ಕರ್ನಾಟಕದ ಡಿಜಿಟಲ್ ಮಾರುಕಟ್ಟೆಯಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಮೊದಲ ಸ್ಥಾನಕ್ಕೇರಿ, ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿ ತಾಣವಾಗಿದೆ.
ಬೆಂಗಳೂರು : ಜ.25ರ ''''ಕಾಮ್‌ಸ್ಕೋರ್ ವರದಿ'''' ಹೊರಬಿದ್ದಿದ್ದು, ಏಷ್ಯಾನೆಟ್ ಸುವರ್ಣ ನ್ಯೂಸ್ ನಂ.1 ಸ್ಥಾನದಲ್ಲಿದೆ. ಡೆಸ್ಕ್‌ಟಾಪ್ ಹಾಗೂ ಮೊಬೈಲ್ ಯುನಿಕ್ ಯೂಸರ್ಸ್ ಕುರಿತು ಮಾಹಿತಿ ನೀಡುವ ''''ಕಾಮ್‌ಸ್ಕೋರ್ ಎಂಎಂಎಕ್ಸ್ ಮಲ್ಟಿಪ್ಲ್ಯಾಟ್‌ಫಾರ್ಮ್'''' ವರದಿ ಪ್ರಕಾರ ಕರ್ನಾಟಕದ ಡಿಜಿಟಲ್ ಮಾರುಕಟ್ಟೆಯಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಮೊದಲ ಸ್ಥಾನಕ್ಕೇರಿ, ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿ ತಾಣವಾಗಿದೆ.
ರಾಜ್ಯದ ವಿವಿಧ ಆಸಕ್ತಿಯುಳ್ಳವರಿಗೆ ವೈವಿಧ್ಯಮಯ ಸುದ್ದಿ ತಲುಪಿಸುವಲ್ಲಿ ಮುಂಚೂಣಿಯಲ್ಲಿರುವ ಏಷ್ಯಾನೆಟ್ ಸುವರ್ಣನ್ಯೂಸ್ ವೆಬ್‌ಸೈಟ್ 6 ದಶಲಕ್ಷ ಯೂಸರ್ಸ್ ಹಾಗೂ 56 ದಶಲಕ್ಷ ಪೇಜ್ ವ್ಯೂವ್ಸ್ ಪಡೆದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಏಷ್ಯಾನೆಟ್ ನ್ಯೂಸ್ ಡಿಜಿಟಲ್ ಸಿಇಒ ನೀರಜ್ ಕೊಹ್ಲಿ, ‘ಹೊಸ ಮಾರುಕಟ್ಟೆ ತಂತ್ರಜ್ಞಾನದೊಂದಿಗೆ, ನವೀನ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಏಷ್ಯಾನೆಟ್ ನ್ಯೂಸ್ ಕನ್ನಡ ಹೊಸ ಅಧ್ಯಾಯ ಆರಂಭಿಸಿದ್ದು, ಈ ಸಾಧನೆ ಉಳಿದ ಭಾಷೆಗಳಲ್ಲೂ ಮುಂದುವರೆಯಲಿದೆ’ ಎಂದಿದ್ದಾರೆ.
ಏಷ್ಯಾನೆಟ್ ಸವರ್ಣ ನ್ಯೂಸ್ ಮುಂಚೂಣಿಯಲ್ಲೇಕೆ?:
ಕೇವಲ ವಿಸ್ತೃತ ಸುದ್ದಿಯಿಂದ ಮಾತ್ರವಲ್ಲ, ಸಂಪಾದಕೀಯ ಸಮಗ್ರತೆಯಿಂದಲೂ ಏಷ್ಯಾನೆಟ್ ನ್ಯೂಸ್ ಕನ್ನಡ-ಸುವರ್ಣ ನ್ಯೂಸ್ ಕನ್ನಡ ಪತ್ರಿಕೋದ್ಯಮದಲ್ಲಿ ಮುಂಚೂಣಿಯಲ್ಲಿದೆ. ಸಮಗ್ರ ಸುದ್ದಿ ನೀಡುವಿಕೆ, ನಿರ್ಭಯ ವರದಿಗಾರಿಕೆ ಮತ್ತು ನಿಖರ ಸುದ್ದಿ ಬದ್ಧತೆಯಿಂದಲೇ ಕನ್ನಡ ಸುದ್ದಿಲೋಕದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.
ಈ ಸಾಧನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಏಷ್ಯಾನೆಟ್ ನ್ಯೂಸ್ ಸಿಒಒ ತಪನ್ ಶರ್ಮಾ, ‘ಅತ್ಯದ್ಭುತ ಬೆಳವಣಿಗೆಯಿಂದ ಏಷ್ಯಾನೆಟ್ ನ್ಯೂಸ್ ರಾಷ್ಟ್ರೀಯ ಡಿಜಿಜಿಟಲ್ ಮಾಧ್ಯಮವಾಗಿ ರೂಪುಗೊಳ್ಳುವಂತಾಗಿದೆ. ನೇರ, ನಿರ್ಭಯ ಪತ್ರಿಕೋದ್ಯಮವೇ ಈ ಯಶಸ್ಸಿಗೆ ಕಾರಣ. ಕನ್ನಡದ ಈ ಗಮನಾರ್ಹ ಸಾಧನೆ ದಕ್ಷಿಣ ಭಾರತದ ಭಾಷೆಗಳಲ್ಲಿ ತನ್ನ ಪ್ರಭಾವ ತೋರಿಸುವಲ್ಲಿ ಮುಖ್ಯ ಪಾತ್ರ ವಹಿಸಿದೆ.’ ಎಂದಿದ್ದಾರೆ.