7,000 ಕಾಲೇಜು ವಿದ್ಯಾರ್ಥಿಗಳಿಗೆ ಎಚ್‌ಐವಿ ಸುಳ್ಳು: ಸಚಿವ ಖಾದರ್‌

Published : Aug 02, 2026, 11:33 AM IST
UT Khader

ಸಾರಾಂಶ

‘ರಾಜ್ಯದ 7,000 ಕಾಲೇಜು ವಿದ್ಯಾರ್ಥಿಗಳಲ್ಲಿ ಎಚ್‌ಐವಿ ಸೋಂಕು ಕಂಡುಬಂದಿದೆ ಎಂಬುದು ಸುಳ್ಳು ಮಾಹಿತಿ. ಈ ರೀತಿಯ ವರ್ಗೀಕರಣವೇ ಮಾಡಿಲ್ಲ. ಆದರೆ, ಮೂರು ತಿಂಗಳಲ್ಲಿ ಜನಸಾಮಾನ್ಯರಲ್ಲಿ 3,091 ಎಚ್‌ಐವಿ ಸೋಂಕು ಪ್ರಕರಣ ಪತ್ತೆಯಾಗಿದೆ’ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್‌ ಹೇಳಿದ್ದಾರೆ.

 ಬೆಂಗಳೂರು :  ‘ರಾಜ್ಯದ 7,000 ಕಾಲೇಜು ವಿದ್ಯಾರ್ಥಿಗಳಲ್ಲಿ ಎಚ್‌ಐವಿ ಸೋಂಕು ಕಂಡುಬಂದಿದೆ ಎಂಬುದು ಸುಳ್ಳು ಮಾಹಿತಿ. ಈ ರೀತಿಯ ವರ್ಗೀಕರಣವೇ ಮಾಡಿಲ್ಲ. ಆದರೆ, ಮೂರು ತಿಂಗಳಲ್ಲಿ ಜನಸಾಮಾನ್ಯರಲ್ಲಿ 3,091 ಎಚ್‌ಐವಿ ಸೋಂಕು ಪ್ರಕರಣ ಪತ್ತೆಯಾಗಿದೆ’ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್‌ ಹೇಳಿದ್ದಾರೆ.

ಕಾಲೇಜು ವಿದ್ಯಾರ್ಥಿಗಳಲ್ಲಿ ಎಚ್ಐವಿ ಸೋಂಕು ಎಂಬ ಸುದ್ದಿಯಿಂದ ಗೊಂದಲಗಳು ಸೃಷ್ಟಿಯಾಗಿವೆ. ಎಚ್‌ಐವಿ ಸೋಂಕಿತರಲ್ಲಿ ಕಾಲೇಜು ವಿದ್ಯಾರ್ಥಿಗಳೆಷ್ಟು ಎಂಬ ಕುರಿತು ವರ್ಗೀಕರಣವೇ ಮಾಡಿಲ್ಲ. ಹೀಗಾಗಿ ಸುಳ್ಳು ಮಾಹಿತಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟಪಡಿಸಿದರು.

ಆರೋಗ್ಯ ಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಮೂರು ತಿಂಗಳಲ್ಲಿ 3,091 ಎಚ್‌ಐವಿ ಸೋಂಕು ಪ್ರಕರಣ ಪತ್ತೆಯಾಗಿವೆ ಹಾಗೂ ಗರ್ಭಿಣಿಯರಲ್ಲಿ 111 ಎಚ್‌ಐವಿ ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದರು.

ರಾಜ್ಯದಲ್ಲಿ ಎಚ್‌ಚ್‌ಐವಿ ಸ್ಥಿತಿ ತಿಳಿಯದೇ ಇರುವವರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಅಭಿಯಾನ ಪ್ರಾರಂಭಿಸಲಾಗಿದೆ. ಡೇಟಿಂಗ್ ಆ್ಯಪ್, ಮತ್ತು ವಿವಿಧ ಮಾಧ್ಯಮಗಳಲ್ಲಿ ಜಾಹೀರಾತು ನೀಡಿ, ಎಚ್‌ಐವಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಖಾದರ್ ವಿವರಿಸಿದರು.

 2 ತಿಂಗಳು ಯುವಜನರಲ್ಲಿ ಎಚ್ಐವಿ ಜಾಗೃತಿ:

ಯುವ ಜನರಲ್ಲಿ ಎಚ್‌ಐವಿ ಕುರಿತು ಜಾಗೃತಿ ಮೂಡಿಸಲು ಆ.12 ರಿಂದ ಅ.12 ರವರೆಗೆ ಎರಡು ತಿಂಗಳ ಕಾಲ ಐಇಸಿ ಪ್ರಚಾರಾಂದೋಲನ ಕೈಗೊಳ್ಳಲು ನಿರ್ಧರಿಸಲಾಗಿದೆ. ಅಂತರಾಷ್ಟ್ರೀಯ ಯುವ ದಿನದ ಅಂಗವಾಗಿ ಆಂದೋಲನ ನಡೆಸುತ್ತಿದ್ದು, ಕೇಂದ್ರ ಸರ್ಕಾರ ಎಚ್ಐವಿ ಕುರಿತು ಅರಿಯಲು ಪ್ರತ್ಯೇಕ SOCH Portal ಪೋರ್ಟಲ್‌ ಅಭಿವೃದ್ಧಿಪಡಿಸಿದೆ.

