ಪ್ರಜ್ವಲ್‌ ಜೀವಾವಧಿಗೆ ಕಾರಣ ಆದ ಮೂವರಿಗೆ ಕೇಂದ್ರ ಗೃಹ ಪ್ರಶಸ್ತಿ

Published : Nov 01, 2026, 05:30 AM IST
Prajwal Revanna

ಸಾರಾಂಶ

ಕೇಂದ್ರ ಗೃಹ ಸಚಿವಾಲಯದ ‘ಕೇಂದ್ರ ಗೃಹಮಂತ್ರಿ ದಕ್ಷಕ್‌ ಪ್ರಶಸ್ತಿ’ಗೆ ಪ್ರಸಕ್ತ ಸಾಲಿನ ಪುರಸ್ಕಾರಕ್ಕೆ ಹಾಸನ ಕ್ಷೇತ್ರದ ಜೆಡಿಎಸ್ ಪಕ್ಷದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾ*ರ ಪ್ರಕರಣದ ಎಸ್‌ಐಟಿ ತಂಡದ ಮೂವರು ಸೇರಿದಂತೆ ರಾಜ್ಯದ ಏಳು ಮಂದಿ ಪೊಲೀಸರು ಭಾಜನರಾಗಿದ್ದಾರೆ.

ಬೆಂಗಳೂರು : ಕೇಂದ್ರ ಗೃಹ ಸಚಿವಾಲಯದ ‘ಕೇಂದ್ರ ಗೃಹಮಂತ್ರಿ ದಕ್ಷಕ್‌ ಪ್ರಶಸ್ತಿ’ಗೆ ಪ್ರಸಕ್ತ ಸಾಲಿನ ಪುರಸ್ಕಾರಕ್ಕೆ ಹಾಸನ ಕ್ಷೇತ್ರದ ಜೆಡಿಎಸ್ ಪಕ್ಷದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾ*ರ ಪ್ರಕರಣದ ಎಸ್‌ಐಟಿ ತಂಡದ ಮೂವರು ಸೇರಿದಂತೆ ರಾಜ್ಯದ ಏಳು ಮಂದಿ ಪೊಲೀಸರು ಭಾಜನರಾಗಿದ್ದಾರೆ.

ಅಪರಾಧ ಪ್ರಕರಣಗಳ ತನಿಖೆಗೆ ಪೊಲೀಸರಿಗೆ ಕೇಂದ್ರ ಗೃಹ ಸಚಿವಾಲಯ ಪುರಸ್ಕಾರ ನೀಡುತ್ತಿದ್ದು, ಈ ಪದಕಕ್ಕೆ ಎನ್‌ಡಿಎ ಮೈತ್ರಿಕೂಟದ ಮಾಜಿ ಸಂಸದ ಪ್ರಜ್ವಲ್ ವಿರುದ್ಧ ಅತ್ಯಾ*ರ ಪ್ರಕರಣದ ತನಿಖಾಧಿಕಾರಿ ಹಾಗೂ ಅ‍ವರ ಇಬ್ಬರು ಸಹಾಯಕರನ್ನು ಆಯ್ಕೆ ಮಾಡುವ ಮೂಲಕ ಎಸ್‌ಐಟಿ ತನಿಖಾ ವೈಖರಿಗೆ ಕೇಂದ್ರ ಸರ್ಕಾರವು ಮೆಚ್ಚುಗೆ ಸೂಚಿಸಿದಂತಾಗಿದೆ.

ಹಲಸೂರು ಗೇಟ್ ಸಂಚಾರ ಠಾಣೆಯ ಇನ್ಸ್‌ಪೆಕ್ಟರ್‌ ಎನ್‌.ಶೋಭಾ, ಬೆಳಗಾವಿ ನಗರದ ಮಲಮಾರುತಿ ಠಾಣೆಯ ಇನ್ಸ್‌ಪೆಕ್ಟರ್‌ ಬಾವುದ್ದೀನ್ ರುಕ್ಮುದ್ದೀನ್‌ ಗಡೇಕರ್‌, ಡಿಜೆಪಿ ಕಚೇರಿಯ ಇನ್ಸ್‌ಪೆಕ್ಟರ್‌ ಎಂ.ಶ್ರೀನಿವಾಸ್ ರಾವ್‌, ರಾಯಚೂರು ಜಿಲ್ಲೆ ದೇವದುರ್ಗ ಠಾಣೆಯ ಇನ್ಸ್‌ಪೆಕ್ಟರ್ ಮಂಜುನಾಥ್‌, ಬೆಂಗಳೂರು ಪೂರ್ವ ವಿಭಾಗದ ಮಹಿಳಾ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಕೆ.ರತ್ನಮ್ಮ, ಸಿಐಡಿಯ ಹೆಡ್‌ ಕಾನ್‌ಸ್ಟೇಬಲ್‌ ವೈ.ಬಾಲಕೃಷ್ಣ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್ಎಲ್‌)ನ ಮೈಸೂರು ವಲಯದ ಉಪ ನಿರ್ದೇಶಕ ಡಾ.ಚಂದ್ರಶೇಖರ್‌ ಅವರಿಗೆ ಕೇಂದ್ರ ಪ್ರಶಸ್ತಿ ಸಂದಿದೆ.

