ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಉಪಕಾರ ಮತ್ತು ಕೃತಜ್ಞತೆ ಹಿಂದೂ ಧರ್ಮದ ವಿಶಿಷ್ಟವಾದ ಗುಣವಾಗಿದ್ದು, ಆಯುಧಗಳಿಗೆ ಪೂಜೆ ಸಲ್ಲಿಸುವ ಮೂಲಕ ಅವುಗಳಿಗೆ ಕೃತಜ್ಞೆತೆ ಸಲ್ಲಿಸುವ ಪರಂಪರೆ ನಮ್ಮ ದೇಶದಲ್ಲಿದೆ ಎಂದು ಮಾಜಿ ಶಾಸಕರು ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.ಅವರು ಬಿ.ವಿ.ವಿ.ಸಂಘದ ಆಟದ ಮೈದಾನದಲ್ಲಿ ಬಿ.ವಿ.ವಿ.ಸಂಘವು ಹಮ್ಮಿಕೊಂಡ ಆಯುಧ ಪೂಜೆಯಲ್ಲಿ ಸಂಘದ ಎಲ್ಲ ವಾಹನಗಳಿಗೆ ಏಕಕಾಲಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ನಮ್ಮ ಬದುಕು ಅತ್ಯಂತ ಸುಖಮಯವಾಗಲು, ಉತ್ಕೃಷ್ಟವಾಗಿರಲು ಯಾವ ಯಾವ ಸಂಗತಿ ನಮಗೆ ಸಹಾಯ ಸಲ್ಲಿಸಿದೆಯೋ ಅವುಗಳನ್ನು ಸ್ಮರಣೆ ಮಾಡುವಂತ ಪರಂಪರೆ ನಮ್ಮ ದೇಶದಲ್ಲಿದೆ, ಅದಕ್ಕಾಗಿ ನಮ್ಮ ಬದುಕಿಗಾಗಿ ಶಸ್ತ್ರ ಹಾಗೂ ಯಂತ್ರ ಮತ್ತು ಸಾಧನಗಳಿಗೆ ಉಪಕಾರ ಸ್ಮರಿಸುವ ಹಿನ್ನೆಲೆಯಲ್ಲಿ ನಾವೂ ಆಯುಧಗಳು, ಯಂತ್ರಗಳು, ರೈತ ಪರ ಸಲಕರಣೆಗಳಿಗೆ ಪೂಜೆ ಸಲ್ಲಿಸುವ ಮೂಲಕ ಕೃತಜ್ಞತೆ ಸಲ್ಲಿಸುವ ಪರಂಪರೆ ನಮ್ಮ ದೇಶದಲ್ಲಿದೆ, ಅಲ್ಲದೆ ವಿಜಯದ ಸಂಕೇತವಾಗಿ ಆಯುಧ ಪೂಜೆ ಮಾಡಲಾಗುತ್ತಿದ್ದು, ರಾವಣನನ್ನು ಶ್ರೀರಾಮ ಸಂಹಾರ ಮಾಡಿದ ದಿನ, ಶ್ರೀರಾಮ ಅಯೋಧ್ಯೆಗೆ ಮರಳಿದ ದಿನ, ಪಾಂಡವರು ವನವಾಸ ಪೂರೈಸಿ ಹಸ್ತಿನಾಪುರಕ್ಕೆ ಬಂದ ದಿನವಾಗಿದ್ದು, ದುಷ್ಟ ಶಕ್ತಿ ಸಂಹಾರ ಮಾಡಿದ ದಿನವಾಗಿದ್ದರಿಂದ ಈ ದಿನವನ್ನು ವಿಜಯದಶಮಿ ಎಂದು ಆಚರಿಸಲಾಗುತ್ತಿದೆ ಎಂದರು.
ಬಿ.ವಿ.ವಿ.ಸಂಘದ 160ಕ್ಕೂ ಹೆಚ್ಚು ವಾಹನಗಳಿಗೆ ಏಕಕಾಲದಲ್ಲಿ ಪೂಜೆ ಸಲ್ಲಿಸಲಾಯಿತು, ನಂತರ ಎಲ್ಲ ವಾಹನಗಳು ಸಂಘದ ಮೈದಾನದಿಂದ ವಿದ್ಯಾಗಿರಿ ಎಂಜನಿಯರಿಂಗ್ ಕಾಲೇಜು ಮೈದಾನದವರೆಗೆ ರೋಡ ಶೋ ಮಾಡಲಾಯಿತು. ಕಾರ್ಯಕ್ರಮದಲ್ಲಿ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಜಿ.ಎನ್.ಪಾಟೀಲ, ಲಕ್ಷ್ಮೀನಾರಾಯಣ ಕಾಸಟ್, ಅಶೋಕ ಕರಡಿ, ಸಿ.ಜಿಗಜಿನ್ನಿ, ಎಸ್.ಆರ್.ಮನಹಳ್ಳಿ, ಪ್ರಭುಸ್ವಾಮಿ ಸರಗಣಾಚಾರಿ, ಸಂಗಣ್ಣ ಕಲಾದಗಿ, ಗುರುಬಸವ ಸೂಳಿಬಾವಿ, ಮಲ್ಲಿಕಾರ್ಜುನ ಸಾಸನೂರ, ಮಹಾಂತೇಶ ಶೆಟ್ಟರ, ಶೇಖರಪ್ಪ ಪಟ್ಟಣಶೆಟ್ಟಿ, ಶಿವಕುಮಾರ ಹಿರೇಮಠ, ಎಸ್.ಎಸ್. ಮೊರಬದ, ಶರಣಪ್ಪ ಗುಳೆದ ಬಿ.ಸಿ. ಇಂಡಿ ಸೇರಿದಂತೆ ಅಟೋಮೋಬೈಲ್ ವಿಭಾಗದ ಸಿಬ್ಬಂದಿ ಭಾಗವಹಿಸಿದ್ದರು.