ಮಂಗಳಗಂಗೋತ್ರಿ ಕ್ಯಾಂಪಸ್ ನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ 1974-76ರ ಬ್ಯಾಚ್ ನ ಹಳೆ ವಿದ್ಯಾರ್ಥಿಗಳ ಸಮ್ಮಿಲ ಹಾಗೂ ತಮ್ಮ ವಿದ್ಯಾರ್ಜನೆಯ 50ನೇ ವರ್ಷದ ನೆನಪಿಗಾಗಿ ಕೊಡುಗೆಯಾಗಿ ನೀಡಿದ ‘ಕಾಮರ್ಸ್ ಐ5 ಲ್ಯಾಬ್’ ಆಧುನಿಕ ಕಂಪ್ಯೂಟರ್ ಪ್ರಯೋಗಾಲಯದ ಉದ್ಘಾಟನಾ ಸಮಾರಂಭ ಶುಕ್ರವಾರ ನಡೆಯಿತು.
ಉಳ್ಳಾಲ: ಮಂಗಳಗಂಗೋತ್ರಿ ಕ್ಯಾಂಪಸ್ ನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ 1974-76ರ ಬ್ಯಾಚ್ ನ ಹಳೆ ವಿದ್ಯಾರ್ಥಿಗಳ ಸಮ್ಮಿಲ ಹಾಗೂ ತಮ್ಮ ವಿದ್ಯಾರ್ಜನೆಯ 50ನೇ ವರ್ಷದ ನೆನಪಿಗಾಗಿ ಕೊಡುಗೆಯಾಗಿ ನೀಡಿದ ‘ಕಾಮರ್ಸ್ ಐ5 ಲ್ಯಾಬ್’ ಆಧುನಿಕ ಕಂಪ್ಯೂಟರ್ ಪ್ರಯೋಗಾಲಯದ ಉದ್ಘಾಟನಾ ಸಮಾರಂಭ ಶುಕ್ರವಾರ ನಡೆಯಿತು.
ಭಾವನಾತ್ಮಕ ಕ್ಷಣ: ಕಾಮರ್ಸ್ ಐ5 ಲ್ಯಾಬ್ ನ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ, ಸಂಬಂಧಗಳು ದೂರವಾಗುತ್ತಿರುವ ಕಾಲಘಟ್ಟದಲ್ಲಿ ಈ ಕೊಣಾಜೆ ಕ್ಯಾಂಪಸ್ ನಲ್ಲಿ 50 ವರ್ಷಗಳ ಹಿಂದೆ ಕಲಿತ ಹಳೆ ವಿದ್ಯಾರ್ಥಿಗಳು ಒಟ್ಡು ಸೇರುವುದರೊಂದಿಗೆ ಗೆಳೆಯರನ್ನು, ಅನುಭವಗಳನ್ನು ನೆನಪಿಸುವ ಕಾರ್ಯಕ್ರಮ ಅತ್ಯಂತ ಮಹತ್ವಪೂರ್ಣವಾದುದು ಮತ್ತು ಈಗಿನ ವಿದ್ಯಾರ್ಥಿಗಳಿಗ ಸ್ಫೂರ್ತಿಯಾಗಿದೆ ಎಂದರು.ಮಂಗಳೂರು ವಿವಿ ವಾಣಿಜ್ಯಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ. ಈಶ್ವರ್ ಮಾತನಾಡಿ, ಈ ಕಾರ್ಯಕ್ರಮ ಹಳೆ ಬೇರು ಹೊಸ ಚಿಗುರುವಿನ ಕಾರ್ಯಕ್ರಮವಾಗಿದೆ ಎಂದರು.ಮಂಗಳೂರು ವಿವಿ ವಾಣಿಜ್ಯ ವಿಭಾಗದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ಉಮಪ್ಪ ಪೂಜಾರಿ ಮಾತನಾಡಿದರು.ಹಳೆ ವಿದ್ಯಾರ್ಥಿ ತಂಡದ ರಿಚ್ಛಾರ್ಡ್ ಡಿಸೋಜ ಮಾತನಾಡಿದರು.1974-76 ಬ್ಯಾಚ್ ಹಳೆ ವಿದ್ಯಾರ್ಥಿಗಳಾದ ನಿಂಗ ರೆಡ್ಡಿ, ಪುಟ್ಟ ಸ್ವಾಮಿ, ಸಣ್ಣ ಹನುಮಂತಪ್ಪ, ಲೀಲಾವತಿ, ಅರುಣ್ ಪೈ, ರವೀಂದ್ರನಾಥ್, ರಮಾನಂದ, ರಿಚರ್ಡ್ ಡಿಸೋಜ, ಡಾ. ಗೋವಿಂದ ಭಟ್, ಈಶ್ವರಪ್ಪ, ಕರುಣಾಮಯ, ರಾಜ್ ಮೋಹನ್ ರಾವ್ ಭಾಗವಹಿಸಿದ್ದರು. ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಪ್ರೊ. ಮುನಿಯಪ್ಪ, ಪ್ರೊ. ವೇದವ, ಪ್ರೊ. ಪರಮೇಶ್ವರ,ಪ್ರೊ. ಪ್ರೀತಿ ಕೀರ್ತಿ ಡಿಸೋಜ ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಈಶ್ವರಪ್ಪ ಸ್ವಾಗತಿಸಿದರು. ಡಾ. ರಾಜ್ ಮೋಹನ್ ರಾವ್ ವಂದಿಸಿದರು. ಎಂ.ಸಿ. ಲೀಲಾವತಿ ನಿರೂಪಿಸಿದರು.1974-76ರ ಈ ಬ್ಯಾಚ್‌ನಲ್ಲಿ 26 ವಿದ್ಯಾರ್ಥಿಗಳಿದ್ದರು. ಅವರಲ್ಲಿ 9 ಮಂದಿ ನಿಧನರಾಗಿದ್ದಾರೆ. ಕಾರ್ಯಕ್ರಮದಲ್ಲಿ 12 ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಿಧನ ಹೊಂದಿರುವ ಹಳೆ ವಿದ್ಯಾರ್ಥಿಗಳಿಗೆ ಹಾಗೂ ಪ್ರಾಧ್ಯಾಪಕರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.