ಬೇಲೂರಿನ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಅಧಿಕಾರ ಸ್ವೀಕಾರ

KannadaprabhaNewsNetwork |  
Published : Jun 26, 2024, 12:41 AM IST
ಚಿತ್ರ ೧ (ಬಿ. ಎಲ್.ಆರ್.ಪಿ)ಬೇಲೂರು ಲಯನ್ಸ್ ಕ್ಲಬ್ ನೂತನ    ಅಧ್ಯಕ್ಷ ಡಾ. ಚಂದ್ರಮೌಳಿ ಅವರ  ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು | Kannada Prabha

ಸಾರಾಂಶ

ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಡಾ.ಚಂದ್ರಮೌಳಿ ಜನಪ್ರಿಯ ವೈದ್ಯರಾಗಿದ್ದು ತಮ್ಮ ಅವಧಿಯಲ್ಲಿ ಅತ್ಯುತ್ತಮ ಕೆಲಸಗಳನ್ನು ಮಾಡಲಿ ಎಂದು ಲಯನ್ಸ್ ಕ್ಲಬ್‌ ಜಿಲ್ಲಾ ಉಪ ರಾಜ್ಯಪಾಲ ಕುಡಪಿ ಅರವಿಂದ ಶೆಣೈ ಹೇಳಿದರು. ಬೇಲೂರಿನಲ್ಲಿ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕ್ಲಬ್‌ ಜಿಲ್ಲಾ ಉಪ ರಾಜ್ಯಪಾಲ ಶೆಣೈ ಉಪಸ್ಥಿತಿ

ಕನ್ನಡಪ್ರಭ ವಾರ್ತೆ ಬೇಲೂರು

ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಡಾ.ಚಂದ್ರಮೌಳಿ ಜನಪ್ರಿಯ ವೈದ್ಯರಾಗಿದ್ದು ತಮ್ಮ ಅವಧಿಯಲ್ಲಿ ಅತ್ಯುತ್ತಮ ಕೆಲಸಗಳನ್ನು ಮಾಡಲಿ ಎಂದು ಲಯನ್ಸ್ ಕ್ಲಬ್‌ ಜಿಲ್ಲಾ ಉಪ ರಾಜ್ಯಪಾಲ ಕುಡಪಿ ಅರವಿಂದ ಶೆಣೈ ಹೇಳಿದರು.

ಪಟ್ಟಣದ ಯಗಚಿ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಬೇಲೂರು ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಆಧುನಿಕ ಶೈಲಿಗೆ ಹೊಂದಿಕೊಂಡಿರುವ ಬಹುತೇಕರು ಸಾಮಾಜಿಕ ಸೇವಾ ಮನೋಭಾವದಿಂದ ದೂರವಾಗುತ್ತಿದ್ದಾರೆ. ಸಮಾಜದಲ್ಲಿ ಬಡವರು, ನಿರ್ಗತಿಕರು, ವಿಶೇಷಚೇತನರಿಗೆ ಕೈಲಾದ ಸಹಾಯ ನೀಡುವ ಗುಣವನ್ನು ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಕಲಿಸುತ್ತದೆ. ಸರ್ಕಾರದಿಂದ ಯಾವುದೇ ಅನುದಾನವಿಲ್ಲದೆ, ಸಂಸ್ಥೆಯಲ್ಲಿನ ಸದಸ್ಯರು ದುಡಿದ ಒಂದು ಭಾಗವನ್ನು ಸಮಾಜಕ್ಕೆ ಅರ್ಪಿಸಲಾಗುತ್ತದೆ. ಬೇಲೂರು ಲಯನ್ಸ್ ಕ್ಲಬ್ ನಿರಂತರ ಸೇವಾ ಕಾರ್ಯದಲ್ಲಿ ಜಿಲ್ಲೆಯಲ್ಲಿ ಉತ್ತಮ ಹೆಸರು ಪಡೆದಿದೆ ಎಂದು ಹೇಳಿದರು.

ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಡಾ.ಚಂದ್ರಮೌಳಿ ಮಾತನಾಡಿ, ಸಮಾಜ ಸೇವೆ ಎಂದರೆ ಇತ್ತೀಚಿನ ದಿನದಲ್ಲಿ ಫಲಾಪೇಕ್ಷೆಯ ನಿರೀಕ್ಷೆ ಇಟ್ಟುಕೊಂಡು ಮಾಡುತ್ತಾರೆ ಎಂಬ ಅಪವಾದವಿದೆ. ಆದರೆ ಲಯನ್ಸ್ ಕ್ಲಬ್ ಯಾವುದೇ ಲಾಭ ಹಾಗೂ ಪ್ರಚಾರವನ್ನು ಬಯಸದೆ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದೆ. ಈ ಕಾರಣದಿಂದಲೇ ಬೇಲೂರಿನ ಲಯನ್ಸ್ ಕ್ಲಬ್ ಕಳೆದ ಎರಡು ದಶಕದಲ್ಲಿ ಹೆಮ್ಮರವಾಗಿ ಬೆಳೆಯಲು ಸಾಧ್ಯವಾಗಿದೆ ಎಂದರು

ಉದ್ಯಮಿ ಗ್ರಾನೈಟ್ ರಾಜಶೇಖರ್, ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ವಿಜಯವಿಷ್ಣು ಮಯ್ಯ, ಮಾಜಿ ಕ್ಯಾಬಿನಟ್ ಕಾರ್ಯದರ್ಶಿ ಅನಿಲ್ ಕುಮಾರ್, ಜಿಲ್ಲಾ ಸಂಪುಟ ಸದಸ್ಯ ಗೋವರ್ಧನ್, ಕಾರ್ಯದರ್ಶಿ ಮುಕ್ತಿಯರ್ ಅಹಮದ್, ಖಜಾಂಚಿ ಪ್ರಶಾಂತ್, ನಿಕಟಪೂರ್ಣ ಅಧ್ಯಕ್ಷ ವೈ.ಬಿ.ಸುರೇಶ್, ಲಯನ್ಸ್ ಭವನ ಟ್ರಸ್ಟ್ ಅಧ್ಯಕ್ಷ ದೊಡ್ಡಮನೆ ಪ್ರಭಾಕರ್, ಮಾಜಿ ಕಾರ್ಯದರ್ಶಿ ಬಿ.ಟಿ.ರವಿಕುಮಾರ್, ಮಾಜಿ ಅಧ್ಯಕ್ಷ ಎಂ.ಪಿ.ಪೂವಯ್ಯ, ರಮೇಶ್ ಕುಮಾರ್, ಕೆ.ಎಲ್.ಸುರೇಶ್,ಉಮೇಶ್, ಅಬ್ದುಲ್ ಲತೀಪ್, ಮಂಜುನಾಥ್ ಮತ್ತು ಗೋಪಿನಾಥ್, ಪುಟ್ಟಸ್ವಾಮಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