ಎಚ್‌ಎಎಲ್‌-ಐಐಐಟಿ ಧಾರವಾಡ ನಡುವೆ ಒಪ್ಪಂದ - ಸಂಶೋಧನೆ, ತಾಂತ್ರಿಕ ಶಿಕ್ಷಣಕ್ಕಾಗಿ ಜಂಟಿ ಸಹಭಾಗಿತ್ವ ಒಡಂಬಡಿಕೆ

Published : Feb 15, 2025, 09:52 AM IST
Mumbai Airport

ಸಾರಾಂಶ

ಎಚ್‌ಎಎಲ್‌ನ ತರಬೇತಿ ನೋಡಲ್ ಏಜೆನ್ಸಿಯಾಗಿರುವ ಎಚ್‌ಎಎಲ್‌ ಮ್ಯಾನೇಜ್‌ಮೆಂಟ್ ಅಕಾಡೆಮಿ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಷನ್ ಟೆಕ್ನಾಲಜಿ-ಧಾರವಾಡ (ಐಐಐಟಿ) ಜಂಟಿಯಾಗಿ ಸುಧಾರಿತ ತಂತ್ರಜ್ಞಾನಗಳ ಮೇಲೆ ಕಾರ್ಯ ನಿರ್ವಹಿಸಲು ಜಂಟಿ ಸಹಭಾಗಿತ್ವ ಒಪ್ಪಂದ ಮಾಡಿಕೊಂಡಿವೆ.

 ಬೆಂಗಳೂರು : ಎಚ್‌ಎಎಲ್‌ನ ತರಬೇತಿ ನೋಡಲ್ ಏಜೆನ್ಸಿಯಾಗಿರುವ ಎಚ್‌ಎಎಲ್‌ ಮ್ಯಾನೇಜ್‌ಮೆಂಟ್ ಅಕಾಡೆಮಿ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಷನ್ ಟೆಕ್ನಾಲಜಿ-ಧಾರವಾಡ (ಐಐಐಟಿ) ಜಂಟಿಯಾಗಿ ಸುಧಾರಿತ ತಂತ್ರಜ್ಞಾನಗಳ ಮೇಲೆ ಕಾರ್ಯ ನಿರ್ವಹಿಸಲು ಜಂಟಿ ಸಹಭಾಗಿತ್ವ ಒಪ್ಪಂದ ಮಾಡಿಕೊಂಡಿವೆ.

ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ, ಡೆಟಾ ಸೈನ್ಸ್, ರೊಬೋಟಿಕ್ಸ್, ಎಆರ್‌/ವಿಆರ್, ಡಿಜಿಟಲ್ ಮ್ಯಾನ್ಯುಫ್ಯಾಕ್ಟರಿಂಗ್, ಜಂಟಿ ಸಂಶೋಧನೆ, ತರಬೇತಿ, ಪ್ರಶಿಕ್ಷಣ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಪಾಲುದಾರಿಕೆಗೆ ಈ ಒಪ್ಪಂದ ಒತ್ತು ನೀಡುತ್ತದೆ.

ಎಚ್‌ಎಎಲ್‌ನ ಅಧಿಕಾರಿಗಳು ಐಐಐಟಿಯಲ್ಲಿ ಉನ್ನತ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ. ಮತ್ತೊಂದೆಡೆ ಐಐಐಟಿ ವಿದ್ಯಾರ್ಥಿಗಳು ಎಚ್‌ಎಎಲ್‌ನ ವಿವಿಧ ವಿಭಾಗಗಳಲ್ಲಿ ಪ್ರಶಿಕ್ಷಣ ಪಡೆಯಲಿದ್ದಾರೆ. ಜಂಟಿ ಕಾರ್ಯಾಗಾರಗಳ ಆಯೋಜನೆ, ತಾಂತ್ರಿಕ ಪುಸ್ತಕಗಳ ಪ್ರಕಟಣೆ ಮತ್ತು ಬೋಧಕ ಸಿಬ್ಬಂದಿ ವಿನಿಮಯ ಯೋಜನೆಗೆ ಅವಕಾಶ ಕಲ್ಪಿಸಲಾಗುತ್ತದೆ. ಒಪ್ಪಂದದಿಂದ ಶಿಕ್ಷಣ ಸಂಸ್ಥೆ ಮತ್ತು ಉದ್ಯಮದ ನಡುವೆ ಮಾಹಿತಿ ಹಂಚಿಕೆಯಾಗಿ ಎರಡಕ್ಕೂ ಅನುಕೂಲವಾಗುತ್ತದೆ ಎಂದು ಎಚ್‌ಎಎಲ್ ತಿಳಿಸಿದೆ.

PREV

Recommended Stories

ಲೋಕಾ ಎಸ್ಪಿ ಬದ್ರಿನಾಥ್‌ ಸೇರಿ 19 ಪೊಲೀಸರಿಗೆ ರಾಷ್ಟ್ರ ಪದಕ
ಕೊಲೆ ಆರೋಪಿ ದರ್ಶನ್‌ಗೆ ತಪ್ಪದ ದಯಾನಂದ್ ಕಂಟಕ