ಬಿಜೆಪಿಗರ ಹತ್ಯೆಗೆ ಮಹಾ ಗೂಂಡಾಗಳಿಗೆ ಸುಪಾರಿ’ : ಎಂಎಲ್‌ಎ ರವಿಕುಮಾರ್‌ ಗಂಭೀರ ಆರೋಪ

ಸಾರಾಂಶ

ಆಂದೋಲಾ ಸ್ಚಾಮೀಜಿ, ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ಮುಖಂಡರಾದ ಚಂದು ಪಾಟೀಲ್‌, ಮಣಿಕಂಠ ರಾಠೋಡ ಕೊಲೆಗೆ ಸಂಚು ರೂಪಿಸಿ ಮಹಾರಾಷ್ಟ್ರ ಮೂಲದ ಗುಂಡಾಗಳಿಗೆ ಸುಪಾರಿ ಕೊಟ್ಟಿದ್ದಾರೆ ಎಂದು ಎಂಎಲ್‌ಸಿ ರವಿಕುಮಾರ್‌ ಆರೋಪಿಸಿದ್ದಾರೆ.

ಬೀದರ್‌ : ಆಂದೋಲಾ ಸ್ಚಾಮೀಜಿ, ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ಮುಖಂಡರಾದ ಚಂದು ಪಾಟೀಲ್‌, ಮಣಿಕಂಠ ರಾಠೋಡ ಕೊಲೆಗೆ ಸಂಚು ರೂಪಿಸಿ ಮಹಾರಾಷ್ಟ್ರ ಮೂಲದ ಗೂಂಡಾಗಳಿಗೆ ಸುಪಾರಿ ಕೊಟ್ಟಿದ್ದಾರೆ ಎಂದು ಎಂಎಲ್‌ಸಿ ರವಿಕುಮಾರ್‌ ಆರೋಪಿಸಿದ್ದಾರೆ.

ಮೃತ ಸಚಿನ್‌ ಪಂಚಾಳ ಅವರ ಭಾಲ್ಕಿ ತಾಲೂಕಿನ ಕಟ್ಟಿತೂಗಾಂವ್‌ ಗ್ರಾಮದ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈಂ. ವಿಜಯೇಂದ್ರ ಜೊತೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರಿಗೆ ಮಾತನಾಡಿದ ಅವರು, ಈ ಪ್ರಕರಣ ಕಿಂಗ್‌ ಪಿನ್‌ ಪ್ರಿಯಾಂಕ್ ಖರ್ಗೆ ರಾಜಿನಾಮೆ ನೀಡುವವರೆಗೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ಟೆಂಡರ್‌ ಕೊಡಿಸುವುದಾಗಿ ಹೇಳಿ ಸಚಿನ್‌ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಕಲಬುರಗಿಗೆ ಬಂದ ಮೇಲೆ ಒಂದು ಕೋಟಿ ರುಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಸಚಿನ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.

ದೂರು ಸ್ವೀಕರಿಸದೆ ಗಾಂಧಿ ಗಂಜ್‌ ಪೊಲೀಸ್ ಠಾಣೆಯಲ್ಲಿ 3 ತಾಸು ಕುಟುಂಬಸ್ಥರನ್ನು ಕೂಡಿಸಿಕೊಂಡಿದ್ದಾರೆ. ಧನ್ನೂರು ಪೊಲೀಸ್‌ ಠಾಣೆ ಪಿಎಸ್‌ಐ ಕೂಡ ಸ್ಪಂದಿಸಿಲ್ಲ. ಸಚಿನ್‌ ಕೊಲೆಗೆ ಕಾರಣವಾಗಿರುವ ಈ ಎರಡೂ ಠಾಣೆ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಸಚಿನ್‌ ಕುಟುಂಬಕ್ಕೆ ಸರ್ಕಾರ ಒಂದು ಕೋಟಿ ರುಪಾಯಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

‘ಬಿವೈವಿ ನೇತೃತ್ವದಲ್ಲಿ ಕಲಬುರಗಿಗೆ ಬರ್ತೀವಿ’

ಇವತ್ತಿನಿಂದ ಪ್ರಿಯಾಂಕ್‌ ಖರ್ಗೆ ಸುಪಾರಿ ಖರ್ಗೆ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಪಾದಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಲಬುರಗಿಯಲ್ಲಿ ಜನ ರೋಸಿ ಹೋಗಿದಾರೆ, ಪ್ರಿಯಾಂಕ್‌ ಏನೇ ಮಾಡಿದರೂ ಬಾಯಿ ಬಿಚ್ಚಬಾರದಂತೆ. ನಾವೆಲ್ಲ ಈಗ ಬಿಜೆಪಿ ಅಧ್ಯಕ್ಷರ ನೇತೃತ್ವದಲ್ಲಿ ಕಲಬುರಗಿಗೆ ಬರ್ತೇವೆ ಎಂದು ಎಚ್ಚರಿಸಿದರು.

ಸಚಿನ್‌ ಸಾವಿನ ಪ್ರಕರಣದ ಹಿಂದೆ ಇರುವ ಸಚಿವ ಪ್ರಿಯಾಂಕ್‌ ಖರ್ಗೆ ತಕ್ಷಣ ರಾಜೀನಾಮೆ ಕೊಡಬೇಕು ಎಂದ ಅವರು,

ಡೆತ್‌ ನೋಟಲ್ಲಿ ಪ್ರಿಯಾಂಕ್‌ ಖರ್ಗೆ ಹೆಸರು ಬಂದಿದ್ದಕ್ಕೆ ಪೊಲೀಸರು ದೂರು ತೆಗೆದುಕೊಂಡಿಲ್ಲ. ಪೊಲೀಸರು ಮನಸ್ಸು ಮಾಡಿದರೆ ಸಚಿನ್‌ ಜೀವ ಉಳಿಸಬಹುದಿತ್ತು ಎಂದರು.

Share this article