ಏರ್‌ಶೋ: ಸಂಚಾರ ವ್ಯವಸ್ಥೆ ಬದಲಾವಣೆ ಗಣ್ಯಾತಿಗಣ್ಯರು ಸಂಚರಿಸುವ ಕಾರಣದಿಂದ ಸಂಚಾರ ಬದಲು

Published : Feb 06, 2025, 06:41 AM IST
air show of air force in bhopal

ಸಾರಾಂಶ

ವೈಮಾನಿಕ ಪ್ರದರ್ಶನ ಹಿನ್ನೆಲೆಯಲ್ಲಿ ಯಲಹಂಕ ವಾಯು ಸೇನಾ ನೆಲೆ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಸಂಚಾರ ವಿಭಾಗದ ಪೊಲೀಸರು ಮನವಿ ಮಾಡಿದ್ದಾರೆ.

  ಬೆಂಗಳೂರು : ವೈಮಾನಿಕ ಪ್ರದರ್ಶನ ಹಿನ್ನೆಲೆಯಲ್ಲಿ ಯಲಹಂಕ ವಾಯು ಸೇನಾ ನೆಲೆ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಸಂಚಾರ ವಿಭಾಗದ ಪೊಲೀಸರು ಮನವಿ ಮಾಡಿದ್ದಾರೆ.

ಯಲಹಂಕ ವಾಯು ಸೇನಾ ನೆಲೆಯಲ್ಲಿ ಫೆ.10 ರಿಂದ 14ರವರೆಗೆ ವೈಮಾನಿಕ ಪ್ರದರ್ಶನ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಲವಾರು ಗಣ್ಯರು ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮ ನಡೆಯುವ ಸ್ಥಳವು ಯಲಹಂಕ ವಾಯುಸೇನಾ ನೆಲೆಯು ಬೆಂಗಳೂರು-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ-44 (ಅಂತಾರಾಷ್ಟ್ರೀಯ ಏರ್ ಪೋರ್ಟ್ ರಸ್ತೆ) ಹೊಂದಿಕೊಂಡಿದ್ದು, ಆ ರಸ್ತೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತುರ್ತು ವಾಹನಗಳು ಸಂಚರಿಸುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವೀಕ್ಷಣೆಗೆ ಬರುವವರಿಗೆ ಸೂಚನೆ

1.ವೀಕ್ಷಣೆಗೆ ಬರುವವರು ತಮಗೆ ನೀಡಲಾಗಿರುವ ಟಿಕೆಟ್/ಪಾಸ್‌ನ ಕ್ಯೂಆರ್‌ ಕೋಡನ್ನು ಮೊದಲೇ ಸ್ಕ್ಯಾನ್ ಮಾಡಿ ಯಾವ ಗೇಟ್‌ನಿಂದ ಪ್ರವೇಶಿಸಬೇಕೆಂಬುದನ್ನು ಮೊದಲೇ ನಿರ್ಧರಿಸಿಕೊಂಡು ಪ್ರಯಾಣಿಸಿದ್ದಲ್ಲಿ ಅನವಶ್ಯಕ. ವಿಳಂಬಕ್ಕೆ ಅವಕಾಶವಿರುವುದಿಲ್ಲ.

2.ವೀಕ್ಷಣೆಗೆ ಬರುವವರು ಉಚಿತ ವಾಹನ ನಿಲುಗಡೆ ಲಭ್ಯವಿರುವ ಜಿ.ಕೆ.ವಿ.ಕೆ. ಆವರಣವನ್ನು ಮತ್ತು ಶಟಲ್

ಬಸ್ ಸೇವೆಯನ್ನು ಉಪಯೋಗಿಸಲು ಕೋರಿದೆ.

