ಗ್ರಾಹಕರು ಆನ್ ಲೈನ್ನಲ್ಲಿ ಪಟಾಕಿ ಖರೀದಿಸುತ್ತಿರುವುದರಿಂದ ಮಳಿಗೆ ತೆರೆದು ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳಿಗೆ ಈ ಬಾರಿ ಶೇ.10-15ರಷ್ಟು ನಷ್ಟ ಉಂಟಾಗಿದೆ. ನಗರದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಟದ ಮೈದಾನಗಳಲ್ಲಿ ಅಧಿಕೃತವಾಗಿ ಮಳಿಗೆ ತೆರೆದು ಮಾರಾಟ ಮಾಡುತ್ತಿರುವ ನಗರದ ಸುಮಾರು 380 ರಿಂದ 423 ವ್ಯಾಪಾರಿಗಳು ಪ್ರತಿವರ್ಷ 8 ರಿಂದ 10 ಲಕ್ಷ ರು.ವರೆಗೆ ವಹಿವಾಟು ನಡೆಸುತ್ತಾರೆ. ಆದರೆ, ಈ ಬಾರಿ ಆನ್ ಲೈನ್ನಲ್ಲಿ ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಪಟಾಕಿ ಖರೀದಿಸುತ್ತಿರುವುದರಿಂದ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ ಎಂದು ವಿಶಾಲ ಕರ್ನಾಟಕ ಪಟಾಕಿ ವರ್ತಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಕೇಶವ ತಿಳಿಸಿದ್ದಾರೆ.
-ಪ್ರತಿವರ್ಷ ₹8-10 ಲಕ್ಷ ವರೆಗೆ ವಹಿವಾಟು । ಈ ಸಲ 15% ನಷ್ಟ । ಆನ್ ಲೈನ್ನಲ್ಲಿ ಪಟಾಕಿ ಖರೀದಿಯಿಂದ ವ್ಯಾಪಾರಕ್ಕೆ ಹೊಡೆತ
ಕನ್ನಡಪ್ರಭ ವಾರ್ತೆ ಬೆಂಗಳೂರುಗ್ರಾಹಕರು ಆನ್ ಲೈನ್ನಲ್ಲಿ ಪಟಾಕಿ ಖರೀದಿಸುತ್ತಿರುವುದರಿಂದ ಮಳಿಗೆ ತೆರೆದು ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳಿಗೆ ಈ ಬಾರಿ ಶೇ.10-15ರಷ್ಟು ನಷ್ಟ ಉಂಟಾಗಿದೆ. ನಗರದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಟದ ಮೈದಾನಗಳಲ್ಲಿ ಅಧಿಕೃತವಾಗಿ ಮಳಿಗೆ ತೆರೆದು ಮಾರಾಟ ಮಾಡುತ್ತಿರುವ ನಗರದ ಸುಮಾರು 380 ರಿಂದ 423 ವ್ಯಾಪಾರಿಗಳು ಪ್ರತಿವರ್ಷ 8 ರಿಂದ 10 ಲಕ್ಷ ರು.ವರೆಗೆ ವಹಿವಾಟು ನಡೆಸುತ್ತಾರೆ. ಆದರೆ, ಈ ಬಾರಿ ಆನ್ ಲೈನ್ನಲ್ಲಿ ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಪಟಾಕಿ ಖರೀದಿಸುತ್ತಿರುವುದರಿಂದ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ ಎಂದು ವಿಶಾಲ ಕರ್ನಾಟಕ ಪಟಾಕಿ ವರ್ತಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಕೇಶವ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ 