ಸಾಧಕ ಕೃಷಿಕರಿಗೆ ಜನ ಮನ್ನಣೆ: ಮುಳಿಯ ಕೇಶವ ಪ್ರಸಾದ್

KannadaprabhaNewsNetwork |  
Published : Jun 10, 2026, 02:45 AM IST
ಫೋಟೋ: ೮ಪಿಟಿಆರ್-ಮೇಳಪುತ್ತೂರಿನಲ್ಲಿ ಕಿಲ್ಲೆ ಮೈದಾನದಲ್ಲಿ ನಡೆದ  ಹಲಸು ಮತ್ತು ಹಣ್ಣುಗಳ ಮೇಳದ ಸಮಾರೋಪ ಸಮಾರಂಭ ನಡೆಯಿತು. | Kannada Prabha

ಸಾರಾಂಶ

ನವತೇಜ ಟ್ರಸ್ಟ್ ನೇತೃತ್ವದಲ್ಲಿ ಮುಳಿಯ ಮ್ಯಾನೇಜ್ಡ್ ಫಾರ್ಮ್ ಲ್ಯಾಂಡ್ಸ್‌ ಪ್ರಾಯೋಜಕತ್ವದಲ್ಲಿ ಮೂರು ದಿನಗಳ ಕಾಲ ಇಲ್ಲಿನ ಕಿಲ್ಲೆ ಮೈದಾನದಲ್ಲಿ ನಡೆದ ಎಂಟನೇ ಆವೃತ್ತಿಯ ‘ಹಲಸು ಮತ್ತು ಹಣ್ಣುಗಳ ಮೇಳ’ದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪುತ್ತೂರು: ಕೃಷಿಯನ್ನು ಉದ್ಯಮವಾಗಿ ಮಾಡಿದಾಗ ಕೃಷಿಯಲ್ಲಿ ಅಭಿವೃದ್ಧಿಯಾಗಿ ಯಶಸ್ಸು ಕಾಣಲು ಸಾಧ್ಯ. ಕೃಷಿಯಲ್ಲಿ ಸಾಧನೆ ಮಾಡಿದಾಗ ಜನ ಗುರುತಿಸುತ್ತಾರೆ ಎಂದು ಮುಳಿಯ ಜ್ಯುವೆಲ್ಲರ್ಸ್ ನ ಮುಖ್ಯ ಆಡಳಿತ ನಿರ್ದೇಶಕ ಮುಳಿಯ ಕೇಶವ ಪ್ರಸಾದ್ ಹೇಳಿದ್ದಾರೆ.

