ಐದು ದಿನಗಳ ಏರೋ ಇಂಡಿಯಾ-2025 ಯಶಸ್ವಿಯಾಗಿ, ಸುಸೂತ್ರವಾಗಿ ಮುಕ್ತಾಯಗೊಂಡಿರುವುದಕ್ಕೆ ರಾಜ್ಯ ಸರ್ಕಾರಕ್ಕೆ ರಕ್ಷಣಾ ಇಲಾಖೆ ಧನ್ಯವಾದ ತಿಳಿಸಿದೆ.
ಬೆಂಗಳೂರು : ಐದು ದಿನಗಳ ಏರೋ ಇಂಡಿಯಾ-2025 ಯಶಸ್ವಿಯಾಗಿ, ಸುಸೂತ್ರವಾಗಿ ಮುಕ್ತಾಯಗೊಂಡಿರುವುದಕ್ಕೆ ರಾಜ್ಯ ಸರ್ಕಾರಕ್ಕೆ ರಕ್ಷಣಾ ಇಲಾಖೆ ಧನ್ಯವಾದ ತಿಳಿಸಿದೆ.
ಶುಕ್ರವಾರ ಏರೋ ಇಂಡಿಯಾ-2025ಕ್ಕೆ ತೆರೆ ಬಿದ್ದಿದೆ. ಆದರೆ, 5 ದಿನಗಳ ಅಂತಾರಾಷ್ಟ್ರೀಯ ಕಾರ್ಯಕ್ರಮವನ್ನು ಸ್ಮರಣೀಯ ಮತ್ತು ಭರ್ಜರಿ ಯಶಸ್ಸು ಸಾಧಿಸಲು ಕಾರಣವಾಗಿರುವವರು, ಹಗಲು-ರಾತ್ರಿ ದಣಿವರಿಯದೆ ನಮ್ಮ ಜೊತೆ ಕೈ ಜೋಡಿಸಿರುವ ಅನೇಕ ಸಂಸ್ಥೆಗಳನ್ನು ನಾವು ಮರೆಯಲು ಹೇಗೆ ಸಾಧ್ಯ? ಸೇನಾಪಡೆಗಳು, ಪ್ಯಾರಾ ಮಿಲಿಟರಿ, ಪೊಲೀಸ್ ಇಲಾಖೆ, ರಕ್ಷಣಾ ಇಲಾಖೆಯ ಅಧಿಕಾರಿಗಳು, ಕರ್ನಾಟಕ ಸರ್ಕಾರ ಮತ್ತು ಜಿಲ್ಲಾಡಳಿತಗಳು ಒಟ್ಟಾಗಿ ಪರಸ್ಪರ ಸಂಯೋಜನೆಯಲ್ಲಿ ಉತ್ತಮವಾಗಿ ನಿಭಾಯಿಸಿ ಮೇಲ್ವಿಚಾರಣೆ ಮಾಡಿವೆ.
ಏರೋ ಇಂಡಿಯಾವನ್ನು ಸುಸೂತ್ರವಾಗಿ ನಡೆಸಲು ಯಲಹಂಕ ವಾಯುಪಡೆ ನೆಲೆಯ ಮೂಲೆ ಮೂಲೆಯಲ್ಲಿ ನೂರಾರು ಸಿಸಿಟಿವಿಗಳನ್ನು ಅಳವಡಿಸಲಾಗಿತ್ತು. ಕ್ಯಾಮೆರಾಗಳ ಲೈವ್ ಮೇಲ್ವಿಚಾರಣೆ ಮಾಡಲೆಂದು ಸುಮಾರು 100 ಟಿವಿ ಸ್ಕ್ರೀನ್‌ಗಳನ್ನು ಅಳವಡಿಸಿ, ದಿನದ 24 ತಾಸು ನಿಗಾ ಇಡಲು ಸಿಐಎಸ್‌ಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ವಿಶೇಷವಾಗಿ ಸ್ಥಾಪಿಸಿದ್ದ ಈ ಕಮಾಂಡ್ ಕಂಟ್ರೋಲ್ ಸೆಂಟರ್ ಜೊತೆಗೆ ಉತ್ತಮ ಸಂಯೋಜನೆ ಸಾಧಿಸಿ ಮೇಲ್ವಿಚಾರಣೆ ಮಾಡಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ರಕ್ಷಣಾ ಇಲಾಖೆ ಜಾಲತಾಣ ಎಕ್ಸ್‌ನಲ್ಲಿ ತಿಳಿಸಿದೆ.