ಶಿವಾಚಾರ್ಯರು ಸೇರಿ ಮೂವರಿಗೆ ಪುಸ್ತಕ ಪ್ರಾಧಿಕಾರ ಪ್ರಶಸ್ತಿ ಘೋಷಣೆ

Published : Jul 28, 2026, 08:19 AM IST
Award

ಸಾರಾಂಶ

ಕನ್ನಡ ಪುಸ್ತಕ ಪ್ರಾಧಿಕಾರದ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳ ಪಟ್ಟಿ ಪ್ರಕಟಗೊಂಡಿದೆ. ಇದೇ ಮೊದಲ ಬಾರಿಗೆ ಪ್ರಾಧಿಕಾರ ಎರಡು ದತ್ತಿ ಬಹುಮಾನ ಸ್ಥಾಪಿಸಿದ್ದು, ಪ್ರತಿ ವರ್ಷ ಇಬ್ಬರು ಚುಟುಕು ಸಾಹಿತಿಗಳಿಗೆ ಈ ದತ್ತಿ ಬಹುಮಾನ ಕೊಡಲು ನಿರ್ಧರಿಸಲಾಗಿದೆ.

 ಬೆಂಗಳೂರು :  ಕನ್ನಡ ಪುಸ್ತಕ ಪ್ರಾಧಿಕಾರದ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳ ಪಟ್ಟಿ ಪ್ರಕಟಗೊಂಡಿದೆ. ಇದೇ ಮೊದಲ ಬಾರಿಗೆ ಪ್ರಾಧಿಕಾರ ಎರಡು ದತ್ತಿ ಬಹುಮಾನ ಸ್ಥಾಪಿಸಿದ್ದು, ಪ್ರತಿ ವರ್ಷ ಇಬ್ಬರು ಚುಟುಕು ಸಾಹಿತಿಗಳಿಗೆ ಈ ದತ್ತಿ ಬಹುಮಾನ ಕೊಡಲು ನಿರ್ಧರಿಸಲಾಗಿದೆ.

ಯಾರ್ಯಾರು ಆಯ್ಕೆ ?

ಸೋಮವಾರ ಈ ಕುರಿತು ಮಾಹಿತಿ ನೀಡಿರುವ ಪ್ರಾಧಿಕಾರದ ಅಧ್ಯಕ್ಷ ಡಾ। ಮಾನಸ ಅವರು, ಅತ್ಯುತ್ತಮ ಪ್ರಕಾಶನ ಪ್ರಶಸ್ತಿ - ಹೊಸಪೇಟೆಯ ಪಲ್ಲವ ಪ್ರಕಾಶನ (ಪ್ರಶಸ್ತಿ ಮೊತ್ತ ₹1 ಲಕ್ಷ ನಗದು), ಡಾ। ಎಂ.ಎಂ.ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ - ಮೈಸೂರಿನ ಡಾ। ರಾಮೇಗೌಡ (₹75 ಸಾವಿರ ನಗದು), ಡಾ। ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ - ಬೀದರ್‌ನ ಡಾ। ಶ್ರೀ ಚನ್ನವೀರ ಶಿವಾಚಾರ್ಯರು (₹50 ಸಾ. ನಗದು), ಡಾ। ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ - ಮಂಗಳೂರು ಡಾ। ಬಿ.ಶ್ರೀನಿವಾಸ ಕಕ್ಕಿಲಾಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಇದೇ ಮೊದಲ ಬಾರಿಗೆ ನೀಡಲಾಗುತ್ತಿರುವ ಎರಡು ದತ್ತಿ ಪ್ರಶಸ್ತಿ

ಇದೇ ಮೊದಲ ಬಾರಿಗೆ ನೀಡಲಾಗುತ್ತಿರುವ ಎರಡು ದತ್ತಿ ಪ್ರಶಸ್ತಿಗಳಲ್ಲಿ ಚುಟುಕು ಯೋಗಾಚಾರ್ಯ ಡಾ। ಎಂ.ಜಿ.ಆರ್.ಅರಸ್ ದತ್ತಿ ಬಹುಮಾನ - ಎ.ಈ. ವೀರಭದ್ರೇಗೌಡ ಆಂದಲೆ (ಚುಟುಕು ಮುಂಗಾರು ಹನಿಗಳು ಕವನ ಸಂಕಲನ) ಮತ್ತು ಡಾ। ಅಂಬಾ ಎಂ.ಜಿ.ಆರ್. ಅರಸ್ ದತ್ತಿ ಬಹುಮಾನ - ವಿ.ಸೀತಾಲಕ್ಷ್ಮಿವರ್ಮ (ಬೊಗಸೆಯೊಳಗಿನ ಚುಟುಕು ಸಾಗರ) ಅವರನ್ನು ಆಯ್ಕೆ ಮಾಡಲಾಗಿದ್ದು ಪ್ರಶಸ್ತಿಯು ತಲಾ ₹6 ಸಾವಿರ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

6 ತಿಂಗಳಲ್ಲಿ ಎಲ್ಲ ಆಸ್ತಿಗಳಿಗೆ ಇ-ಖಾತಾ : ಕೃಷ್ಣ
ಕೆಪಿಎಸ್ಸಿ: ಸಾಹುಕಾರ್‌ ಪುತ್ರಿಗೆ ಕೋರ್ಟ್‌ ಛೀಮಾರಿ-₹30 ಲಕ್ಷ ಆದಾಯವಿದ್ರೂ ₹40000 ಎಂದು ಪತ್ರ