ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಇಲ್ಲಿನ ಸಾಯಿ ಸರೋವರವನ್ನು ಎಲ್ಲರೂ ಸ್ವಚ್ಛ ಮತ್ತು ಶುದ್ಧವಾಗಿಡುವುದು ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪುರಸಭೆ ಸದಸ್ಯ ಶೇಖರ ಅಂಗಡಿ ಹೇಳಿದರು.ಸ್ಥಳೀಯ ಕೆಂಗೇರಿಮಡ್ಡಿಯಲ್ಲಿನ ಸಾಯಿ ಸರೋವರಕ್ಕೆ ಗುರುವಾರ ಬೆಳಗ್ಗೆ ವಾರ್ಡ್‌ನ ಮುಖಂಡರೊಂದಿಗೆ ಬಾಗೀನ ಅರ್ಪಿಸಿ ಮಾತನಾಡಿದರು. ನೀರು ಅತ್ಯಮೂಲ್ಯ ವಸ್ತು. ಅಲ್ಲದೆ ನೀರಿಲ್ಲದೆ ಮನುಷ್ಯ ಕೂಡ ಬದುಕಲಾರ. ಇಂತಹ ಅಮೂಲ್ಯವಾದ ನೀರು ಕೊಡುವ ಈ ಸರೋವರದಿಂದ ಈ ವಾರ್ಡ್ ಜನರ ಎಲ್ಲ ಕೊಳವೆಬಾವಿಗಳು ರಿಚಾರ್ಜ್ ಆಗುತ್ತವೆ. ಹೀಗಾಗಿ ಈ ಸರೋವರವನ್ನು ಹಾಳು ಮಾಡದೆ, ನೀರು ವ್ಯರ್ಥವಾಗದ ಹಾಗೆ ನೋಡಿಕೊಳ್ಳಬೇಕು. ಜತೆಗೆ ಶುಚಿಯಾಗಿಡಬೇಕು ಎಂದು ಹೇಳಿದರು.
ಹೀಗೆ ಮಾಡುವುದರಿಂದ ಪರಿಸರ ಕೂಡ ಸುಧಾರಿಸುತ್ತದೆ. ಜನರ ಆರೋಗ್ಯದ ಮೇಲೆಯೂ ಒಳ್ಳೆಯ ಪರಿಣಾಮ ಬೀರುತ್ತದೆ. ಸರ್ಕಾರ ಇಷ್ಟು ಸುಂದರವಾದ ಸರೋವರ ನಿರ್ಮಿಸಿದ್ದು, ನಮ್ಮೆಲ್ಲರ ಪುಣ್ಯ ಇದನ್ನು ಅಚ್ಟುಕಟ್ಟಾಗಿ ಕಾಪಾಡಿಕೊಂಡು ಹೋಗುವುದು ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಲಹೆ ನೀಡಿದರು.ಮುಖಂಡ ಮಹಾದೇವ ಸಾವಂತ ಮಾತನಾಡಿ, ಸೌಲಭ್ಯ ಕೇಳುವ ಮೊದಲೇ ಅವರ ಮನೆ ಬಾಗಿಲಿಗೆ ನೀಡುವಲ್ಲಿ ನಿಮ್ಮ ಪ್ರಯತ್ನ ಶ್ಲಾಘನೀಯ. ಈ ಸರೋವರ ಇಷ್ಟು ಅಂದವಾಗಿ ಕಾಣುವಂತೆ ಮಾಡಿದವರು ನೀವೇ. ಹೀಗಾಗಿ ಈ ಸರೋವರವನ್ನು ನಾವೆಲ್ಲರೂ ಸೇರಿ ಸ್ವಚ್ಛವಾಗಿಡುವ ಮೂಲಕ ಮಾದರಿ ಸರೋವರ ಎನ್ನುವಂತೆ ನೋಡಿಕೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯರಾದ ಸಿದ್ದಣ್ಣ ರಾಮೋಜಿ, ಮಹಾಲಿಂಗ ಶಿವಣಗಿ, ಬಸವರಾಜ ಹಿಪ್ಪರಗಿ, ತಿಪ್ಪಣ್ಣ ಪಾತ್ರೋಟ, ಮಹಾಲಿಂಗ ಮರೆಗೊಂಡ, ಬಸವರಾಜ ಓಲೇಕಾರ, ಮಹಾಂತೇಶ ದೇವರಮನಿ, ಶಿವಾನಂದ ಕಂಪು, ವೆಂಕಪ್ಪ ಬಂಡಿವಡ್ಡರ, ಪರಸು ಅಮರಾವತಿ, ಆನಂದ ಅಂಗಡಿ, ಮಲ್ಲು ದಡ್ಡೇನ್ನವರ, ಶಿವಾನಂದ ಹೂಗಾರ, ನಾಗಲಿಂಗ ಬಡಿಗೇರ, ಅಬುಬಕರ ಬುದ್ಯಾಳ, ಶಾರದಾ ಜಿಡ್ಡಿಮನಿ, ಅನ್ನಪೂರ್ಣ ರಾಮೋಜಿ, ಕಸ್ತೂರಿ ಪೂಜೇರಿ, ಪವಿತ್ರಾ ಹಿಪ್ಪರಗಿ, ಸರೋಜಿನಿ ರಾಮೋಜಿ, ಸಾವಿಂತ್ರಿ ಹೂಗಾರ, ಅನ್ನಪೂರ್ಣ ಜಳ್ಳಿ, ಮಂಜುಳಾ ಕುಬಕಡ್ಡಿ ಸೇರಿದಂತೆ ಹಲವರು ಇದ್ದರು.