2 ತಿಂಗಳ ಗೃಹಲಕ್ಷ್ಮೀ ಬಾಕಿ ಒಂದೇ ಬಾರಿ ಖಾತೆಗೆ ಜಮೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌

Published : Sep 17, 2024, 09:57 AM IST
Lakshmi Hebbalkar

ಸಾರಾಂಶ

 'ಗೃಹ ಲಕ್ಷ್ಮೀ' ಯೋಜನೆ ಎಂದಿಗೂ ಬಂದ್ ಆಗುವುದಿಲ್ಲ. ಇದು ನಿತ್ಯ, ಸತ್ಯ, ನಿರಂತರ ವಾಗಿದೆ. ಬಾಕಿ ಇರುವ 2 ತಿಂಗಳ ಹಣ ಒಂದೇ ಸಲ ಖಾತೆಗೆ ಜಮೆ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು : ಮಹಿಳೆಯರಿಗೆ ಪ್ರತಿ ತಿಂಗಳೂ 2 ಸಾವಿರ ರು. ಪಾವತಿಸುವ 'ಗೃಹ ಲಕ್ಷ್ಮೀ' ಯೋಜನೆ ಎಂದಿಗೂ ಬಂದ್ ಆಗುವುದಿಲ್ಲ. ಇದು ನಿತ್ಯ, ಸತ್ಯ, ನಿರಂತರ ವಾಗಿದೆ. ಬಾಕಿ ಇರುವ 2 ತಿಂಗಳ ಹಣ ಒಂದೇ ಸಲ ಖಾತೆಗೆ ಜಮೆ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆ ನಿತ್ಯ, ಸತ್ಯ, ನಿರಂತರವಾದುದು. ಕಳೆದ 2 ತಿಂಗಳಿನ ಬಾಕಿ ಹಣವನ್ನು ಒಂದೇ ಬಾರಿ ಖಾತೆಗೆ ಜಮಾ ಮಾಡಲಾಗುವುದು. ಲಿಂಗತ್ವ ಅಲ್ಪಸಂಖ್ಯಾತರಿಗೆ 3 ತಿಂಗಳ ಹಿಂದಷ್ಟೇ ಅರ್ಜಿ ಹಾಕಲು ಅವಕಾಶ ನೀಡಲಾಗಿತ್ತು. ಅವರಿಗೂ ಸಹ ಒಮ್ಮೆಲೇ ಹಣ ಪಾವತಿಯಾಗಲಿದೆ ಎಂದು ವಿವರಿಸಿದರು.

ಇದೇ ವೇಳೆ ಅಂಗನವಾಡಿಯಲ್ಲಿ ಅ.1ರಿಂದಲೇ ಗಟ್ಟಿ ಬೆಲ್ಲ ನೀಡಲಾಗುವುದು ಎಂದು ಹೇಳಿದರು

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಭಾರತೀಯರ ಕರೆತರಲು ವಿಶೇಷ ವಿಮಾನ ಮಾಡಿ: ಮೋದಿಗೆ ಸಿಎಂ ಸಿದ್ದು ಪತ್ರ
100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