1.ಏಕಮುಖ ಸಂಚಾರ ವ್ಯವಸ್ಥೆ

ನಿಟ್ಟೆ ಮೀನಾಕ್ಷಿ ಕಾಲೇಜ್ ರಸ್ತೆ (ಪೂರ್ವದಿಕ್ಕಿನಿಂದ ಪಶ್ಚಿಮ ದಿಕ್ಕಿನ ಕಡೆಗೆ)

ಬಾಗಲೂರು ಮುಖ್ಯರಸ್ತೆ: (ಪಶ್ಚಿಮದಿಂದ ಪೂರ್ವದಿಕ್ಕಿನ ಕಡೆಗೆ)

2.ಏರೋ ಇಂಡಿಯಾ ಪಾರ್ಕಿಂಗ್‌

*ಉಚಿತ ಪಾರ್ಕಿಂಗ್: ಜಿಕೆವಿಕೆ ಕ್ಯಾಂಪಸ್

*ಪಾವತಿ ಪಾರ್ಕಿಂಗ್‌ಗಳು

-ಅಡ್ವಾ ಪಾರ್ಕಿಂಗ್‌: ಗೇಟ್ ನಂ. 08 & 09 ರ ಮುಖಾಂತರ ಪ್ರವೇಶ

-ಡೊಮೆಸ್ಟಿಕ್ ಪಾರ್ಕಿಂಗ್: ಗೇಟ್ ನಂ. 05ರ ಮುಖಾಂತರ ಪ್ರವೇಶ

*ಸೂಚಿಸಲಾದ ಮಾರ್ಗಗಳು

-ಬೆಂಗಳೂರು ಪೂರ್ವ ದಿಕ್ಕಿನಿಂದ ಆಡ್ವಾ ಪಾರ್ಕಿಂಗ್ ಕಡೆ ಬರುವವರಿಗೆ: ಕೆ.ಆ‌ರ್.ಪುರ ನಾಗವಾರ ಜಂಕ್ಷನ್- ಥಣಿಸಂದ್ರ- ನಾರಾಯಣಪುರ ಕ್ರಾಸ್‌ ಮೂಲಕ ಬೈಪಾಸ್ ಯಲಹಂಕ ಕಾಫಿ ಡೇ ಫೋರ್ಡ್ ಷೋ ಹಾದು ಬರಬೇಕು.

-ಬೆಂಗಳೂರು ಪಶ್ಚಿಮ ದಿಕ್ಕಿನಿಂದ ಬರುವವರಿಗೆ: ಗೊರಗುಂಟೆಪಾಳ್ಯ ಬಿ.ಇ.ಎಲ್ ವೃತ್ತ ಗಂಗಮ್ಮ ವೃತ್ತ -ಎಂ.ಎಸ್ ಪಾಳ್ಯ ಸರ್ಕಲ್-ಉನ್ನಿಕೃಷ್ಣನ್ ರಸ್ತೆ ಮದರ್ ಡೈರಿ ಜಂಕ್ಷನ್ ಉನ್ನಿ ಕೃಷ್ಣನ್ ಜಂಕ್ಷನ್.

-ಬೆಂಗಳೂರು ಪಶ್ಚಿಮ ದಿಕ್ಕಿನಿಂದ ಬರುವವರಿಗೆ: ಡೊಮೆಸ್ಟಿಕ್ ಪಾರ್ಕಿಂಗ್ ಕಡೆಗೆ ಬರುವವರಿಗೆ ಗೊರಗುಂಟೆಪಾಳ್ಯ - ಬಿ.ಇ.ಎಲ್ ವೃತ್ತ ಗಂಗಮ್ಮ ವೃತ್ತ – ಎಂ.ಎಸ್ ಪಾಳ್ಯ ಸರ್ಕಲ್-ಉನ್ನಿಕೃಷ್ಣನ್ ರಸ್ತೆ- ಮದರ್ ಡೈರಿ ಜಂಕ್ಷನ್ ದೊಡ್ಡಬಳ್ಳಾಪುರ ರಸ್ತೆ ರಾಜಾನುಕುಂಟೆ ಎಂ.ವಿ.ಐ.ಟಿ ಕ್ರಾಸ್.

-ಬೆಂಗಳೂರು ದಕ್ಷಿಣ ದಿಕ್ಕಿನಿಂದ ಬರುವವರಿಗೆ: ಮೈಸೂರು ರಸ್ತೆ-ನಾಯಂಡನಹಳ್ಳಿ-ಚಂದ್ರಾ ಲೇಔಟ್-ಗೊರಗುಂಟೆಪಾಳ್ಯ-ಬಿ.ಇ.ಎಲ್ ವೃತ್ತ-ಗಂಗಮ್ಮ ವೃತ್ತ -ಎಂ.ಎಸ್ ಪಾಳ್ಯ ಸರ್ಕಲ್-ಮದರ್ ಡೈರಿ ಜಂಕ್ಷನ್ ಉನ್ನಿ ಕೃಷ್ಣನ್ ಜಂಕ್ಷನ್.

