ಕನ್ನಡಪ್ರಭ ವಾರ್ತೆ ಮಂಡ್ಯ
ಅಮಾವಾಸ್ಯೆ ಶ್ರಾವಣ (ಬೆನಕ ಅಮಾವಾಸ್ಯೆ) ಶನಿವಾರದ ಅಂಗವಾಗಿ ಜಿಲ್ಲೆಯ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.ನಗರದ ಹನಿಯಂಬಾಡಿ ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಬೆಳಗಿನಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ನಗರದ ಶ್ರೀಲಕ್ಷ್ಮಿಜನಾರ್ದನಸ್ವಾಮಿ ದೇವಾಲಯ, ಶ್ರೀ ಶ್ರೀನಿವಾಸ ದೇವಾಲಯ, ತಾಲೂಕಿನ ಶ್ರೀ ಕಂಬದ ನರಸಿಂಹಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಭಕ್ತಾಧಿಗಳಿಗೆ ದಾಸೋಹ ಭವನ ದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.ಆ.೨೬ರಂದು ಶ್ರೀ ವೀರಭದ್ರೇಶ್ವರ ಜನೋತ್ಸವ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಮಂಡ್ಯತಾಲೂಕಿನ ರಾಯಶೆಟ್ಟಿಪುರ ಗ್ರಾಮದಲ್ಲಿ ಆ.೨೬ರಂದು ಶ್ರೀವೀರಭದ್ರೇಶ್ವರ ಸ್ವಾಮಿ ಜನ್ಮೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಅರ್ಚಕ ಪ್ರಸನ್ನ ಆರಾಧ್ಯ ತಿಳಿಸಿದರು.
ಅಂದು ಬೆಳಗ್ಗೆ ೬ ಗಂಟೆಗೆ ಸ್ವಾಮಿಯವರಿಗೆ ರುದ್ರಾಭಿಷೇಕ, ನಂತರ ಹೂವಿನ ಅಲಂಕಾರ, ರುದ್ರಹೋಮ, ಪಂಚಬ್ರಹ್ಮ ಹೋಮವನ್ನು ನೆರವೇರಿಸಲಾಗುವುದು. ಮಧ್ಯಾಹ್ನ ೧೨ ಗಂಟೆಗೆ ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಸಂಜೆ ೬ ಗಂಟೆಗೆ ವೀರಗಾಸೆಯೊಂದಿಗೆ ಕಿರಗಂದೂರು ಶ್ರೀಕಾಡು ಮಹದೇಶ್ವರಸ್ವಾಮಿ ಬಸವ ಹಾಗೂ ಮಂಗಳವಾದ್ಯ, ತಮಟೆಯೊಂದಿಗೆ ಶ್ರೀವೀರಭದ್ರೇಶ್ವರಸ್ವಾಮಿ, ಭದ್ರಕಾಳಮ್ಮ ದೇವರ ಉತ್ಸವದ ಮೆರವಣಿಗೆ ನಡೆಸಲಾಗುವುದು. ರಾತ್ರಿ ೯ ಗಂಟೆಗೆ ಅನ್ನದಾಸೋಹ ಏರ್ಪಡಿಸಲಾಗಿದೆ. ಇದೇ ವೇಳೆ ಮಧುಬಲರೇ ತಂಡದವರಿಂದ ವೀರಗಾಸೆ ನೃತ್ಯಾಗೂ ಅಘೋರಿ ಅವರಿಂದ ಶಿವತಾಂಡವ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದರು. ಗೋಷ್ಠಿಯಲ್ಲಿ ವಿಜಯಕುಮಾರ್ ಇದ್ದರು.
ರಸ್ತೆ ಕಾಮಗಾರಿಗೆ ಶಾಸಕ ನರೇಂದ್ರಸ್ವಾಮಿ ಗುದ್ದಲಿ ಪೂಜೆಹಲಗೂರು:
ಸಮೀಪದ ಗೊಲ್ಲರಹಳ್ಳಿಯಿಂದ ನಂಜಾಪುರ ಹೋಗುವ ರಸ್ತೆ ಮತ್ತು ಸಿಸಿ ಚರಂಡಿ ಅಭಿವೃದ್ಧಿಗೆ ಸುಮಾರು 10 ಲಕ್ಷ ರು.ವೆಚ್ಚದ ಕಾಮಗಾರಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಗುದ್ದಲಿ ಪೂಜೆ ನೆರವೇರಿಸಿದರು.ಈ ವೇಳೆ ಮನ್ಮಲ್ ನಿರ್ದೇಶಕರಾದದ ಕೃಷ್ಣೇಗೌಡ, ವಿಶ್ವಾಸ್, ಬ್ಯಾಡರಹಳ್ಳಿ ಗ್ರಾಪಂ ಉಪಾಧ್ಯಕ್ಷರಾದ ದಾಸಬಾಯಿ, ಸದಸ್ಯರಾದ ಸಿದ್ದಯ್ಯ, ಸಣ್ಣಯ್ಯ, ಜಿಪಂ ಮಾಜಿ ಸದಸ್ಯ ಚಂದ್ರಕುಮಾರ್, ಕುಂತೂರ್ ಗೋಪಾಲ್, ಕೆಂಪಯ್ಯನ ದೊಡ್ಡಿ ಮೋಹನ್ ಕುಮಾರ್, ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸಿ.ಪಿ. ರಾಜು, ಮರಿಸ್ವಾಮಿ, ನಾಗೇಶ, ಶಿವನಂಜೇಗೌಡ, ಶಿವಲಿಂಗೇಗೌಡ ಮತ್ತು ಇತರರು ಇದ್ದರು.