ಬಿಜೆಪಿಗೆ ಬಂಗಾಳ: ಮತ್ತೆ 2 ಸಮೀಕ್ಷೆಗಳಿಂದ ಭವಿಷ್ಯ

Published : May 01, 2026, 07:13 AM IST
BJP

ಸಾರಾಂಶ

ಪಂಚರಾಜ್ಯ ಚುನಾವಣೆಗಳ ಪೈಕಿ ಭಾರೀ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಗುರುವಾರ ಪ್ರಕಟವಾದ ಎರಡು ಸಮೀಕ್ಷೆಗಳು ಹೇಳಿವೆ. ಬುಧವಾರ ಪ್ರಕಟವಾದ 6 ಸಮೀಕ್ಷೆಗಳ ಪೈಕಿ 4 ಬಿಜೆಪಿ ಗೆಲುವಿನ ಮತ್ತು 2 ಟಿಎಂಸಿ ಗೆಲುವಿನ ಸುಳಿವು ನೀಡಿದ್ದವು

 ನವದೆಹಲಿ: ಪಂಚರಾಜ್ಯ ಚುನಾವಣೆಗಳ ಪೈಕಿ ಭಾರೀ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಗುರುವಾರ ಪ್ರಕಟವಾದ ಎರಡು ಸಮೀಕ್ಷೆಗಳು ಹೇಳಿವೆ.

ಬುಧವಾರ ಪ್ರಕಟವಾದ 6 ಸಮೀಕ್ಷೆಗಳ ಪೈಕಿ 4 ಬಿಜೆಪಿ ಗೆಲುವಿನ ಮತ್ತು 2 ಟಿಎಂಸಿ ಗೆಲುವಿನ ಸುಳಿವು ನೀಡಿದ್ದವು. ಇದೀಗ ಮತ್ತೆರೆಡು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಹೀಗಾಗಿ ಮೇ 4ರಂದು ಪ್ರಕಟವಾಗುವ ಕುರಿತ ಫಲಿತಾಂಶದ ಬಗೆಗಿನ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ಸಾಕಷ್ಟು ನಿಖರ ಫಲಿತಾಂಶದಿಂದ ಗುರುತಿಸಿಕೊಂಡಿರುವ ಟುಡೇಸ್‌ ಚಾಣಕ್ಯ ಗುರುವಾರ ಬಿಡುಗಡೆ ಮಾಡಿರುವ ಸಮೀಕ್ಷಾ ವರದಿ ಅನ್ವಯ ಬಂಗಾಳದಲ್ಲಿ ಬಿಜೆಪಿ 192 ಸ್ಥಾನ ಗೆಲ್ಲಲಿದ್ದರೆ, ಟಿಎಂಸಿ 100 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬರಲಿದೆ.

ಇನ್ನು ನ್ಯೂಸ್‌ 18 ಸುದ್ದಿವಾಹಿನಿ ಸಮೀಕ್ಷೆ ಅನ್ವಯ ಬಿಜೆಪಿ 143-163, ಟಿಎಂಸಿ 127-147 ಸ್ಥಾನ ಗೆಲ್ಲಲಿವೆ.

ಚಾಣಕ್ಯ:

ಚಾಣಕ್ಯ ಸಂಸ್ಥೆ ಅನ್ವಯ ತಮಿಳ್ನಾಡಲ್ಲಿ ಡಿಎಂಕೆ ಕೂಟ 125, ವಿಜಯ್‌ ನೇತೃತ್ವದ ಟಿವಿಕೆ 63 ಮತ್ತು ಎಐಡಿಎಂಕೆ ನೇತೃತ್ವದ ಎನ್‌ಡಿಎ ಕೂಟ 45 ಸೀಟು ಗೆಲ್ಲಬಹುದು. ಕೇರಳದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ 69 ಮತ್ತು ಎಡಪಕ್ಷಗಳ ನೇತೃತ್ವದ ಎಲ್‌ಡಿಎಫ್‌ 64 ಸ್ಥಾನ ಗೆಲ್ಲಲಿದೆ. ಇನ್ನು ಅಸ್ಸಾಂನಲ್ಲಿ ಬಿಜೆಪಿ 102, ಕಾಂಗ್ರೆಸ್‌ 24 ಸೀಟು ಗೆಲ್ಲಲಿದೆ.

70% ಜನ ಬಾಯಿ ಬಿಡುತ್ತಿಲ್ಲ, ಸಮೀಕ್ಷೆ ಮಾಡಲ್ಲ: ಆಕ್ಸಿಸ್‌

ನವದೆಹಲಿ: ಪಶ್ಚಿಮ ಬಂಗಾಳ ಚುನಾವಣೆಯ ಮತದಾನೋತ್ತರ ಸಮೀಕ್ಷೆಯನ್ನು ತಾನು ಪ್ರಕಟಿಸುವುದಿಲ್ಲ ಎಂದು ಪ್ರಮುಖ ಸಮೀಕ್ಷಾ ಸಂಸ್ಥೆಗಳ ಪೈಕಿ ಒಂದಾದ ಆಕ್ಸಿಸ್ ಮೈ ಇಂಡಿಯಾ ಹೇಳಿದೆ. ‘ಬಂಗಾಳದಲ್ಲಿ ಶೇ.70-80 ಜನರು ಬಾಯಿ ತೆರೆಯುತ್ತಿಲ್ಲ. ಇಂತಹ ವಾತಾವರಣದಲ್ಲಿ ನಮ್ಮ ಸ್ಯಾಂಪ್ಲಿಂಗ್ ವಿಧಾನವೇ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆದ್ದರಿಂದ ಈ ಬಾರಿ ಬಂಗಾಳದ ಎಕ್ಸಿಟ್ ಪೋಲ್ ಫಲಿತಾಂಶವನ್ನು ಪ್ರಕಟಿಸುವುದಿಲ್ಲ’ ಎಂದು ತಿಳಿಸಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಮುಸ್ಲಿಂ ಕಾಲೋನಿಗಳಿಗೆ ₹600 ಕೋಟಿ ಬಂಪರ್‌
56432 ಸರ್ಕಾರಿ ಹುದ್ದೆ ಭರ್ತಿಗೆ ಸಂಪುಟ ಅಸ್ತು