ಸ್ವಾತಂತ್ರ್ಯ ಹೋರಾಟದಲ್ಲಿ ಬೆಳ್ಯಪ್ಪ ಪಾತ್ರ ಮಹತ್ತರ: ಮಂಜು ಚಿಣ್ಣಪ್ಪ

KannadaprabhaNewsNetwork |  
Published : Oct 03, 2026, 02:45 AM IST
ಚಿತ್ರ :  2ಎಂಡಿಕೆ2 :  ⁠ಪಂದ್ಯಂಡ ಬೆಳ್ಯಪ್ಪ ಮೊಮ್ಮಗಳಿಂದ ಮಾಲಾರ್ಪಣೆ. | Kannada Prabha

ಸಾರಾಂಶ

ಸ್ವಾತಂತ್ರ್ಯ ಹೋರಾಟದ ಕೊಡಗಿನ ಅಧ್ಯಾಯದಲ್ಲಿ ಪಂದ್ಯಂಡ ಬೆಳ್ಯಪ್ಪ ಹಾಗೂ ಸೀತಮ್ಮ ಬೆಳ್ಯಪ್ಪನವರ ಪಾತ್ರ ಅನನ್ಯ ಎಂದು ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಹೇಳಿದರು.

ಗೋಣಿಕೊಪ್ಪ ; ಸ್ವಾತಂತ್ರ್ಯ ಹೋರಾಟದ ಕೊಡಗಿನ ಅಧ್ಯಾಯದಲ್ಲಿ ಪಂದ್ಯಂಡ ಬೆಳ್ಯಪ್ಪ ಹಾಗೂ ಸೀತಮ್ಮ ಬೆಳ್ಯಪ್ಪನವರ ಪಾತ್ರ ಅನನ್ಯ ಎಂದು ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಹೇಳಿದರು. ಗಾಂಧಿ ಜಯಂತಿ ಅಂಗವಾಗಿ ಗೋಣಿಕೊಪ್ಪದ ಸ್ವಾತಂತ್ರ್ಯ ಹೋರಾಟಗಾರ ಕೊಳ್ಳಿಮಾಡ ಕರುಂಬಯ್ಯ ಬಸ್ ನಿಲ್ದಾಣದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಕೊಡಗಿನ ಗಾಂಧಿ ಪಂದ್ಯಂಡ ಬೆಳ್ಯಪ್ಪ ಪ್ರತಿಮೆಗೆ ಯುನೈಟೆಡ್ ಕೊಡವ ಆರ್ಗನೈಸೇಷನ್ - ಯುಕೊ ವತಿಯಿಂದ ಗೌರವ ಸಲ್ಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ, ನಿಸ್ವಾರ್ಥ ಸೇವೆಯನ್ನು ಇಂದಿನ ಪೀಳಿಗೆ ಮರೆಯಬಾರದೆಂದು ಯುಕೊ ಸಂಸ್ಥೆಯ ವತಿಯಿಂದ ನೆಪ್ಪುರ ನಳತ್ ಮಾಂಜತ ಮೊಟ್ಟ್ ಎಂಬ ಪರಿಕಲ್ಪನೆಯಲ್ಲಿ ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಕೆಲಸ ಮಾಡುತ್ತಿದೆ ಎಂದರು.

ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅಂಬೇಡ್ಕರ್ ಪ್ರತಿಮೆಗೆ ಹಾಗೂ ಪಂದ್ಯಂಡ ಬೆಳ್ಯಪ್ಪರವರ ಮೊಮ್ಮಗಳು ಹಾಗೂ ಸೋಲ್ ಫುಲ್ ಸೋಜೋರ್ನ್ ಪುಸ್ತಕದ ಲೇಖಕಿ ಬೊಮ್ಮಂಡ ಸವೇರಾ ಚಂಗಪ್ಪ ಸ್ವಾತಂತ್ರ್ಯ ಹೋರಾಟಗಾರ ಕೊಡಗಿನ ಗಾಂಧಿ ಪಂದ್ಯಂಡ ಬೆಳ್ಯಪ್ಪರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರೊಂದಿಗೆ ವಿಶೇಷ ನಮನ ಸಲ್ಲಿಸಲಾಯಿತು.

ಯುಕೊ ಸದಸ್ಯರಾದ, ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಚೆಪ್ಪುಡಿರ ಸುಜು ಕರುಂಬಯ್ಯ, ಪ್ರತಿಮಾ ಕರುಂಬಯ್ಯ. ನೆಲ್ಲಮಕ್ಕಡ ಜಫ್ರಿ ಮಾದಯ್ಯ, ಅಜಿನಿಕಂಡ ತಿಮ್ಮಯ್ಯ, ಕಳ್ಳಿಚಂಡ ದೀನ ಉತ್ತಪ್ಪ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಳೆಯ ಪಾದರಕ್ಷೆಗಳಿಗೆ ಹೊಸ ರೂಪ ‘ದಾನ’
ಉಡುಪಿ: ನ. 27ರಿಂದ ರಾಜ್ಯ ಮಟ್ಟದ ಆಹಾರ ಮೇಳ