ಅಕ್ರಮವಾಗಿ ಬಾತುಕೋಳಿ ಸಾಕಣೆ: ನಟ ದರ್ಶನ್‌ಗೆ ಕೋರ್ಟ್‌ ಸಮನ್ಸ್‌

ನಟ ದರ್ಶನ್ ಫಾರಂ ಹೌಸ್‌ನಲ್ಲಿ ವಿದೇಶಿ ಬಾತು ಕೋಳಿ ಸಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಿ.ನರಸೀಪುರ ನ್ಯಾಯಾಲಯದಿಂದ ನಟ ದರ್ಶನ್, ಪತ್ನಿ ವಿಜಯಲಕ್ಷ್ಮೀಗೆ ಸಮನ್ಸ್ ಜಾರಿ ಮಾಡಲಾಗಿದೆ.

Follow Us

 ಟಿ.ನರಸೀಪುರ (ಮೈಸೂರು): ನಟ ದರ್ಶನ್ ಫಾರಂ ಹೌಸ್‌ನಲ್ಲಿ ವಿದೇಶಿ ಬಾತು ಕೋಳಿ ಸಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಿ.ನರಸೀಪುರ ನ್ಯಾಯಾಲಯದಿಂದ ನಟ ದರ್ಶನ್, ಪತ್ನಿ ವಿಜಯಲಕ್ಷ್ಮೀಗೆ ಸಮನ್ಸ್ ಜಾರಿ ಮಾಡಲಾಗಿದೆ.

ಈ ಸಂಬಂಧ ಜುಲೈ 4ರಂದು ವಿಚಾರಣೆಗೆ ಹಾಜರಾಗಲು ಸಮಸ್ಸ್ ಜಾರಿಯಾಗಿದೆ. ಮಂಗೋಲಿಯಾ, ರಷ್ಯಾದಲ್ಲಿ ಕಾಣಸಿಗುವ ಅಪರೂಪದ ಬಾರ್‌ ಹೆಡೆಡ್‌ ಗೂಸ್‌ ಎಂಬ ವಿಶಿಷ್ಟ ಪ್ರಭೇದದ ನಾಲ್ಕು ಬಾತುಕೋಳಿಗಳನ್ನು ತಿ.ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ಸಾಕಿರುವುದಾಗಿ 2023ರಲ್ಲಿ ದರ್ಶನ್‌ ಯುಟ್ಯೂಬ್‌ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆ ಬಳಿಕ ಜಿಲ್ಲೆಯ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದರು. 

ಆ ವೇಳೆ ವಿದೇಶಿ ಪ್ರಭೇದದ ಬಾತು ಕೋಳಿಗಳನ್ನು ವಶಕ್ಕೆ ಪಡೆದಿದ್ದರು. ಇವುಗಳನ್ನು ಸಾಕುವುದು ವನ್ಯಜೀವಿ ಸಂರಕ್ಷಣೆಯ ಕಾಯ್ದೆಯಡಿ ಅಪರಾಧವಾಗಿದೆ. ದರ್ಶನ್ ವಿರುದ್ಧ ನಿಷೇಧಿತ ವನ್ಯ ಪಕ್ಷಿಗಳ ಸಾಕಣೆಗಾಗಿ ಪ್ರಕರಣ ದಾಖಲಾಗಿ, ಚಾರ್ಜ್‌ಶೀಟ್‌ ಸಲ್ಲಿಕೆಯಾಗಿತ್ತು. ಇದೀಗ ಪ್ರಕರಣದ ವಿಚಾರಣೆಗೆ ನ್ಯಾಯಾಲಯ ಸಮನ್ಸ್ ನೀಡಿದೆ.

Read more Articles on