ಕೆ.ಆರ್‌. ಪುರ ಸಮೀಪ ರೈಲ್ವೆ ಪರ್ಯಾಯ ರಸ್ತೆಯಲ್ಲಿ 3 ತಿಂಗಳು ಸಂಚಾರ ನಿರ್ಬಂಧ

Published : Jun 15, 2025, 06:14 AM IST
Bengaluru traffic

ಸಾರಾಂಶ

ಸೇತುವೆ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ಕೆ.ಆರ್‌. ಪುರದ ಸಮೀಪ ರೈಲ್ವೆ ಪರ್ಯಾಯ ರಸ್ತೆಯಲ್ಲಿ 3 ತಿಂಗಳು ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಪೊಲೀಸರು ಕೋರಿದ್ದಾರೆ.

ಬೆಂಗಳೂರು : ಸೇತುವೆ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ಕೆ.ಆರ್‌. ಪುರದ ಸಮೀಪ ರೈಲ್ವೆ ಪರ್ಯಾಯ ರಸ್ತೆಯಲ್ಲಿ 3 ತಿಂಗಳು ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಪೊಲೀಸರು ಕೋರಿದ್ದಾರೆ.

*ವಾಹನ ಸಂಚಾರ ನಿರ್ಬಂಧಿಸಿ ರಸ್ತೆ*

-ಬೆನ್ನಿಗಾನಹಳ್ಳಿ (ಸದಾನಂದನಗರ ಬ್ರಿಡ್ಜ್) ಕಡೆಯಿಂದ ಹಳೆ ಮದ್ರಾಸ್ ರಸ್ತೆಗೆ ಸೇರುವ ಕೊಕೊ ಕೋಲಾ ಗೋಡಾನ್ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ರೀತಿಯ ವಾಹನಗಳ ಸಂಚಾರನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

*ಪರ್ಯಾಯ ಮಾರ್ಗಗಳು*

-ಹಳೆ ಮದ್ರಾಸ್ ರಸ್ತೆ ಬೆನ್ನಿಗಾನಹಳ್ಳಿ ರೈಲ್ವೆ ಬ್ರಿಡ್ಜ್ ಕಡೆಯಿಂದ ಕಸ್ತೂರಿನಗರ ಕಡೆಗೆ ಹೋಗುವ ವಾಹನ ಸವಾರರು ಡಿಓಟಿ (DOT) ಬೈಪಾಸ್ ಹೆಬ್ಬಾಳ ಮೂಲಕ ಕಸ್ತೂರಿನಗರ ಕಡೆಗೆ ಸಂಚರಿಸುವುದು.

-ಕಸ್ತೂರಿನಗರ ಕಡೆಯಿಂದ ಹಳೆ ಮದ್ರಾಸ್ ರಸ್ತೆ ಕಡೆಗೆ ತೆರಳುವ ವಾಹನ ಸವಾರರು ಸಂಚರಿಸಬಹುದು. ಸದಾನಂದನಗರ ಕಡೆಯಿಂದ ಎನ್.ಜಿ.ಇ.ಎಫ್ ಸಿಗ್ನಲ್ ಮೂಲಕ ಹಳೆ ಮದ್ರಾಸ್ ರಸ್ತೆ ಕಡೆಗೆ ಸಾಗಬೇಕಿದೆ.

PREV
Read more Articles on

Recommended Stories

ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಬ್ಯಾಲೆಟ್‌ ಬಳಕೆಗೆ ಸುಗ್ರೀವಾಜ್ಞೆ ಅಗತ್ಯವಿಲ್ಲ : ಸಂಪುಟದಲ್ಲಿ ಚರ್ಚೆ