ಲೋಕಾಯುಕ್ತಕ್ಕೆ ನೀಡಲಾದ ಮುಡಾ ಕೇಸ್ ವಾಪಸ್ ಪಡೆಯಲು ಸ್ನೇಹಮಯಿಗೆ ಸಿಎಂ ಪತ್ನಿ ಆಮಿಷ

Published : Dec 19, 2024, 11:30 AM IST
Muda

ಸಾರಾಂಶ

ಲೋಕಾಯುಕ್ತ ನೀಡಲಾದ ಮುಡಾ ಪ್ರಕರಣದಿಂದ ಹಿಂದೆ ಸರಿಯುವಂತೆ ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಆಪ್ತ ಸಹಾಯಕ ಆಮಿಷ ಒಡ್ಡಿದ್ದಾರೆ ಎನ್ನಲಾಗಿದ್ದು, ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮೈಸೂರು : ಲೋಕಾಯುಕ್ತ ನೀಡಲಾದ ಮುಡಾ ಪ್ರಕರಣದಿಂದ ಹಿಂದೆ ಸರಿಯುವಂತೆ ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಆಪ್ತ ಸಹಾಯಕ ಆಮಿಷ ಒಡ್ಡಿದ್ದಾರೆ ಎನ್ನಲಾಗಿದ್ದು, ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮುಡಾ ಅಕ್ರಮ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ನಾನು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯನ್ನು ವಾಪಸ್ ಪಡೆಯುವಂತೆ ಪಾರ್ವತಿ ಅವರ ಆಪ್ತ ಎನ್ನಲಾದ ಹರ್ಷ ಎನ್ನುವವರು ಪತ್ರಕರ್ತರೊಬ್ಬರ ಜೊತೆ ಬಂದು ಹಣದ ಆಮಿಷ ಒಡ್ಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪ ಮಾಡಿದ್ದು, ಹರ್ಷ ಹಾಗೂ ಜತೆಗೆ ಬಂದ ಖಾಸಗಿ ವಾಹಿನಿಯ ಪತ್ರಕರ್ತ ಶ್ರೀನಿಧಿ ಎನ್ನುವವರ ವಿರುದ್ಧ ಸಿಸಿಟಿವಿ ದೃಶ್ಯ ಸಮೇತ ಲೋಕಾಯುಕ್ತರಿಗೆ ದೂರು ನೀಡುವೆ ಎಂದು ತಿಳಿಸಿದ್ದಾರೆ.

ಲೋಕಾಯುಕ್ತದಿಂದ ನಮಗೆ ಸಮಸ್ಯೆ ಇಲ್ಲ. ಕೇಸ್ ಸಿಬಿಐಗೆ ಹೋದರೆ ಸಮಸ್ಯೆಯಾಗುತ್ತದೆ. ಹಾಗಾಗಿ ನಿಮಗೆ ಎಷ್ಟು ಹಣ ಬೇಕು ಕೇಳಿ ನಾವು ಕೊಡುತ್ತೇವೆಂದು ಹರ್ಷ ಕಾಲು ಹಿಡಿದಿದ್ದಾರೆ. ಇದನ್ನ ನಾನು ನಿರಾಕರಿಸಿದೆ. ಅಲ್ಲದೆ, ನನ್ನ ಮಗನ ಬಳಿಗೆ ಹೋಗಿ ಮಾತನಾಡಿದ್ದು, ಈಗಾಗಲೇ ಇನ್ನೊಬ್ಬ ಹೋರಾಟಗಾರನಿಗೆ ₹3 ಕೋಟಿಗೆ ವ್ಯವಹಾರ ಮುಗಿಸಿದ್ದು, ಒಂದೂವರೆ ಕೋಟಿ ಕೊಟ್ಟಿದ್ದೇವೆಂದು ಹಣದ ಬ್ಯಾಗ್ ಸಹ ತೋರಿಸಿದ್ದಾರೆ. ಆದರೆ ನನ್ನ ಮಗ ಒಪ್ಪಿಲ್ಲ ಎಂದು ಸ್ನೇಹಮಯಿ ಗಂಭೀರ ಆರೋಪ ಮಾಡಿದ್ದಾರೆ.

ಸಿಸಿ ಕ್ಯಾಮೆರಾ ದೃಶ್ಯವನ್ನು ಸ್ನೇಹಮಯಿ ಕೃಷ್ಣ ಬಿಡುಗಡೆಗೊಳಿಸಿದ್ದು, ದೃಶ್ಯದಲ್ಲಿರುವ ಹರ್ಷ ಚಾಮರಾಜ ಕ್ಷೇತ್ರದ ಬಿಜೆಪಿ ಮುಖಂಡ ಎನ್ನಲಾಗಿದೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...