3.ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIAL) ಕಡೆಗೆ ಪರ್ಯಾಯ ಮಾರ್ಗ

*ಬೆಂಗಳೂರು ಪೂರ್ವ: ಕೆ.ಆರ್.ಪುರಂ-ಹೆಣ್ಣೂರು ಕ್ರಾಸ್ -ಕೊತ್ತನೂರು - ಗುಬ್ಬಿ ಕ್ರಾಸ್ ಕಣ್ಣೂರು- ಬಾಗಲೂರು.

*ಬೆಂಗಳೂರು ಪಶ್ಚಿಮ- ಗೊರಗುಂಟೆಪಾಳ್ಯ- ಬಿ.ಇ.ಎಲ್ ವೃತ್ತ - ಗಂಗಮ್ಮ ವೃತ್ತ ಎಂ.ಎಸ್ ಪಾಳ್ಯ ಸರ್ಕಲ್.

ಮದರ್ ಡೈರಿ ಮೂಲಕ ಸಾಗಬೇಕು.

*ಬೆಂಗಳೂರು ದಕ್ಷಿಣ : ಮೈಸೂರು ರಸ್ತೆ- ನಾಯಂಡನಹಳ್ಳಿ- ಚಂದ್ರಾ ಲೇಔಟ್ - ಗೊರಗುಂಟೆಪಾಳ್ಯ-ಬಿಇಎಲ್ ವೃತ್ತ -ಗಂಗಮ್ಮ ವೃತ್ತ -ಎಂ.ಎಸ್ ಪಾಳ್ಯ ಸರ್ಕಲ್- ಮದರ್‌ಡೈರಿ ಜಂಕ್ಷನ್ ಉನ್ನಿಕೃಷ್ಣನ್ ಜಂಕ್ಷನ್ ಮೂಲಕ ಹೋಗಬೇಕು.

4.ಲಾರಿ, ಟ್ರಕ್, ಖಾಸಗಿ ಬಸ್ಸುಗಳು ಹಾಗೂ ಇತರೇ ಭಾರೀ ಸರಕು ಸಾಗಾಣಿಕೆಯ ವಾಹನಗಳು

ಸಂಚಾರ ನಿರ್ಬಂಧಿಸಿರುವ ರಸ್ತೆಗಳ ವಿವರ:

ಬೆಂಗಳೂರು-ಬಳ್ಳಾರಿ ರಸ್ತೆಯಲ್ಲಿ, ಮೇದ್ರಿ ವೃತ್ತದಿಂದ-ಎಂಎಐಟಿ ಕ್ರಾಸ್ ವರೆಗೆ ಮತ್ತು ಎಂ.ವಿ.ಐ.ಟಿ. ಕ್ರಾಸ್ ನಿಂದ ಮೇಖ ವೃತ್ತದ ವರೆಗೆ, ಗೊರಗುಂಟೆ ಪಾಳ್ಯದಿಂದ ಹೆಬ್ಬಾಳ ಮಾರ್ಗವಾಗಿ ಹೆಣ್ಣೂರು ಕ್ರಾಸ್ ವರೆಗೆ, ನಾಗವಾರ ಜಂಕ್ಷನ್‌ನಿಂದ ಥಣಿಸಂದ್ರ ಮುಖ್ಯ ರಸ್ತೆಯ ಮಾರ್ಗವಾಗಿ ಬಾಗಲೂರು ವ ರೇವಾ ಕಾಲೇಜ್ ಜಂಕ್ಷನ್, ಹೆಸರಘಟ್ಟ ಮತ್ತು ಚಿಕ್ಕಬಾಣಾವರ ಕಡೆಯಿಂದ ಬೆಂಗಳೂರು ನಗರದ ಕಡೆಗೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

