ದಾಬಸ್‍ಪೇಟೆ: ರೋಟರಿ ಕ್ಲಬ್ ಆಫ್ ಬೆಂಗಳೂರು ಪಶ್ಚಿಮ ವತಿಯಿಂದ ಗುಡೇಮಾರನಹಳ್ಳಿಯ ಸಿದ್ಧಗಂಗಾ ಗ್ರಾಮಾಂತರ ಪ್ರೌಢಶಾಲೆ ಮತ್ತು ಸೋಲೂರಿನ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯ 200 ವಿದ್ಯಾರ್ಥಿಗಳಿಗೆ ನಿಘಂಟುಗಳು, ಇಂಗ್ಲೀಷ್ ವ್ಯಾಕರಣ ಪುಸ್ತಕಗಳು, ಎಸ್ಸೆಸ್ಸೆಲ್ಸಿ ನಾಲೆಡ್ಜ್ ಬ್ಯಾಂಕ್, ಎಸ್ಸೆಸ್ಸೆಲ್ಸಿ ಮ್ಯಾಥ್ ಮ್ಯಾಜಿಕ್ ಪುಸ್ತಕಗಳು, ಶಾಲಾ ಬ್ಯಾಗ್‍ಗಳು ಮತ್ತು ರೀಡಿಂಗ್ ಡೆಸ್ಕ್ ಗಳನ್ನು ವಿತರಿಸಲಾಯಿತು

ದಾಬಸ್‍ಪೇಟೆ: ರೋಟರಿ ಕ್ಲಬ್ ಆಫ್ ಬೆಂಗಳೂರು ಪಶ್ಚಿಮ ವತಿಯಿಂದ ಗುಡೇಮಾರನಹಳ್ಳಿಯ ಸಿದ್ಧಗಂಗಾ ಗ್ರಾಮಾಂತರ ಪ್ರೌಢಶಾಲೆ ಮತ್ತು ಸೋಲೂರಿನ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯ 200 ವಿದ್ಯಾರ್ಥಿಗಳಿಗೆ ನಿಘಂಟುಗಳು, ಇಂಗ್ಲೀಷ್ ವ್ಯಾಕರಣ ಪುಸ್ತಕಗಳು, ಎಸ್ಸೆಸ್ಸೆಲ್ಸಿ ನಾಲೆಡ್ಜ್ ಬ್ಯಾಂಕ್, ಎಸ್ಸೆಸ್ಸೆಲ್ಸಿ ಮ್ಯಾಥ್ ಮ್ಯಾಜಿಕ್ ಪುಸ್ತಕಗಳು, ಶಾಲಾ ಬ್ಯಾಗ್‍ಗಳು ಮತ್ತು ರೀಡಿಂಗ್ ಡೆಸ್ಕ್ ಗಳನ್ನು ವಿತರಿಸಲಾಯಿತು. ರೋಟರಿ ಕ್ಲಬ್ ಆಫ್ ಬೆಂಗಳೂರು ಪಶ್ಚಿಮ ಘಟಕದ ಅಧ್ಯಕ್ಷ ರಾಜೇಶ್ ಮಾತನಾಟಿ, ಮೂಲಭೂತ ಶಿಕ್ಷಣ ಮತ್ತು ಸಾಕ್ಷರತಾ ತಿಂಗಳ ಅಂಗವಾಗಿ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸುತ್ತಿದ್ದೇವೆ. ಅದಲ್ಲದೆ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನದ ಬಗ್ಗೆ ತರಬೇತಿ ನೀಡಿದ್ದೇವೆ. ಶಿಕ್ಷಕರಿಗೆ ಮಾದರಿ ಪ್ರತಿಕೃತಿ ಮೂಲಕ ಪ್ರಥಮ ಚಿಕಿತ್ಸೆ ಮತ್ತು ಸಿಪಿಆರ್ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ರೋಟರಿ ಪದಾಧಿಕಾರಿಗಳಾದ ಪ್ರದೀಪ್, ಸುಹಾಸ್ ಮತ್ತಿತರರು ಭಾಗವಹಿಸಿದ್ದರು.ಪೋಟೋ 4 :

ಗುಡೇಮಾರನಹಳ್ಳಿಯ ಸಿದ್ಧಗಂಗಾ ಗ್ರಾಮಾಂತರ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ನಿಘಂಟು, ಇಂಗ್ಲಿಷ್ ವ್ಯಾಕರಣ ಪುಸ್ತಕಗಳನ್ನು ರೋಟರಿ ಕ್ಲಬ್ ಆಫ್ ಬೆಂಗಳೂರು ಪಶ್ಚಿಮ ವತಿಯಿಂದ ವಿತರಿಸಲಾಯಿತು.