ಬೆಂಗಳೂರು : ಸಣ್ಣ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿ ಕಿರುಕುಳ ನೀಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದ್ದರೂ ಇವರಲ್ಲಿ ಅನೇಕರು ಜಿಎಸ್‌ಟಿ ನೋಂದಣಿ ಮಾಡಿಕೊಳ್ಳದೆ ‘ಯುಪಿಐ’ ಮೂಲಕವೇ ಮಿತಿ ಮೀರಿ ಲಕ್ಷಾಂತರ ರು. ಸ್ವೀಕರಿಸಿರುವುದು ಪರಿಶೀಲನೆ ವೇಳೆ ಕಂಡು ಬಂದಿದೆ.
ಹೂವಿನ ವ್ಯಾಪಾರಿಯೊಬ್ಬರು ಹಣಕಾಸು ವರ್ಷವೊಂದರಲ್ಲಿ ಫೋನ್‌ಪೇ ಮತ್ತು ಪೇಟಿಎಂ ಮೂಲಕವೇ 53.87 ಲಕ್ಷ ರು. ಸ್ವೀಕರಿಸಿರುವುದು ಪತ್ತೆಯಾಗಿದೆ.
ಸದ್ಯ ಪೇಟಿಎಂ ಹಾಗೂ ಫೋನ್‌ಪೇ ಮೂಲಕ ಸ್ವೀಕರಿಸಿರುವ ಮೊತ್ತವನ್ನು ಮಾತ್ರ ವಾಣಿಜ್ಯ ತೆರಿಗೆ ಲೆಕ್ಕ ಹಾಕಿ ನೋಟಿಸ್ ನೀಡಿದೆ. ಜಿಎಸ್ಟಿ ನೋಂದಣಿ ಮಾಡಿಕೊಳ್ಳದೆ ಜಿಎಸ್ಟಿ ಮಿತಿಯನ್ನು ಮೀರಿ ಹಣ ಸ್ವೀಕರಿಸಿರುವ ಕಾರಣ ಸ್ವೀಕೃತವಾಗಿರುವ ಮೊತ್ತದ ಮೇಲೆ ಶೇ.18ರಷ್ಟು ಜಿಎಸ್‌ಟಿ ಜೊತೆಗೆ ದಂಡ ವಿಧಿಸಲಾಗಿದೆ. ಈ ಕುರಿತು ವ್ಯಾಪಾರಿಗಳು ಸೂಕ್ತ ವಿವರಣೆ ನೀಡಿದಲ್ಲಿ ಜಿಎಸ್‌ಟಿ ಮೊತ್ತ ಕಡಿಮೆಯಾಗಲಿದೆ.
ಅದೇ ರೀತಿ ಅನೇಕ ವ್ಯಾಪಾರಿಗಳಿಗೆ ವಹಿವಾಟಿನ ಮೊತ್ತ ಮಾತ್ರ ತಿಳಿಸಿ ಆ ಕುರಿತು ವಿವರಣೆ ನೀಡುವಂತೆ ನೋಟಿಸ್ ನೀಡಲಾಗಿದ್ದು, ನಿರ್ದಿಷ್ಟ ಜಿಎಸ್ಟಿ ಮೊತ್ತ ಮತ್ತು ದಂಡದ ಮೊತ್ತ ನಿಗದಿಪಡಿಸಿಲ್ಲ.
ಈಗ ನೋಟಿಸ್ ನೀಡಿರುವುದೆಲ್ಲ ಯುಪಿಐ ಮೂಲಕ ಸ್ವೀಕರಿಸಿದ ಮೊತ್ತದ ಆಧಾರದ ಮೇಲೆ. ಯುಪಿಐ ಹೊರತಾಗಿ ನಗದು ವ್ಯಾಪಾರವನ್ನು ಶೇ.20ರಿಂದ ಶೇ.30ರಷ್ಟು ಎಂದು ಪರಿಗಣಿಸಿದರೂ ವಹಿವಾಟಿನ ಮೊತ್ತ ಇನ್ನೂ ಹೆಚ್ಚಳವಾಗಲಿದೆ.
ನೋಂದಣಿಯಿಲ್ಲದೆ ಲಕ್ಷಾಂತರ ರು. ವಹಿವಾಟು:
ಜಿಗಣಿಯಲ್ಲಿ ಮಾಂಸದ ಅಂಗಡಿ ನಡೆಸುತ್ತಿರುವ ವ್ಯಾಪಾರಿಯೊಬ್ಬರು 4 ವರ್ಷಗಳಲ್ಲಿ ಫೋನ್‌ಪೇ, ಪೇಟಿಎಂ ಮೂಲಕವೇ 2 ಕೋಟಿ ರು.ಗೂ ಹೆಚ್ಚು ಹಣ ಸ್ವೀಕರಿಸಿದ್ದಾರೆ. 2021-22ರಲ್ಲಿ 31.73 ಲಕ್ಷ ರು., 2022-23ರಲ್ಲಿ 57.72 ಲಕ್ಷ ರು., 2023-24ರಲ್ಲಿ 53.58 ಲಕ್ಷ ರು. ಹಾಗೂ 2024-25ರಲ್ಲಿ 66.57 ಲಕ್ಷ ರು. ವಹಿವಾಟು ನಡೆಸಿದ್ದಾರೆ.