5.ವಾಹನ ನಿಲುಗಡೆ

ವಾಹನ ನಿಲುಗಡೆ ನಿಷೇಧ ( ಎಲ್ಲಾ ಮಾದರಿಯ ವಾಹನಗಳಿಗೆ ರಸ್ತೆಯ ಎರಡೂ ಬದಿಗಳಲ್ಲಿ):

ನಾಗೇನಹಳ್ಳಿ ಗೇಟ್‌ನಿಂದ ಗಂಟಿಗಾನಹಳ್ಳಿ ಮಾರ್ಗವಾಗಿ ಬೆಂಗಳೂರು-ಬಳ್ಳಾರಿ ರಸ್ತೆಯನ್ನು ಸೇರುವ ಫೋರ್ಡ್ ಷೋರೂಂ ಕ್ರಾಸ್‌ವರೆಗೆ (ಬಿಬಿ ರಸ್ತೆ) ವರೆಗೆ, ಬೆಂಗಳೂರು-ಬಳ್ಳಾರಿ ರಸ್ತೆಯ ಮೇಖ್ರಿ ಸರ್ಕಲ್ ನಿಂದ ದೇವನಹಳ್ಳಿ ವರೆಗೆ,

ಬಾಗಲೂರು ಕ್ರಾಸ್ ಜಂಕ್ಷನ್‌ನಿಂದ ಬಾಗಲೂರು ಮುಖ್ಯ ರಸ್ತೆಯ ಮಾರ್ಗವಾಗಿ ಸಾತನೂರುವರೆಗೆ, ನಾಗವಾರ ಜಂಕ್ಷನ್‌ನಿಂದ ಥಣಿಸಂದ್ರ ಮುಖ್ಯರಸ್ತೆಯ ಮಾರ್ಗವಾಗಿ ರೇವಾ ಕಾಲೇಜ್ ಜಂಕ್ಷನ್ ವರೆಗೆ, ಎಫ್‌ಟಿಐ ಜಂಕ್ಷನ್‌ನಿಂದ ಹೆಣ್ಣೂರು ಕ್ರಾಸ್ ಜಂಕ್ಷನ್‌ವರೆಗೆ, ಹೆಣ್ಣೂರು ಕ್ರಾಸ್‌ನಿಂದ ಬೇಗೂರು ಬ್ಯಾಕ್ ಗೇಟ್ ವರೆಗೆ, ನಾಗೇನಹಳ್ಳಿ ಗೇಟ್ ಜಂಕ್ಷನ್ ನಿಂದ ಯಲಹಂಕ ಸರ್ಕಲ್‌ವರೆಗೆ, ಎಂವಿಐಟಿ ಕ್ರಾಸ್‌ನಿಂದ ನಾರಾಯಣಪುರ ರೈಲ್ವೇ ಕ್ರಾಸ್‌ವರೆಗೆ, ಕೋಗಿಲು ಕ್ರಾಸ್ ಜಂಕ್ಷನ್‌ನಿಂದ ಕಣ್ಣೂರು ಜಂಕ್ಷನ್ ವರೆಗೆ. ಮತ್ತಿಕೆರೆ ಕ್ರಾಸ್‌ನಿಂದ ದೊಡ್ಡಬಳ್ಳಾಪುರ ಮುಖ್ಯರಸ್ತೆಯ ಉನ್ನಿಕೃಷ್ಣನ್ ಜಂಕ್ಷನ್ ವರೆಗೆ. ಜಾಲಹಳ್ಳಿ ಕ್ರಾಸ್ ಜಂಕ್ಷನ್ ನಿಂದ ಗಂಗಮ್ಮ ಸರ್ಕಲ್ ಜಂಕ್ಷನ್ ವರೆಗೆ ನಿಲುಗಡೆ ನಿಷೇಧಿಸಲಾಗಿದೆ.

PREV

Recommended Stories

30X40 ಒಳಗಿರುವ ಮನೆಗಳಿಗೆ ಓಸಿ ವಿನಾಯಿತಿ
ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್ಸೆಸ್‌ ಚಟುವಟಿಕೆಗಳಿಗೆ ಸರ್ಕಾರ ಕಡಿವಾಣ