ಬೆಂಗಳೂರಿ: ಭಿಕ್ಷೆ ಬೇಡುತ್ತಿದ್ದ 47 ಮಕ್ಕಳ ರಕ್ಷಣೆ

ಸಾರಾಂಶ

ನಗರ ಪೊಲೀಸರು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಭಿಕ್ಷಾಟನೆಯಲ್ಲಿ ತೊಡಗಿದ್ದ 47 ಮಕ್ಕಳನ್ನು ರಕ್ಷಿಸಲಾಗಿದೆ.

ಬೆಂಗಳೂರು : ನಗರ ಪೊಲೀಸರು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಭಿಕ್ಷಾಟನೆಯಲ್ಲಿ ತೊಡಗಿದ್ದ 47 ಮಕ್ಕಳನ್ನು ರಕ್ಷಿಸಲಾಗಿದೆ.

ಸಿಸಿಬಿಯ ಮಹಿಳಾ ಸಂರಕ್ಷಣಾ ದಳ, ವಿಶೇಷ ವಿಚಾರಣ ದಳ, ಪುಲಕೇಶಿ ನಗರ ಉಪ ವಿಭಾಗದ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಗುರುವಾರ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದಾರೆ. ಪುಲಕೇಶಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಹಜೀ ಸರ್‌ ಇಸ್ಮಾಯಿಲ್‌ ಸೈಟ್‌ ಮಜೀದ್‌ ಬಳಿ ಸೇರಿದಂತೆ ಸುತ್ತಮುತ್ತಲ ಸ್ಥಳಗಳ ಬೀದಿ ಬದಿಯಲ್ಲಿ ಈ ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿದ್ದರು. ಮಕ್ಕಳನ್ನು ಭಿಕ್ಷಾಟನೆಯಲ್ಲಿ ತೊಡಗಿಸಿದ್ದ 37 ಮಹಿಳೆಯರನ್ನು ವಶಕ್ಕೆ ಪಡೆದು ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಲಾಗಿದೆ.

ಭಿಕ್ಷಾಟನೆಯಿಂದ ರಕ್ಷಿಸಿರುವ 47 ಮಕ್ಕಳ ಪೈಕಿ ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ 6 ಮಕ್ಕಳು, ಮೂರು ವರ್ಷದೊಳಗಿನ 12, ಆರು ವರ್ಷದೊಳಗಿನ 6, 10 ವರ್ಷದೊಳಗಿನ 16, 10 ವರ್ಷ ಮೇಲ್ಪಟ್ಟ 7 ಮಕ್ಕಳು ಇದ್ದಾರೆ. ಈ 47 ಮಕ್ಕಳ ಪೈಕಿ 19 ಗಂಡು ಮತ್ತು 28 ಹೆಣ್ಣು ಮಕ್ಕಳಿವೆ. ಸದ್ಯ ಎಲ್ಲಾ ಮಕ್ಕಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸುಪರ್ದಿಯಲ್ಲಿವೆ.

ಈ ಮಕ್ಕಳನ್ನು ಭಿಕ್ಷಾಟನೆಯಲ್ಲಿ ತೊಡಗಿದ್ದ ಮಹಿಳೆಯರ ಪೈಕಿ ಕರ್ನಾಟಕ, ಆಂಧ್ರಪ್ರದೇಶ, ಉತ್ತರಪ್ರದೇಶದ ಮೂಲದ ಮಹಿಳೆಯರೂ ಇದ್ದಾರೆ. ಬೇರೆ ಮಕ್ಕಳನ್ನು ತಂದು ಭಿಕ್ಷಾಟನೆಗೆ ಬಳಸಿಕೊಂಡಿದ್ದರೆ, ಆ ಮ

Share this article