ನವತೇಜ ಟ್ರಸ್ಟ್ ನೇತೃತ್ವದಲ್ಲಿ ಮುಳಿಯ ಮ್ಯಾನೇಜ್ಡ್ ಫಾರ್ಮ್ ಲ್ಯಾಂಡ್ಸ್‌ ಪ್ರಾಯೋಜಕತ್ವದಲ್ಲಿ ಮೂರು ದಿನಗಳ ಕಾಲ ಇಲ್ಲಿನ ಕಿಲ್ಲೆ ಮೈದಾನದಲ್ಲಿ ನಡೆದ ಎಂಟನೇ ಆವೃತ್ತಿಯ ‘ಹಲಸು ಮತ್ತು ಹಣ್ಣುಗಳ ಮೇಳ’ದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪುತ್ತೂರಿನಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪನೆಯಾದಾಗ ಹಣ್ಣು ಬೆಳೆಗಾರರಿಗೆ ಅನುಕೂಲವಾಗಲಿದ್ದು, ಅದನ್ನು ಶೀಘ್ರವೇ ಮಾಡುವಂತೆ ಕಿಶೋರ್ ಬೊಟ್ಯಾಡಿಯವರಲ್ಲಿ ಆಗ್ರಹಿಸಿದ ಅವರು, ಮುಳಿಯ ಫಾರ್ಮ್‌ ಲ್ಯಾಂಡ್‌ನಲ್ಲಿ ವಿವಿಧ ಜಾತಿಯ ಹಣ್ಣುಗಳ ಗಿಡಗಳನ್ನು ಬೆಳೆಸುವ ಮೂಲಕ ಹಣ್ಣುಗಳ ಬೆಳೆಗೆ ಸಹಕಾರ ನೀಡುವ ಜೊತೆಗೆ ಹಸಿ ತ್ಯಾಜ್ಯಗಳ ವಿಲೇವಾರಿಗೂ ಪೂರಕವಾಗುವಂತೆ ಮಾಡಲಾಗಿದೆ ಎಂದರು.ವಿಧಾನ ಪರಿಷತ್ ಸದಸ್ಯ ಕಿಶೋರ್‌ಕುಮಾರ್ ಬೊಟ್ಯಾಡಿ ಮಾತನಾಡಿ, ಹಣ್ಣುಗಳ ಬೆಳೆಗಳಿಗೆ ಸಹಕಾರ, ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಬೃಹತ್ ಕೋಲ್ಡ್ ಸ್ಟೋರೇಜ್ ಸ್ಥಾಪನೆಗೆ ಪ್ರಯತ್ನಿಸಲಾಗುವುದು. ಮೇಳದ ಮೂಲಕ ಹಲಸನ್ನು ಲೋಕಲ್ ಟು ಗ್ಲೋಬಲ್‌ಗೆ ಕೊಂಡುಹೋಗುವ ಸುದಿನ ಬರಲಿದೆ ಎಂದರು.ಗ್ರಾಮಜನ್ಯ ರೈತೋತ್ಪಾದಕ ಸಂಸ್ಥೆಯ ನಿರ್ದೇಶಕ ನಿರಂಜನ ಪೋಳ್ಯ ಮಾತನಾಡಿ, ಅಡಕೆ ಬೆಳೆಗಾರರ ಸಂರಕ್ಷಣೆಗಾಗಿ ಸ್ಥಾಪನೆಗೊಂಡ ಕ್ಯಾಂಪ್ಕೊ ಸಂಸ್ಥೆಯು ಹಣ್ಣುಗಳ ಬೆಳೆಗಳಿಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕ್ಯಾಂಪ್ಕೊ ಮಾರ್ಟ್ ತೆರೆಯಬೇಕು. ಅಲ್ಲಿ ಕೃಷಿ ಸಂಬಂಧಿತ ಉತ್ಪನ್ನಗಳಿಗೆ ಮಾತ್ರ ಅವಕಾಶ ನೀಡಬೇಕು. ಆಗ ರೈತರು ಪರ್ಯಾಯ ಬೆಳೆಯಾಗಿ ಹಣ್ಣುಗಳನ್ನು ಬೆಳೆಯಲು ಅವಕಾಶವಾಗಲಿದೆ. ಹಣ್ಣು ಬೆಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗ್ರಾಮಜನ್ಯ ಸಂಸ್ಥೆಯ ಮೂಲಕ ಕೋಲ್ಡ್ ಸ್ಟೋರೇಜ್‌ನ್ನು ಪ್ರಾರಂಭಿಸಲಾಗಿದ್ದು, ರೈತರಿಗೆ ಕನಿಷ್ಠ ಬಾಡಿಗೆಯಲ್ಲಿ ನೀಡಲಾಗುವುದು ಎಂದರು.ಜೇಸಿಐ ವಲಯ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿದರು. ನವತೇಜ ಟ್ರಸ್ಟ್ ಸದಸ್ಯ ವೇಣುಗೋಪಾಲ ಸಮಾರೋಪ ಭಾಷಣ ಮಾಡಿದರು. ನವತೇಜ ಟ್ರಸ್ಟ್ ಅಧ್ಯಕ್ಷ ಅನಂತಪ್ರಸಾದ್ ನೈತ್ತಡ್ಕ ಸ್ವಾಗತಿಸಿದರು. ಕಾರ್ಯದರ್ಶಿ ಸುಹಾಸ್ ಮರಿಕೆ ವಂದಿಸಿದರು. ಅಡಿಕೆ ಪತ್ರಿಕೆಯ ಉಪ ಸಂಪಾದಕ ನಾ. ಕಾರಂತ ಪೆರಾಜೆ ನಿರೂಪಿಸಿದರು.೮೦ಕ್ಕೂ ಅಧಿಕ ಮಳಿಗೆಗಳು: ಮೂರು ದಿನಗಳ ಕಾಲ ನಡೆದ ಹಲಸು ಮತ್ತು ಹಣ್ಣುಗಳ ಮೇಳದಲ್ಲಿ ಸುಮಾರು ೮೦ಕ್ಕೂ ಅಧಿಕ ವಿವಿಧ ಮಳಿಗೆಗಳಿದ್ದು, ಇದರ ಜೊತೆಗೆ ಹಲವು ಆಹಾರ ಮಳಿಗೆಗಳೂ ಮೇಳದಲ್ಲಿ ಪಾಲ್ಗೊಂಡಿದ್ದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರ್‌.ಬಿ.ತಿಮ್ಮಾಪುರಗೆ ಸಚಿವ ಸ್ಥಾನ ನೀಡಿ
ಕೃಷ್ಣಾ ನ್ಯಾಯಾಧಿಕರಣ ತಿರ್ಪೀನಂತೆ ಅಧಿಸೂಚನೆ ಹೊರಡಿಸಲಿ: ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