ರಾಜ್ಯ ಬಲಗೈ ಜಾತಿಗಳ ಒಕ್ಕೂಟದಿಂದ ಬೆಂಗಳೂರು ಚಲೋ

KannadaprabhaNewsNetwork |  
Published : Aug 20, 2025, 01:30 AM IST
19ಕೆಎಂಎನ್ ಡಿ25 | Kannada Prabha

ಸಾರಾಂಶ

ನ್ಯಾಯಮೂರ್ತಿ ನಾಗಮೋಹನ ದಾಸ್ ರಾಜ್ಯ ಛಲವಾದಿ ಮಹಾಸಭಾದ ಮನವಿಯನ್ನು ಗಣನೆಗೆ ತೆಗೆದುಕೊಳ್ಳದೆ ಏಕ ಪಕ್ಷಿಯವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಇದರಿಂದ ಪರಿಶಿಷ್ಟ ಜಾತಿ, ಬಲಗೈ, ಛಲವಾದಿ ಸಮುದಾಯಕ್ಕೆ ಸೇರಿದ ಹಲವು ಜಾತಿಗಳನ್ನು ಶೇಕಡ 1 ಗುಂಪಿಗೆ ಸೇರಿಸಿರುವುದು ಛಲವಾದಿ ಸಮುದಾಯಕ್ಕೆ ಮಾಡಿದ ಅನ್ಯಾಯವಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ನ್ಯಾ.ನಾಗ ಮೋಹನದಾಸ್ ಅವರ ಅವೈಜ್ಞಾನಿಕ ಒಳ ಮೀಸಲಾತಿ ವರದಿ ತಿರಸ್ಕರಿಸುವಂತೆ ಒತ್ತಾಯಿಸಿ ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ತಾಲೂಕು ಶಾಖೆ ಕಾರ್ಯಕರ್ತರು ಬೆಂಗಳೂರು ಚಲೋ ನಡೆಸಿದರು.

ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ನೇತೃತ್ವದಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದ ಒಕ್ಕೂಟದ ನೂರಾರು ಕಾರ್ಯಕರ್ತರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಉರಿಲಿಂಗಿ ಪೆದ್ದ ಮಠದ ಪೀಠಾಧ್ಯಕ್ಷ ಜ್ಞಾನ ಪ್ರಕಾಶ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ ರಾಜ್ಯಮಟ್ಟದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬಸ್ ಗಳಲ್ಲಿ ತೆರಳಿದರು.

ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸುರೇಶ್ ಕಂಠಿ, ನ್ಯಾಯಮೂರ್ತಿ ನಾಗಮೋಹನ ದಾಸ್ ರಾಜ್ಯ ಛಲವಾದಿ ಮಹಾಸಭಾದ ಮನವಿಯನ್ನು ಗಣನೆಗೆ ತೆಗೆದುಕೊಳ್ಳದೆ ಏಕ ಪಕ್ಷಿಯವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಇದರಿಂದ ಪರಿಶಿಷ್ಟ ಜಾತಿ, ಬಲಗೈ, ಛಲವಾದಿ ಸಮುದಾಯಕ್ಕೆ ಸೇರಿದ ಹಲವು ಜಾತಿಗಳನ್ನು ಶೇಕಡ 1 ಗುಂಪಿಗೆ ಸೇರಿಸಿರುವುದು ಛಲವಾದಿ ಸಮುದಾಯಕ್ಕೆ ಮಾಡಿದ ಅನ್ಯಾಯವಾಗಿದೆ. ಸರ್ಕಾರ ಅವರ ವರದಿಯನ್ನು ತಿರಸ್ಕರಿಸುವಂತೆ ಆಗ್ರಹಿಸಿದರು.

ಈ ವೇಳೆ ಬಿಜೆಪಿ ಎಸ್. ಸಿ.ಘಟಕದ ಜಿಲ್ಲಾಧ್ಯಕ್ಷ ನಿತ್ಯಾನಂದ, ಗ್ರಾಪಂ ಅಧ್ಯಕ್ಷರಾದ ಈಶ್ವರ, ರವಿಕುಮಾರ್, ರುದ್ರಣ್ಣ, ಸುರೇಶ್, ಮುಖಂಡರಾದ ಕರಠಗೆರೆ ಯೋಗೇಶ್, ಮಡೇನಹಳ್ಳಿ ತಿಮ್ಮಯ್ಯ, ರಾಜೇಂದ್ರ, ಸೋಮು, ಸಂತೋಷ, ಅಪ್ಪು, ನಿತ್ಯಾನಂದ, ಬ್ಯಾಲದ ಕೆರೆ ಕೆಂಪರಾಜು ಮತ್ತಿತರರಿದ್ದರು.

ಭತ್ತ, ಕಬ್ಬು, ರಾಗಿ ಬೆಳೆಯುವ ಕುರಿತು ರೈತರಿಗೆ ಆ.21 ರಂದು ಕಾರ್ಯಾಗಾರ

ಮದ್ದೂರು: ಕೃಷಿ ಇಲಾಖೆ ಕಸಬಾ ರೈತ ಸಂಪರ್ಕ ಕೇಂದ್ರದಿಂದ ಆ.21ರಂದು ತಾಲೂಕಿನ ಕೃಷಿ ಉತ್ಪನ್ನ ಮಾರಾಟ ಸಂಘದ ಆವರಣದಲ್ಲಿ ಭತ್ತ, ಕಬ್ಬು,ರಾಗಿ ಬೆಳೆಯುವ ರೈತರಿಗೆ ಇಳುವರಿ ಹೆಚ್ಚಿಸುವ ಹಿನ್ನೆಲೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ವಿ.ಎಸ್. ಅಶೋಕ, ಉಪ ಕೃಷಿ ನಿರ್ದೇಶಕರಾದ ಮುನೇಗೌಡ, ಸಹಾಯಕ ಕೃಷಿ ನಿರ್ದೇಶಕಿ ಪ್ರತಿಭ ಹೆಚ್.ಜಿ ಭಾಗವಹಿಸಲಿದ್ದಾರೆ. ಕಾರ್ಯಗಾರದಲ್ಲಿ ಕೃಷಿ ವಿಜ್ಞಾನಿಗಳು ಭತ್ತ, ಕಬ್ಬು, ರಾಗಿ ಬೆಳೆಗಳ ಸುಧಾರಿತ ಬೇಸಾಯ ಕ್ರಮಗಳ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಕೃಷಿ ಅಧಿಕಾರಿ ಎನ್. ರೂಪಶ್ರೀ ತಿಳಿಸಿದ್ದಾರೆ.

.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