;Resize=(412,232))
ಬೆಂಗಳೂರು : ಚಾಲನಾ ಸಿಬ್ಬಂದಿಗಳಿಗೆ ಮಾರ್ಗ ನಿಯೋಜನೆಯಲ್ಲಿ ಪಾರದರ್ಶತೆ ಕಾಯ್ದುಕೊಳ್ಳುವ ಉದ್ದೇಶದಿಂದ ಡ್ಯೂಟಿ ರೋಟಾ ಪದ್ಧತಿ ಅಡಿಯಲ್ಲಿ ಕೌನ್ಸೆಲಿಂಗ್ ಮೂಲಕ ಮಾರ್ಗ ನಿಯೋಜನೆಗೆ ಬಿಎಂಟಿಸಿ ಮುಂದಾಗಿದೆ.
ಬಿಎಂಟಿಸಿಯಲ್ಲಿ ಚಾಲಕರಿಗೆ ಮಾರ್ಗ ನಿಯೋಜನೆಯಲ್ಲಿ ಪಕ್ಷಪಾತ ಮಾಡಲಾಗುತ್ತಿದೆ ಎಂಬ ಆರೋಪ ನಿವಾರಿಸಲು ಡ್ಯೂಟಿ ರೋಟಾ ಪದ್ಧತಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.
ಆಯಾ ವಿಭಾಗದಲ್ಲಿ ಮಾರ್ಗ ನಿಯೋಜನೆಗೆ ಜೇಷ್ಠತೆ ಹೊಂದಿರುವವರ ಜೇಷ್ಠತಾ ಪಟ್ಟಿ ಪ್ರದರ್ಶಿಸಬೇಕು ಹಾಗೂ ಡಿ. 3ರಂಡು ಡ್ಯೂಟಿ ರೋಟಾ ಬ್ಲಾಕ್‌ಗಳನ್ನು ಪ್ರದರ್ಶಿಸಬೇಕು. ಅದರ ಆಧಾರದಲ್ಲಿ ಡಿ. 9ರಿಂದ 18ರವರೆಗೆ ಕೌನ್ಸೆಲಿಂಗ್ ಸಭೆ ನಡೆಸಿ ಮಾರ್ಗಗಳನ್ನು ನಿಯೋಜಿಸಲಾಗುವುದು/ ನೂತನ ಮಾರ್ಗಗಳು ಮತ್ತು ಡ್ಯೂಟಿ ರೋಟಾ ಪದ್ಧತಿಯು 2026ರ ಜ. 1ರಿಂದ ಅನುಷ್ಠಾನವಾಗುವಂತೆ ಮಾಡಬೇಕೆಂದು ನಿಗಮ ಆದೇಶಿಸಿದೆ.