ಸ್ವತಂತ್ರ ಪತ್ರಿಕಾ ವ್ಯವಸ್ಥೆಯೇ ಒಪ್ಪಿತ : ಪರಂ

Published : Nov 17, 2026, 11:20 AM IST
G Parameshwara

ಸಾರಾಂಶ

ಪತ್ರಿಕಾ ಸ್ವಾತಂತ್ರ್ಯದ ದುರುಪಯೋಗದಿಂದ ಅಪಾಯಗಳಿದ್ದರೂ ನಿಯಂತ್ರಿತ ಅಥವಾ ನಿರ್ಬಂಧಿತ ಪತ್ರಿಕೆಗಳಿಗಿಂತ ಸಂಪೂರ್ಣ ಸ್ವತಂತ್ರ ಪತ್ರಿಕಾ ವ್ಯವಸ್ಥೆಯೇ ಹೆಚ್ಚು ಒಪ್ಪಿತ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅಭಿಪ್ರಾಯಪಟ್ಟರು.

ಬೆಂಗಳೂರು : ಪತ್ರಿಕಾ ಸ್ವಾತಂತ್ರ್ಯದ ದುರುಪಯೋಗದಿಂದ ಅಪಾಯಗಳಿದ್ದರೂ ನಿಯಂತ್ರಿತ ಅಥವಾ ನಿರ್ಬಂಧಿತ ಪತ್ರಿಕೆಗಳಿಗಿಂತ ಸಂಪೂರ್ಣ ಸ್ವತಂತ್ರ ಪತ್ರಿಕಾ ವ್ಯವಸ್ಥೆಯೇ ಹೆಚ್ಚು ಒಪ್ಪಿತ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಪತ್ರಿಕಾ ದಿನಾಚರಣೆ

ಸೋಮವಾರ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ವಾರ್ತಾಭವನದ ಸುಲೋಚನಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಪತ್ರಿಕೋದ್ಯಮ: ಜನಪ್ರಿಯತೆಯೇ ಅಥವಾ ಜವಾಬ್ದಾರಿಯುತವೇ?’ ವಿಷಯದ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ

ಪತ್ರಿಕಾ ಸ್ವಾತಂತ್ರ್ಯದ ಕುರಿತು ಜವಾಹರಲಾಲ್ ನೆಹರು ಅವರು ವ್ಯಕ್ತಪಡಿಸಿದ್ದ ಅಭಿಪ್ರಾಯಗಳನ್ನು ಸ್ಮರಿಸದ ಪರಮೇಶ್ವರ್‌, ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವೆಂದು ಕರೆಯಲಾಗುತ್ತದೆ. ಈ ಸ್ತಂಭಕ್ಕೆ ಎಷ್ಟು ಸ್ವಾತಂತ್ರ್ಯ ಮತ್ತು ಶಕ್ತಿ ಇರಬೇಕು. ಅದು ಸಮಾಜಕ್ಕೆ, ದೇಶಕ್ಕೆ ಹಾಗೂ ಆಡಳಿತ ವ್ಯವಸ್ಥೆಗೆ ಯಾವ ರೀತಿಯಲ್ಲಿ ನೆರವಾಗಬೇಕು ಎಂಬುದನ್ನು ನೆಹರು ಅವರು ಆಳವಾಗಿ ಅರ್ಥೈಸಿಕೊಂಡಿದ್ದರು. ಪತ್ರಿಕಾ ಸ್ವಾತಂತ್ರ್ಯ ಎನ್ನುವುದು ಕೇವಲ ಘೋಷಣೆಯಲ್ಲ, ಅದು ಪ್ರಜಾಪ್ರಭುತ್ವದ ಪ್ರಕ್ರಿಯೆಯ ಅವಿಭಾಜ್ಯ ಅಂಗ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಡಾ.ಕೆ.ಗೋವಿಂದರಾಜ್‌, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಮಾಜಿ ಪ್ರಧಾನಿ ಡಾ.ಮನಮೋಹನ್‌ಸಿಂಗ್ ಅವರ ಮಾಜಿ ಸಂವಹನ ಸಲಹೆಗಾರ ಪಂಕಜ್‌ ಪಚೌರಿ, ಹಿರಿಯ ಪತ್ರಕರ್ತ ಸುದರ್ಶನ್‌ ಚನ್ನಂಗಿಹಳ್ಳಿ, ಎಸ್‌.ಆರ್‌.ರಾಮಕೃಷ್ಣ ಸೇರಿದಂತೆ ಇತರರಿದ್ದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಇಂದಿನಿಂದ ಬೆಂಗಳೂರು ‘ಟೆಕ್‌ ಸಮ್ಮಿಟ್‌’ - ಮೂರು ದಿನಗಳ ಸಮ್ಮೇಳನ
ಬೆಂಗಳೂರಿಗೆ ಅಗ್ಗದ ವಿಯೆಟ್ನಾಂ ಟ್ಯಾಕ್ಸಿ - ಸ್ಥಳೀಯ ಚಾಲಕರಿಗೆ ಆತಂಕ