ಬೆಂಗಳೂರಿನ ಪಿಜಿಯಲ್ಲಿದ್ದೀರಾ - ಹಾಗಾದ್ರೆ ಗಮನಿಸಿ ಈ ಸುದ್ದಿ ನಿಮಗೆ

Published : Oct 25, 2026, 07:57 AM IST
Hostel

ಸಾರಾಂಶ

ನಗರದಲ್ಲಿ ಕಾರ್ಯಾಚರಿಸುತ್ತಿರುವ 5,480 ಪೇಯಿಂಗ್ ಗೆಸ್ಟ್ ಕೇಂದ್ರಗಳ (ಪಿ.ಜಿ) ಪೈಕಿ 3,597 (ಶೇ.66ರಷ್ಟು) ಅನಧಿಕೃತವಾಗಿವೆ ಎಂದು ಜಿಬಿಎ ಇತ್ತೀಚೆಗೆ ನಡೆಸಿದ ಪಿ.ಜಿ ಪರಿಶೀಲನೆಯ ಆಡಿಟ್ ವರದಿಯಲ್ಲಿ ಕಂಡು ಬಂದಿದೆ.

ಬೆಂಗಳೂರು : ನಗರದಲ್ಲಿ ಕಾರ್ಯಾಚರಿಸುತ್ತಿರುವ 5,480 ಪೇಯಿಂಗ್ ಗೆಸ್ಟ್ ಕೇಂದ್ರಗಳ (ಪಿ.ಜಿ) ಪೈಕಿ 3,597 (ಶೇ.66ರಷ್ಟು) ಅನಧಿಕೃತವಾಗಿವೆ ಎಂದು ಜಿಬಿಎ ಇತ್ತೀಚೆಗೆ ನಡೆಸಿದ ಪಿ.ಜಿ ಪರಿಶೀಲನೆಯ ಆಡಿಟ್ ವರದಿಯಲ್ಲಿ ಕಂಡು ಬಂದಿದೆ.

ಆರೋಗ್ಯ ಇಲಾಖೆ ಮತ್ತು ಪಾಲಿಕೆಯ ಎಂಜಿನಿಯರ್‌ಗಳು ನಗರದಲ್ಲಿನ ಪಿಜಿಗಳಿಗೆ ಭೇಟಿ

ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮತ್ತು ಪಾಲಿಕೆಯ ಎಂಜಿನಿಯರ್‌ಗಳು ನಗರದಲ್ಲಿನ ಪಿಜಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 2025ರ ನಗರಾಭಿವೃದ್ಧಿ ಇಲಾಖೆಯ ಸುತ್ತೋಲೆ ಪ್ರಕಾರ, 40 ಅಡಿಗಿಂತ ಕಡಿಮೆ ಅಗಲದ ರಸ್ತೆ, ಬಿಲ್ಡಿಂಗ್ ಪ್ಲಾನ್ ಉಲ್ಲಂಘನೆ, ಜನವಸತಿ ಪ್ರದೇಶಗಳಲ್ಲಿನ ಪಿ.ಜಿ.ಗಳು ಹಾಗೂ ಬೇಸ್ಮೆಂಟ್‌ನಲ್ಲಿ ಕಿಚನ್ ಹೊಂದಿರುವ ಪಿ.ಜಿ.ಗಳಿಗೆ ಟ್ರೇಡ್ ಲೈಸನ್ ನೀಡುವಂತಿಲ್ಲ. ಇಂತಹ ಪಿ.ಜಿ.ಗಳು ಅನಧಿಕೃತ ವರ್ಗಕ್ಕೆ ಸೇರುತ್ತವೆ.

