ಬಿಎಂಟಿಸಿ: ಒಂದೇ ದಿನ ಯುಪಿಐ ಮೂಲಕ 1 ಕೋಟಿ ರು. ಆದಾಯ : ಪೇಮೆಂಟ್‌ ಆ್ಯಪ್‌ ಮೊರೆ ಹೋದ ನಿಗಮ

Published : Feb 06, 2025, 06:38 AM IST
SN bmtc

ಸಾರಾಂಶ

ಬಿಎಂಟಿಸಿ ಬಸ್‌ ಪ್ರಯಾಣಿಕರು ಆನ್‌ಲೈನ್‌ ಪೇಮೆಂಟ್‌ ಆ್ಯಪ್‌ಗಳ ಮೂಲಕ ಟಿಕೆಟ್‌ ದರ ಪಾವತಿಸುವ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದ್ದು, ಫೆ.3ರಂದು ಒಂದೇ ದಿನ ₹1.03 ಕೋಟಿಗೆ ತಲುಪಿದೆ.

  ಬೆಂಗಳೂರು : ಬಿಎಂಟಿಸಿ ಬಸ್‌ ಪ್ರಯಾಣಿಕರು ಆನ್‌ಲೈನ್‌ ಪೇಮೆಂಟ್‌ ಆ್ಯಪ್‌ಗಳ ಮೂಲಕ ಟಿಕೆಟ್‌ ದರ ಪಾವತಿಸುವ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದ್ದು, ಫೆ.3ರಂದು ಒಂದೇ ದಿನ ₹1.03 ಕೋಟಿಗೆ ತಲುಪಿದೆ.

ಚಿಲ್ಲರೆ ಸಮಸ್ಯೆ ನಿವಾರಣೆ ಹಾಗೂ ನಗದು ರಹಿತ ವ್ಯವಹಾರವನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಹಲವು ತಿಂಗಳಿನಿಂದ ಬಿಎಂಟಿಸಿ ಬಸ್‌ಗಳಲ್ಲಿ ಆನ್‌ಲೈನ್‌ ಪೇಮೆಂಟ್‌ ಆ್ಯಪ್‌ಗಳ ಮೂಲಕ ಪ್ರಯಾಣ ದರ ಪಾವತಿಸುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಕಳೆದ ಡಿಸೆಂಬರ್‌ವರೆಗೆ ₹40 ಲಕ್ಷ ಇದ್ದ ಆನ್‌ಲೈನ್‌ ಪೇಮೆಂಟ್‌ ಫೆ.3ರಂದು ₹1 ಕೋಟಿ ದಾಟಿದೆ. ಜನವರಿಯಿಂದ ಆನ್‌ಲೈನ್‌ ಪೇಮೆಂಟ್‌ ಆ್ಯಪ್ ಮೂಲಕ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಪ್ರಯಾಣದರ ಪಾವತಿಸುವ ಪ್ರಮಾಣ ಹೆಚ್ಚಳವಾಗಿದೆ. ಜ.9ರಂದು ₹56.6 ಲಕ್ಷಗಳಿದ್ದ ಯುಪಿಐ ವಹಿವಾಟು, ಜ.13ರಂದು ₹60.05 ಲಕ್ಷ, ಜ.20ರಂದು ₹80.10 ಲಕ್ಷ, ಜ.27ರಂದು ₹90.9 ಲಕ್ಷಕ್ಕೆ ತಲುಪಿತ್ತು. ಫೆ.3ರಂದು ಒಂದೇ ದಿನ ₹1.03 ಕೋಟಿಗೆ ಹೆಚ್ಚಳವಾಗಿದೆ.

2023ರಲ್ಲಿ ಒಟ್ಟು ₹48 ಕೋಟಿ ಆನ್‌ಲೈನ್‌ ಪೇಮೆಂಟ್‌ ಆ್ಯಪ್‌ಗಳ ಪ್ರಯಾಣ ದರ ಪಾವತಿ ಮೂಲಕ ಸಂಗ್ರಹವಾಗಿದ್ದು, ಒಟ್ಟಾರೆ ಆದಾಯದ ಶೇ.10ರಷ್ಟಾಗಿದೆ. 2024ರಲ್ಲಿ ₹100 ಕೋಟಿ ತಲುಪಿತ್ತು. 2025ರ ಜನವರಿ ತಿಂಗಳಲ್ಲಿಯೇ ₹19.66 ಕೋಟಿಗಳನ್ನು ಪ್ರಯಾಣಿಕರು ಆನ್‌ಲೈನ್‌ ಪೇಮೆಂಟ್‌ ಆ್ಯಪ್‌ಗಳ ಮೂಲಕ ಪಾವತಿಸಿದ್ದಾರೆ.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