಗಳು, ಮೊದಲ 5000 ರ್‍ಯಾಂಕ್‌ಗಳಲ್ಲಿ 228 ವಿದ್ಯಾರ್ಥಿಗಳು, ಮೊದಲ 10,000 ರ್‍ಯಾಂಕ್‌ಗಳಲ್ಲಿ ಒಟ್ಟು 728 ವಿದ್ಯಾರ್ಥಿಗಳು ರ್‍ಯಾಂಕ್‌ನ್ನು ಪಡೆದಿದ್ದು, ಇವರೆಲ್ಲರೂ ರಾಜ್ಯದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಪಡೆಯಲು ಅರ್ಹತೆ ಪಡೆದಿದ್ದಾರೆ. ರ್‍ಯಾಂಕ್ ಪಡೆದ ಎಲ್ಲ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಭಿನಂದಿಸಿದ್ದಾರೆ.