ಇಂದು, ನಾಳೆ ‘ಸುವರ್ಣ ಶಿಕ್ಷಣ’ ಮೇಳ : ‘ಕನ್ನಡಪ್ರಭ’ ‘ಏಷ್ಯಾನೆಟ್ ಸುವರ್ಣ ನ್ಯೂಸ್’ ವತಿಯಿಂದ ಆಯೋಜನೆ

Published : May 24, 2025, 10:06 AM IST
no jobs for indian students in usa uk canada 2025

ಸಾರಾಂಶ

‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್ ಸುವರ್ಣ ನ್ಯೂಸ್’ನಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯಲ್ಲಿರುವ ಸರ್ಕಾರಿ ಶಾಲಾ ಮೈದಾನದಲ್ಲಿ ‘ಸುವರ್ಣ ಶಿಕ್ಷಣ’ ಮೇಳ ಆಯೋಜಿಸಲಾಗಿದೆ.

  ಬೆಂಗಳೂರು : ‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್ ಸುವರ್ಣ ನ್ಯೂಸ್’ನಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯಲ್ಲಿರುವ ಸರ್ಕಾರಿ ಶಾಲಾ ಮೈದಾನದಲ್ಲಿ ‘ಸುವರ್ಣ ಶಿಕ್ಷಣ’ ಮೇಳ ಆಯೋಜಿಸಲಾಗಿದೆ.

ಶನಿವಾರ ಬೆಳಿಗ್ಗೆ 11 ಗಂಟೆಗೆ ಸುವರ್ಣ ಶಿಕ್ಷಣ ಮೇಳಕ್ಕೆ ಚಾಲನೆ ದೊರೆಯಲಿದ್ದು ಮುಖ್ಯ ಅತಿಥಿಯಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಆಗಮಿಸಲಿದ್ದಾರೆ. ಚಲನಚಿತ್ರ ತಾರೆಯರಾದ ಪ್ರಜ್ವಲ್ ದೇವರಾಜ್, ವಿನೋದ್ ಪ್ರಭಾಕರ್, ಬೃಂದಾ ಆಚಾರ್ಯ, ಸೋನಲ್‌ ಮೊಂಥೆರೋ ಸಹ ಆಗಮಿಸಲಿದ್ದು ಮೇಳದ ಮೆರುಗನ್ನು ಹೆಚ್ಚಿಸಲಿದ್ದಾರೆ.

ರಾಜ್ಯದ ಸುಮಾರು 50 ಕ್ಕೂ ಅಧಿಕ ವಿಶ್ವವಿದ್ಯಾಲಯಗಳು, ಇನ್ಸ್‌ಟಿಟ್ಯೂಟ್‌ಗಳು ಮೇಳದಲ್ಲಿ ಭಾಗವಹಿಸಲಿವೆ. ಮೇ 24 ರಂದು ಬೆಳಿಗ್ಗೆ 9.30 ರಿಂದ 11 ಗಂಟೆಗೆ ವಿದ್ಯಾರ್ಥಿಗಳಿಗೆ ಲಕ್ಕಿ ಡಿಪ್‌ನಲ್ಲಿ ಲ್ಯಾಪ್‌ಟಾಪ್ ಗೆಲ್ಲುವ ಅವಕಾಶವಿದೆ. ಅಲ್ಲದೆ ದಿನ ಪೂರ್ತಿ ಲಕ್ಕಿ ಡಿಪ್ ಮೂಲಕ ಆಕರ್ಷಕ ಉಡುಗೊರೆಗಳನ್ನು ನೀಡಲಾಗುತ್ತದೆ.

ಅಡ್ಮಿಷನ್‌ ಮಾಹಿತಿ

ಸ್ಟೇಟ್ ಬೋರ್ಡ್, ಸಿಬಿಎಸ್‌ಇ, ಐಸಿಎಸ್‌ಇ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು ವಿದ್ಯಾರ್ಥಿಗಳು ಮುಂದೆ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು? ಬೆಂಗಳೂರು ಸೇರಿದಂತೆ ಯಾವ್ಯಾವ ಜಿಲ್ಲೆಗಳಲ್ಲಿ ಉತ್ತಮವಾದ ಕಾಲೇಜು ಯಾವುದು? ಅಡ್ಮಿಷನ್ ಹೇಗೆ? ಸ್ಕಾಲರ್ ಶಿಪ್ ಪಡೆಯುವುದು ಹೇಗೆ? ಎಂಬುದು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಪ್ರಸಿದ್ಧ ಕಾಲೇಜುಗಳ ಸಲಹೆಗಾರರಿಂದ ಸಮಗ್ರ ಮಾಹಿತಿ ಪಡೆಯಬಹುದಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಮೇಕೇದಾಟು ಯೋಜನೆ ಅನುಷ್ಠಾನಕ್ಕೆ 30 ಮಂದಿ ತಂಡ ರಚಿಸಿದ ಸರ್ಕಾರ
ಗ್ರಾಪಂಗಳಲ್ಲಿ 10 ವರ್ಷಗಳಲ್ಲಿ ₹50000 ಕೋಟಿ ಅಕ್ರಮ: ಶಾಸಕ