 ಪ್ರಜ್ವಲ್‌ಗೆ ಶಿಕ್ಷೆ ಕೊಡಿಸಿದ ಪಿಐಗೆ ಪ್ರಶಸ್ತಿ 

ಲೈಂಗಿಕ ದೌರ್ಜನ್ಯ ಸಂಬಂಧ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮೂರು ಅತ್ಯಾ*ರ ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ ಮನೆ ಸಹಾಯಕಿ ಮೇಲೆ ಅತ್ಯಾ*ರ ಪ್ರಕರಣದ ತನಿಖೆಯನ್ನು ಇನ್ಸ್‌ಪೆಕ್ಟರ್ ಎನ್.ಶೋಭಾ ನೇತೃತ್ವದ ತಂಡ ನಡೆಸಿತ್ತು. ಈ ತಂಡದಲ್ಲಿ ತನಿಖಾಧಿಕಾರಿಗೆ ಸಹಾಯಕರಾಗಿ ಎಎಸ್ಐ ರತ್ನಮ್ಮ ಹಾಗೂ ಮುಖ್ಯ ಪೇದೆ ಬಾಲಕೃಷ್ಣ ಇದ್ದರು. ಇದೇ ಪ್ರಕರಣದಲ್ಲೇ ಪ್ರಜ್ವಲ್ ಅವರಿಗೆ ಜೀವಾವಧಿ ಶಿಕ್ಷೆಯಾಗಿದೆ.

ಎಸ್‌ಐಟಿಗೆ ರಾಜ್ಯ ಸರ್ಕಾರವು 30 ಲಕ್ಷ ರು.ಗಳ ನಗದು ಬಹುಮಾನ

ಈ ಹಗರಣದ ಎಸ್‌ಐಟಿಗೆ ರಾಜ್ಯ ಸರ್ಕಾರವು 30 ಲಕ್ಷ ರು.ಗಳ ನಗದು ಬಹುಮಾನ ನೀಡಿದ್ದಕ್ಕೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ, ಕೇಂದ್ರ ಬೃಹತ್ ಕೈಗಾರಿಕಾ ಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಮತ್ತು ಪ್ರಜ್ವಲ್ ಅವರ ತಂದೆ ಎಚ್‌.ಡಿ.ರೇವಣ್ಣ ಕಟುವಾಗಿ ಟೀಕಿಸಿದ್ದರು. ತಮ್ಮ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಬಳಸಿಕೊಂಡ ಎಸ್‌ಐಟಿಗೆ ಸರ್ಕಾರ ಬಹುಮಾನ ನೀಡಿದೆ ಎಂದು ಜೆಡಿಎಸ್ ನಾಯಕರು ವ್ಯಂಗ್ಯವಾಡಿದ್ದರು.

ಆದರೀಗ ಎನ್‌ಡಿಎ ಮೈತ್ರಿಕೂಟದ ಮಾಜಿ ಸಂಸದ ಪ್ರಜ್ವಲ್ ವಿರುದ್ಧ ಅತ್ಯಾ*ರ ಪ್ರಕರಣಕ್ಕೆ ಅತ್ಯುತ್ತಮ ತನಿಖೆ ಎಂದು ಗುರುತಿಸಿ ತನಿಖಾಧಿಕಾರಿ ಹಾಗೂ ಅವರ ಸಹಾಯಕ ಸಿಬ್ಬಂದಿಗೆ ಕೇಂದ್ರ ಸರ್ಕಾರವೇ ಪ್ರಶಸ್ತಿ ನೀಡಿರುವುದು ಇಲಾಖೆಯಲ್ಲಿ ಹುಬ್ಬೇರುವಂತೆ ಮಾಡಿದೆ. ಅಲ್ಲದೆ ಕೇಂದ್ರ ಗೃಹ ಮಂತ್ರಿ ದಕ್ಷಕ್ ಪುರಸ್ಕಾರವು ಎಸ್‌ಐಟಿ ವಿರುದ್ಧ ರಾಜಕೀಯ ಟೀಕೆಗಳಿಗೆ ಪರೋಕ್ಷ ಉತ್ತರವಾಗಿದೆ ಎಂಬ ಮಾತುಗಳು ಇಲಾಖೆಯಲ್ಲಿ ಕೇಳಿ ಬಂದಿವೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಬೆಂಗಳೂರು ಹೋಟೆಲ್‌ ಈಜು ಕೊಳದಲ್ಲಿ 2 ವಿದೇಶಿಗರ ಸಾವು
ಕಬ್ಬು ಬೆಳೆಗಾರರ ಕಿಚ್ಚು ತೀವ್ರ