ನೋ ಯುವರ್ ಹೆಲ್ತ್ ಸ್ಟೇಟಸ್‌ ಮೂಲಕ ಕ್ಯೂಆರ್ ಕೋಡ್‌ ಸ್ಕ್ಯಾನ್ ಮಾಡಿ ತಮಗಿರುವ ಎಚ್‌ಐವಿ ಸ್ಥಿತಿ ತಿಳಿದುಕೊಳ್ಳಬಹುದು. ದೇಶದಲ್ಲೇ ಅತೀ ಹೆಚ್ಚು ಜನರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿರುವ ರಾಜ್ಯ ಕರ್ನಾಟಕ. ಜುಲೈ ತಿಂಗಳಲ್ಲಿ 3,000 ಮಂದಿ ಸ್ಕ್ಯಾನ್‌ ಮಾಡಿ ತಮ್ಮ ಎಚ್ಐವಿ ಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ಖಾದರ್‌ ತಿಳಿಸಿದರು.

56,000 ಎಚ್ಐವಿ ಸೋಂಕಿತರಿಗೆ ತಮ್ಮ ಎಚ್ಐವಿ ಸ್ಥಿತಿ ಗೊತ್ತಿಲ್ಲವಂತೆ ಹೌದೇ? ಎಂಬ ಪ್ರಶ್ನೆಗೆ, ‘56000 ಇದು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ನೀಡಿರುವ ಅಂದಾಜು ಸಂಖ್ಯೆಯೇ ಹೊರತು ನಿರ್ದಿಷ್ಟ ಸಂಖ್ಯೆಯಲ್ಲ’ ಎಂದು ಹೇಳಿದರು.

ಜಾಹೀರಾತು ನೀಡಿ ಅರಿವು:

ರಾಜ್ಯದಲ್ಲಿ ಎಚ್‌ಚ್‌ಐವಿ ಸ್ಥಿತಿ ತಿಳಿಯದೇ ಇರುವವರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಅಭಿಯಾನ ಪ್ರಾರಂಭಿಸಲಾಗಿದೆ. ಡೇಟಿಂಗ್ ಆ್ಯಪ್, ಮತ್ತು ವಿವಿಧ ಮಾಧ್ಯಮಗಳಲ್ಲಿ ಜಾಹೀರಾತು ನೀಡಿ, ಎಚ್‌ಐವಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಖಾದರ್ ವಿವರಿಸಿದರು.

ಎಲ್ಲಾ ಗರ್ಭಿಣಿಯರಿಗೂ ಎಚ್‌ಐವಿ ಪರೀಕ್ಷೆ

ರಾಜ್ಯದಲ್ಲಿ ಎಲ್ಲಾ ಗರ್ಭಿಣಿಯರಿಗೂ ಅವರ ಅನುಮತಿ ಪಡೆದು ಎಚ್‌ಐವಿ ಪರೀಕ್ಷೆ ಮಾಡಲು ಮುಂದಾಗಿದ್ದೇವೆ. ಪರೀಕ್ಷೆ ಮಾಡಿ ಸೋಂಕು ಕಂಡುಬಂದರೆ ಕೂಡಲೇ ಎಆರ್‌ಟಿ ಚಿಕಿತ್ಸೆ ನೀಡಿ, ಸೋಂಕು ಮುಕ್ತ ಮಗು ಪಡೆಯಲು ಕ್ರಮ ಕೈಗೊಳ್ಳುತ್ತೇವೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದರು.

ಏಪ್ರಿಲ್ - ಜೂನ್

ಎಚ್‌ಐವಿ ಪರೀಕ್ಷೆಗೆ ಒಳಗಾದವರು - 55,3453

ಎಚ್‌ಐವಿ ಸೋಂಕು ದೃಢಪಟ್ಟರು - 3,091

- ಆರೋಗ್ಯ ಸಚಿವ ಖಾದರ್‌ ಸ್ಪಷ್ಟನೆ

- 3 ತಿಂಗಳಲ್ಲಿ 3,091 ಸೋಂಕು ಪತ್ತೆ

- 111 ಮಂದಿ ಗರ್ಭಿಣಿಯರಲ್ಲಿ ಸೋಂಕು

- ಯುವಕರಲ್ಲಿ ಜಾಗೃತಿ ಮೂಡಿಸಲು ಕ್ರಮ

- 2 ತಿಂಗಳು ಪ್ರಚಾರ ಅಭಿಯಾನ: ಸಚಿವ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಜುಲೈನಲ್ಲಿ ಶೇ.83ರಷ್ಟು ಮಳೆ ಕೊರತೆ - ಕಳೆದ 108 ವರ್ಷಗಳಲ್ಲಿ ದಾಖಲಾದ ಅತಿ ಕಡಿಮೆ ಮಳೆ
ಕಡೆಗೂ ಕುರ್ಚಿ ಬಿಟ್ಟ ಸಹಕಾರ ಮಹಾಮಂಡಳದ ಎಂಡಿ ಆಶಾ