ವಿಶ್ವದ ಟಾಪ್‌ 20 ಸ್ಟಾರ್ಟಪ್‌ ನಗರಗಳ ಪಟ್ಟಿಯಲ್ಲಿ ಬೆಂಗಳೂರು ನಂ.14

Published : Jun 14, 2025, 05:12 AM IST
Bengaluru City Image

ಸಾರಾಂಶ

ದೇಶದ ಟೆಕ್‌ ರಾಜಧಾನಿ ಬೆಂಗಳೂರು ಇದೀಗ ಮತ್ತೊಂದು ಮಹತ್ವದ ಸಾಧನೆ ಮಾಡಿದೆ. ವಿಶ್ವದ ಟಾಪ್‌ 20 ಸಾರ್ಟಪ್‌ ಇಕೋಸಿಸ್ಟಂ ನಗರಗಳ ಪಟ್ಟಿಯಲ್ಲಿ ಬೆಂಗಳೂರು 14ನೇ ಸ್ಥಾನಪಡೆದಿದೆ.

ಬೆಂಗಳೂರು: ದೇಶದ ಟೆಕ್‌ ರಾಜಧಾನಿ ಬೆಂಗಳೂರು ಇದೀಗ ಮತ್ತೊಂದು ಮಹತ್ವದ ಸಾಧನೆ ಮಾಡಿದೆ. ವಿಶ್ವದ ಟಾಪ್‌ 20 ಸಾರ್ಟಪ್‌ ಇಕೋಸಿಸ್ಟಂ ನಗರಗಳ ಪಟ್ಟಿಯಲ್ಲಿ ಬೆಂಗಳೂರು 14ನೇ ಸ್ಥಾನಪಡೆದಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಬೆಂಗಳೂರು ಈ ಬಾರಿ ಏಳು ಸ್ಥಾನ ಜಿಗಿತ ಕಂಡಿದೆ. ಈ ಮೂಲಕ ವಿಶ್ವದ ಟಾಪ್‌ 20 ಸ್ಟಾರ್ಟ್‌ಅಪ್‌ ನಗರಗಳಲ್ಲಿ ಬೆಂಗಳೂರು ಅತಿದೊಡ್ಡ ಜಿಗಿತ ದಾಖಲಿಸಿದಂತಾಗಿದೆ ಎಂದು ಸ್ಟಾರ್ಟ್‌ ಅಪ್‌ ಜಿನೋಮ್‌ನ ಗ್ಲೋಬಲ್‌ ಸ್ಟಾರ್ಟ್‌ಅಪ್‌ ಇಕೋಸಿಸ್ಟಂ ರಿಪೋರ್ಟ್‌(ಜಿಎಸ್‌ಇಆರ್‌)-2025 ವರದಿಯಲ್ಲಿ ಹೇಳಲಾಗಿದೆ.

ಕಳೆದ ವರ್ಷ ಸ್ವಿಗ್ಗಿ, ಗೋಡಿಜಿಟ್‌, ಬ್ಲ್ಯಾಕ್‌ಬಕ್‌ನಂಥ ಹಲವು ಯಶಸ್ವಿ ಐಪಿಒಗಳು ಷೇರುಮಾರುಕಟ್ಟೆ ಪ್ರವೇಶಿಸಿದ್ದು ಹಾಗೂ ಡೀಪ್‌ ಟೆಕ್‌ ಇಕೋಸಿಸ್ಟಂ ವಿಚಾರದಲ್ಲಿ ಕರ್ನಾಟಕ ನೀಡುತ್ತಿರುವ ಪ್ರೋತ್ಸಾಹದಿಂದಾಗಿ ಈ ಸಾಧನೆ ಸಾಧ್ಯವಾಗಿದೆ ಎಂದು ಹೇಳಲಾಗಿದೆ.

ಜಿಎಸ್‌ಇಆಪ್‌ ವರದಿ ಪ್ರಕಾರ ಸ್ಟಾರ್ಟ್‌ಅಪ್‌ಗಳಿಗೆ ಪೂರಕ ಸೌಲಭ್ಯಗಳನ್ನು ಹೊಂದಿರುವ ಅತ್ಯುತ್ತಮ ಪಟ್ಟಿಯಲ್ಲಿ ಅಮೆರಿಕದ ಸಿಲಿಕಾನ್‌ ವ್ಯಾಲಿ ಮೊದಲ ಸ್ಥಾನ, ನ್ಯೂಯಾರ್ಕ್‌ ಎರಡನೇ ಸ್ಥಾನ ಮತ್ತು ಲಂಡನ್‌ ಮೂರನೇ ಸ್ಥಾನ ಪಡೆದಿದೆ. ಇಸ್ರೇಲ್‌ನ ಟೆಲ್‌ ಅವೀವ್‌ ನಾಲ್ಕನೇ ಸ್ಥಾನ ಹಾಗೂ ಅಮೆರಿಕದ ಬಾಸ್ಟನ್‌ ಮತ್ತು ಚೀನಾದ ಬೀಜಿಂಗ್‌ ನಗರಗಳು ಐದನೇ ಸ್ಥಾನದಲ್ಲಿವೆ.