ಮಲ್ಲತ್ತಹಳ್ಳಿ ವಿಳಾಸ ಹೊಂದಿರುವ ಹೂವಿನ ವ್ಯಾಪಾರಿಯೊಬ್ಬರು 2023-24ನೇ ಹಣಕಾಸು ವರ್ಷವೊಂದರಲ್ಲಿ 53.87 ಲಕ್ಷ ರು. ಅನ್ನು ಫೋನ್‌ಪೇ ಮತ್ತು ಪೇಟಿಎಂ ಮೂಲಕ ಸ್ವೀಕರಿಸಿದ್ದಾರೆ. ಇವರು ನಗದು ರೂಪದಲ್ಲಿ ಸ್ವೀಕರಿಸಿರುವ ಹಣವನ್ನು ಪರಿಗಣಿಸಿಲ್ಲ.
ಅದೇ ರೀತಿ ಮತ್ತೊಬ್ಬ ವ್ಯಾಪಾರಿ, 2024-25ನೇ ಸಾಲಿನಲ್ಲಿ 55 ಲಕ್ಷ ರು., 2023-24ನೇ ಸಾಲಿನಲ್ಲಿ 53 ಲಕ್ಷ ರು. ಹಾಗೂ 2022-23ನೇ ಸಾಲಿನಲ್ಲಿ 29.63 ಲಕ್ಷ ರು. ವಹಿವಾಟು ನಡೆಸಿದ್ದಾರೆ.
ಕುಂದಾಪುರದ ವಿಳಾಸ ಹೊಂದಿರುವ ವ್ಯಾಪಾರಿಯೊಬ್ಬರು ಫೋನ್‌ಪೇ, ಪೇಟಿಎಂ ಮೂಲಕ 2021-22ರಲ್ಲಿ 12.61 ಲಕ್ಷ ರು., 2022-23ರಲ್ಲಿ 26.27 ಲಕ್ಷ ರು., 2023-24ರಲ್ಲಿ 40 ಲಕ್ಷ ರು. ಹಾಗೂ 2024-25ರಲ್ಲಿ 29 ಲಕ್ಷ ರು. ಸ್ವೀಕರಿಸಿದ್ದಾರೆ.
ಮತ್ತೊಬ್ಬ ವ್ಯಾಪಾರಿ 2021-22ರಲ್ಲಿ 25 ಲಕ್ಷ ರು., 2022-23ರಲ್ಲಿ 46.53 ಲಕ್ಷ ರು., 2023-24ರಲ್ಲಿ 57.40 ಲಕ್ಷ ರು. ಹಾಗೂ 2024-25ರಲ್ಲಿ 39.47 ಲಕ್ಷ ರು. ಸ್ವೀಕರಿಸಿದ್ದಾರೆ.
ನೋಟಿಸ್ ನೀಡಿರುವ ಅಂಕಿ ಅಂಶಗಳು
ಮಾಂಸದ ಅಂಗಡಿ, ಜಿಗಣಿ
ಹಣಕಾಸು ವರ್ಷ ಸ್ವೀಕರಿಸಿರುವ ಮೊತ್ತ (ಪೋನ್ ಪೇ, ಪೇಟಿಎಂ)
2021-22 31.73 ಲಕ್ಷ ರು.
2022-23 57.72 ಲಕ್ಷ ರು.
2023-24 53.58 ಲಕ್ಷ ರು.
2024-25 66.57 ಲಕ್ಷ ರು.
ಹೂವಿನ ವ್ಯಾಪಾರಿ, ಮಲ್ಲತ್ತಹಳ್ಳಿ
ಹಣಕಾಸು ವರ್ಷ ಸ್ವೀಕರಿಸಿರುವ ಮೊತ್ತ (ಪೋನ್ ಪೇ, ಪೇಟಿಎಂ)
2023-24 53.87 ಲಕ್ಷ ರು.
ಬೇಕರಿ/ಕಾಂಡಿಮೆಂಟ್ಸ್/ಸಣ್ಣ ವ್ಯಾಪಾರಿ
ಹಣಕಾಸು ವರ್ಷ ಸ್ವೀಕರಿಸಿರುವ ಮೊತ್ತ (ಪೋನ್ ಪೇ, ಪೇಟಿಎಂ)
2024-25 55 ಲಕ್ಷ ರು.
2023-24 53 ಲಕ್ಷ ರು.
2022-23 29.63 ಲಕ್ಷ ರು.
ಬೇಕರಿ/ಕಾಂಡಿಮೆಂಟ್ಸ್/ಸಣ್ಣ ವ್ಯಾಪಾರಿ
ಹಣಕಾಸು ವರ್ಷ ಸ್ವೀಕರಿಸಿರುವ ಮೊತ್ತ (ಪೋನ್ ಪೇ, ಪೇಟಿಎಂ)
2021-22 12.61 ಲಕ್ಷ ರು.
2022-23 26.27 ಲಕ್ಷ ರು.
2023-24 40 ಲಕ್ಷ ರು.
2024-25 29 ಲಕ್ಷ ರು.
ಬೇಕರಿ/ಕಾಂಡಿಮೆಂಟ್ಸ್/ಸಣ್ಣ ವ್ಯಾಪಾರಿ
ಹಣಕಾಸು ವರ್ಷ ಸ್ವೀಕರಿಸಿರುವ ಮೊತ್ತ (ಪೋನ್ ಪೇ, ಪೇಟಿಎಂ)
2021-22 25.28 ಲಕ್ಷ ರು.
2022-23 46.53 ಲಕ್ಷ ರು.
2023-24 57.40 ಲಕ್ಷ ರು.
2024-25 39.47 ಲಕ್ಷ ರು.