ಜಿಬಿಎ ಆರೋಗ್ಯ ಇಲಾಖೆಯು ಪಿ.ಜಿ.ಗಳಿಗೆ ಪರವಾನಗಿ ನೀಡುತ್ತದೆ

ಜಿಬಿಎ ಆರೋಗ್ಯ ಇಲಾಖೆಯು ಪಿ.ಜಿ.ಗಳಿಗೆ ಪರವಾನಗಿ ನೀಡುತ್ತದೆ. ಅನಧಿಕೃತ ಪಿ.ಜಿ.ಗಳನ್ನು ನಡೆಸುತ್ತಿರುವವರಿಗೆ ಈಗಾಗಲೇ ನೋಟಿಸ್ ಜಾರಿಗೊಳಿಸಲಾಗಿದೆ. ಈ ಕುರಿತು ಜಿಬಿಎ ಮುಖ್ಯ ಆಯುಕ್ತರು, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ನಿಯಮ ಉಲ್ಲಂಘಿಸಿ ನಡೆಯುತ್ತಿರುವ ಪಿ.ಜಿ.ಗಳ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬುದರ ಕುರಿತು ಮುಂದಿನ ದಿನಗಳಲ್ಲಿ ತೀರ್ಮಾನಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ರಾಜ್ಯ ಮತ್ತು ಹೊರ ರಾಜ್ಯಗಳಿಂದ ಉದ್ಯೋಗ, ವ್ಯಾಸಂಗ ಮತ್ತಿತರ ಉದ್ದೇಶಗಳಿಗೆ ನಗರಕ್ಕೆ ಬಂದಿರುವ ಸುಮಾರು 50,000ಕ್ಕೂ ಹೆಚ್ಚು ಜನರು ಪಿ.ಜಿ.ಗಳಲ್ಲಿ ನೆಲೆಸಿದ್ದಾರೆ. ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾದರೆ ಜನರಿಗೆ ತೊಂದರೆಯಾಗುತ್ತದೆ. ಮತ್ತೊಂದೆಡೆ ಪೇಯಿಂಗ್ ಗೆಸ್ಟ್‌ಗಳು ವಾಣಿಜ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರೂ ವಸತಿ ವರ್ಗದಲ್ಲೇ ತೆರಿಗೆ ಪಾವತಿ ಮತ್ತು ವಿದ್ಯುತ್ ಬಿಲ್ ಪಾವತಿಸುತ್ತಿವೆ. ಇದರಿಂದ ಪಾಲಿಕೆ ಮತ್ತು ಬೆಸ್ಕಾಂಗೆ ಕೋಟ್ಯಂತರ ರು. ಆದಾಯ ನಷ್ಟವಾಗುತ್ತಿದೆ ಎಂದು ಜಿಬಿಎ ಅಧಿಕಾರಿಗಳು ಹೇಳಿದ್ದಾರೆ.

ನಿಯಮ ಉಲ್ಲಂಘಿಸಿ ಕಾರ್ಯಾಚರಿಸುತ್ತಿರುವ ಪೇಯಿಂಗ್ ಗೆಸ್ಟ್‌ಗಳ ವಿರುದ್ಧ ಕ್ರಮ ಕೋರಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿತ್ತು. ಈ ದೂರು ಆಧಾರಿಸಿ ಬೇರೆ ಬೇರೆ ಠಾಣೆಗಳಲ್ಲಿ ಎಫ್‌ಐಆರ್ ದಾಖಲಾಗಿದ್ದವು. ಎಫ್‌ಐಆರ್ ಪ್ರಶ್ನಿಸಿ ಪಿ.ಜಿ ಮಾಲೀಕರು ಹೈಕೋರ್ಟ್ ಮೊರೆ ಹೋಗಿದ್ದರು. ಈ ವೇಳೆ ಪಿ.ಜಿಗಳ ಸ್ಥಿತಿ ಗತಿ ಪರಿಶೀಲಿಸುವಂತೆ ಹೈಕೋರ್ಟ್ ಸೂಚಿಸಿತ್ತು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಕೆಪಿಎಸ್ಸಿ ಜ್ಞಾನೇಂದ್ರ ವಿರುದ್ಧದ ಚಾರ್ಜ್‌ಶೀಟ್‌ಗೆ ಸಿಎಂ ಸಮ್ಮತಿ
ರಾಜವೈಭವದ ಗೋಲ್ಡನ್‌ ಚಾರಿಯಟ್‌ಗೆ ಚಾಲನೆ - ಮೊದಲ ಪ್ರಯಾಣದ ಟಿಕೆಟ್ ಪೂರ್ಣ ಮಾರಾಟ