ಕಳೆದ ವರ್ಷ ಯಶಸ್ವಿ ಐಪಿಒಗಳು:

2024ರಲ್ಲಿ ಭಾರತವು ಶತಕೋಟಿ ಡಾಲರ್‌ ಮೌಲ್ಯದ ಐಪಿಒಗಳನ್ನು ಕಂಡಿದೆ. ಆಹಾರ ಪೂರೈಕೆ ಸಂಸ್ಥೆ ಸ್ವಿಗ್ಗಿಯು 96 ಸಾವಿರ ಕೋಟಿ, ಗೋಡಿಜಿತ್‌ 30 ಸಾವಿರ ಕೋಟಿ, ಇಂಡಿಜಿನೆ 11 ಸಾವಿರ ಕೋಟಿ, ಬ್ಲ್ಯಾಕ್‌ಬಕ್‌ ಕಂಪನಿ 8600 ಕೋಟಿ ರು. ಮೌಲ್ಯದ ಐಪಿಒ ಬಿಡುಗಡೆ ಮಾಡಿತ್ತು. ಈ ಮೂಲಕ ಕಂಪನಿಯಲ್ಲಿ ಆರಂಭದಲ್ಲಿ ಹೂಡಿಕೆ ಮಾಡಿದವರಿಗೆ ಭಾರೀ ಲಾಭದೊಂದಿಗೆ ಹೊರಹೋಗಲು ಅವಕಾಶ ಮಾಡಿಕೊಟ್ಟಿತ್ತು. ಇದು ದೇಶದಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಸಿಗುತ್ತಿರುವ ಅತ್ಯುತ್ತಮ ಇಕೋ ಸಿಸ್ಟಂಗೆ ಸಾಕ್ಷಿಯಾಗಿದೆ.

ಎಐ ನಗರ ಬೆಂಗಳೂರು:

ಅದೇ ರೀತಿ ಬೆಂಗಳೂರು ಇದೀಗ ವಿಶ್ವದ ಟಾಪ್‌ 50 ಎಐ ಸಿಟಿಗಳಲ್ಲಿ ಐದನೇ ರ್‍ಯಾಂಕ್‌ನಲ್ಲಿದೆ. ವಿಶ್ವದ ಎರಡನೇ ಅತಿದೊಡ್ಡ ಎಐ ಟ್ಯಾಲೆಂಟ್‌ ಹಬ್‌ ಆಗಿ ಪರಿವರ್ತನೆಯಾಗಿದೆ. ಬೆಂಗಳೂರಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚು ಎಐ ಮತ್ತು ಮೆಷಿನ್‌ ಲರ್ನಿಂಗ್‌ ಉದ್ಯೋಗಿಗಳಿದ್ದಾರೆ.

ಬೆಂಗಳೂರು ಇದೀಗ ಪ್ಲಾಟ್‌ಫಾರ್ಮ್‌ವೊಂದನ್ನು ಅಭಿವೃದ್ಧಿಪಡಿಸುತ್ತಿದ್ದು, ಇದರ ಮೂಲಕ ಕಾರ್ಪೊರೇಟ್‌ಗಳು, ಸಂಶೋಧಕರು, ಸ್ಟಾರ್ಟ್‌ಅಪ್‌ಗಳು ಮತ್ತು ನೀತಿ ನಿರೂಪಕರು ಭಾರತ ಮಾತ್ರವಲ್ಲದೆ ಇಡೀ ವಿಶ್ವದ ‍ಭವಿಷ್ಯ ನಿರ್ಮಿಸುವ ಕೆಲಸವನ್ನು ಜತೆಯಾಗಿ ಮಾಡಲಿದ್ದಾರೆ.

ಬೆಂಗಳೂರಿನ ಮುಂದಿನ ಹಂತವು ಡೀಪ್‌ ಕೋಡ್‌, ಹಾರ್ಡ್ ಸೈನ್ಸ್‌ ಮತ್ತು ಅಂತಾರಾಷ್ಟ್ರೀಯ ಸಹಭಾಗಿತ್ವದ ಮೂಲಕ ಬರೆಯಲ್ಪಡುತ್ತದೆ ಎಂದು ಮಧ್ಯಪೂರ್ವ ಮತ್ತು ದಕ್ಷಿಣ ಏಷ್ಯಾ ಸ್ಟಾರ್ಟ್‌ಅಪ್‌ ಜೆನೋಮ್‌ನ ಅಧ್ಯಕ್ಷ ರವಿ ನಾರಾಯಣ ತಿಳಿಸಿದ್ದಾರೆ.

ಟಾಪ್‌ 6 ನಗರಗಳು

1)ಸಿಲಿಕಾನ್‌ ವ್ಯಾಲಿ (ಅಮೆರಿಕ)

2) ನ್ಯೂಯಾರ್ಕ್‌ (ಅಮೆರಿಕ)

3) ಲಂಡನ್‌ (ಬ್ರಿಟನ್‌)

4) ಟೆಲ್‌ ಅವೀವ್‌ (ಇಸ್ರೇಲ್‌)

5) ಬಾಸ್ಟನ್‌ (ಅಮೆರಿಕ), ಬೀಜಿಂಗ್‌ (ಚೀನಾ

PREV
Read more Articles on

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಬೆಂಗಳೂರು ನಗರದಲ್ಲಿ ಮತ್ತೆ ರಾರಾಜಿಸಲಿವೆ ಜಾಹೀರಾತು : ವಾರ್ಷಿಕ ₹ 6000 ಕೋಟಿ ನಿರೀಕ್ಷೆ