2018ರಲ್ಲಿಯೇ ಪಟಾಕಿಯನ್ನು ಆನ್ ಲೈನ್ನಲ್ಲಿ ಖರೀದಿಸಬಾರದು ಎಂದು ನಿಷೇಧ ಹೇರಿದೆ. ಆದರೂ ಕೆಲ ಕಂಪನಿಗಳು ಅಧಿಕೃತವಾಗಿಯೇ ಪಟಾಕಿ ಮಾರಾಟ ಮಾಡುತ್ತಿವೆ. ಜನರೂ ಕೂಡ ಸುಲಭವಾಗಿ ತಮಗೆ ಇಷ್ಟ ಬಂದ ಪಟಾಕಿಗಳನ್ನು ಖರೀದಿಸುತ್ತಿದ್ದಾರೆ. ಇದರಿಂದಾಗಿ ನಮಗೆ ಶೇ.10-15ರಷ್ಟು ಪ್ರಮಾಣದ ವ್ಯಾಪಾರ ನಷ್ಟವಾಗಿದೆ ಎಂದರು. ಮುಂದಿನ ವರ್ಷದಿಂದ ಇಂತಹ ಆನ್ಲೈನ್ ವ್ಯಾಪಾರಕ್ಕೆ ಕಡಿವಾಣ ಹಾಕುತ್ತೇವೆ. ಇದಕ್ಕೆ ಸಂಘಟನೆಯಿಂದ ಹೋರಾಟ ನಡೆಸಲಾಗುವುದು. ನಗರದಲ್ಲಿರುವ ಪಾಲಿಕೆಗೆ ಸೇರಿದ ಎಲ್ಲ ಆಟದ ಮೈದಾನಗಳಲ್ಲಿ ನಮ್ಮ ಸದಸ್ಯರ 380 ರಿಂದ 423 ಮಳಿಗೆಗಳಲ್ಲಿ ವ್ಯಾಪಾರ ನಡೆದಿದೆ. ವ್ಯಾಪಾರ ಯಾವುದೇ ತೊಂದರೆ ಇಲ್ಲದೆ ಸಾಗಿದೆ ಎಂದರು.ಮಳೆಯಿಂದ ತೊಂದರೆ ಇಲ್ಲ
ಮಳೆಯಿಂದಾಗಿ ಗ್ರಾಹಕರ ಕೊರತೆಯೇನೂ ಇಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ಪಟಾಕಿ ಕ್ರೇಜ್ ಹೆಚ್ಚಾಗಿಯೇ ಇದೆ. ಮಾರಾಟ ಮಳಿಗೆಗಳಲ್ಲಿ ಪಟಾಕಿಯಿಂದ ಉಂಟಾಗುವ ಅನಾಹುತಗಳ ಬಗ್ಗೆ ಪೋಸ್ಟರ್ ಮತ್ತು ಬ್ಯಾನರ್ ಗಳನ್ನು ಹಾಕಿದ್ದೇವೆ. ಕೆಲ ಅಂಗಡಿಗಳಲ್ಲಿ ರಕ್ಷಣಾ ಕನ್ನಡಕಗಳನ್ನೂ ಮಾರಾಟ ಮಾಡುತ್ತಿದ್ದಾರೆ. ಆದರೆ, ಕೆಲವು ಅಂಗಡಿಗಳಲ್ಲಿ ಮಾರಾಟ ಮಾಡುತ್ತಿಲ್ಲ. ಮುಂದಿನ ವರ್ಷದಿಂದ ಪಟಾಕಿ ಸಿಡಿಸುವವರೂ, ನೋಡುವವರಿಗೂ ಕಡ್ಡಾಯವಾಗಿ ಕನ್ನಡಕ ಮಾರಾಟ ಮಾಡುತ್ತೇವೆ. ಪರಿಸರಕ್ಕೆ ಹಾನಿಯಾಗದಂತೆ ಹಸಿರು ಪಟಾಕಿಗಳನ್ನೇ ಮಾರಾಟ ಮಾಡುತ್ತಿದ್ದೇವೆ ಎಂದು ಕೇಶವ ತಿಳಿಸಿದರು. ದೀಪಾವಳಿ ಹಬ್ಬದ ಪ್ರಯುಕ್ತ ನಾಲ್ಕು ದಿನಗಳು ವ್ಯಾಪಾರ ನಡೆಯುತ್ತದೆ. ಈ ವರ್ಷ ಶನಿವಾರ, ಭಾನುವಾರ, ಸೋಮವಾರ, ಮಂಗಳವಾರ ವ್ಯಾಪಾರ ಹೆಚ್ಚಿರುತ್ತದೆ. ಬುಧವಾರ ಮಧ್ಯಾಹ್ನದವರೆಗೆ ಮಳಿಗೆ ಇರುತ್ತದೆ. ನಂತರ ತೆರವುಗೊಳಿಸುತ್ತೇವೆ. ಪಾಲಿಕೆ ಮತ್ತು ಪೊಲೀಸರಿಂದ ಅನುಮತಿ ಸಿಕ್ಕಿರುವುದು ಕೇವಲ4 ದಿನಕ್ಕೆ ಮಾತ್ರ. 4 ದಿನಗಳಲ್ಲಿ ಒಂದೊಂದು ಮಳಿಗೆಯವರು 8 -10 ಲಕ್ಷ ರು.ವ್ಯಾಪಾರ ಮಾಡುತ್ತೇವೆ ಎಂದು ಕೇಶವ ವಿವರಿಸಿದರು.