5 ಸಾವಿರ ಮನೆಗೆಲಸದ ಕುಟುಂಬಗಳಿಗೆ ಆರೋಗ್ಯ ವಿಮೆ : ಡಾ. ದೇವಿ ಶೆಟ್ಟಿ

Published : Jun 01, 2025, 07:34 AM IST
Dr. Devi Shetty

ಸಾರಾಂಶ

ಕಡು ಬಡವರಿಗೂ ಸಮಗ್ರ ಆರೋಗ್ಯ ಸೇವೆ ಒದಗಿಸಲು ನಾರಾಯಣ ಹೃದಯಾಲಯ ಐದು ಸಾವಿರ ಮನೆಗೆಲಸ ಮಾಡುವ ಕುಟುಂಬಗಳಿಗೆ ಆರೋಗ್ಯ ವಿಮೆ

 ಬೆಂಗಳೂರು : ಕಡು ಬಡವರಿಗೂ ಸಮಗ್ರ ಆರೋಗ್ಯ ಸೇವೆ ಒದಗಿಸಲು ನಾರಾಯಣ ಹೃದಯಾಲಯ ಐದು ಸಾವಿರ ಮನೆಗೆಲಸ ಮಾಡುವ ಕುಟುಂಬಗಳಿಗೆ ಆರೋಗ್ಯ ವಿಮೆ ಒದಗಿಸಲು ಮುಂದಾಗಿದೆ ಎಂದು ನಾರಾಯಣ ಆರೋಗ್ಯ ಸಂಸ್ಥೆಯ ಅಧ್ಯಕ್ಷ ಡಾ. ದೇವಿ ಶೆಟ್ಟಿ ತಿಳಿಸಿದರು.

ಇನ್ಫೋಸಿಸ್ ಸಹ ಸಂಸ್ಥಾಪಕ ಕೆ.ದಿನೇಶ್ ಅವರ ಆಶ್ರಯ ಹಸ್ತ ಟ್ರಸ್ಟ್ (ಎಚ್‌ಟಿಯು) 25ನೇ ವಾರ್ಷಿಕೋತ್ಸವ ಪ್ರಯುಕ್ತ ದೇಶದ ಪ್ರಮುಖ 12 ಸ್ವಯಂ ಸೇವಾ ಸಂಸ್ಥೆಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾರಾಯಣ ಆರೋಗ್ಯ ಸಂಸ್ಥೆಗೆ ವಿಮಾ ಕಂಪೆನಿ ಆರಂಭಿಸಲು ಸರ್ಕಾರ ಅನುಮತಿ ನೀಡಿದ್ದು, ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಐದು ಸಾವಿರ ಮನೆಗೆಲಸದ ಕುಟುಂಬದವರಿಗೆ ಅತಿ ಕಡಿಮೆ ವಂತಿಕೆಯಲ್ಲಿ ಆರೋಗ್ಯ ವಿಮೆ ಒದಗಿಸಲು ತೀರ್ಮಾನಿಸಿದೆ ಎಂದರು.

ರಾಜ್ಯ ಸಭಾ ಸದಸ್ಯೆ, ಇನ್ಫೋಸಿಸ್‌ನ ಡಾ. ಸುಧಾಮೂರ್ತಿ, ಆಶ್ರಯ ಹಸ್ತ ಟ್ರಸ್ಟ್ ನ ವ್ಯವಸ್ಥಾಪಕ ಟ್ರಸ್ಟಿ ಕೆ.ದಿನೇಶ್ ಮಾತನಾಡಿದರು. ದಿವ್ಯ ದಿನೇಶ್, ದೀಕ್ಷಾ ದಿನೇಶ್, ಟ್ರಸ್ಟ್ ನ ಪದಾಧಿಕಾರಿಗಳು ಇದ್ದರು. 

PREV
Read more Articles on

Recommended Stories

ಮಕ್ಕಳ ಕುಬ್ಜ ಬೆಳವಣಿಗೆ: 2 ಜಿಲ್ಲೆಯ ಸ್ಥಿತಿ ಕಳವಳ
ಕೊಪ್ಪಳ ಜಿಲ್ಲೆಯಲ್ಲಿ ಮಣ್ಣು ತಿಂದು ರೈತ ಸಿಡಿಮಿಡಿ । ನಿಲ್ಲದ ರೈತರ ಯೂರಿಯಾ ಆಕ್ರೋಶ