ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳಸುವ ಸರ್ಕಾರಿ ಕಾರಿನ ಮೇಲೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಬಾಕಿ ಉಳಿದಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಈ ಬಗ್ಗೆ ಎಕ್ಸ್ ತಾಣದಲ್ಲಿ ‘ಆರ್‌ಸಿ ಬೆಂಗಳೂರು’ ಹೆಸರಿನ ಖಾತೆಯಲ್ಲಿ ಮುಖ್ಯಮಂತ್ರಿ ಅವರ ಕಾರಿನ ಫೋಟೋ ಹಾಕಿ ಪೋಸ್ಟ್ ಹಾಕಲಾಗಿದೆ.
ಮುಖ್ಯಮಂತ್ರಿಗಳ ಸರ್ಕಾರಿ ಕಾರು ಕೆಎ-05, ಜಿಎ-2023 ಕಾರಿನ ಮೇಲೆ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಏಳು ಪ್ರಕರಣಗಳು ಬಾಕಿ ಇದ್ದು, ಎರಡು ಸಾವಿರ ರು. ದಂಡ ಪಾವತಿಸಬೇಕಿದೆ. ಈಗ ಸಂಚಾರ ಪ್ರಕರಣಗಳ ದಂಡ ಪಾವತಿಗೆ ರಿಯಾಯ್ತಿ ಕೊಟ್ಟಿರುವ ಆಫರ್ ಬಳಸಿಕೊಂಡು ಮುಖ್ಯಮಂತ್ರಿ ಅವರ ಕಾರಿನ ದಂಡ ಪಾವತಿಸಲಿ ಎಂದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆದಿದೆ.