ನಗರದ ಹಲವೆಡೆ ಬಾಯ್ತೆರೆದಿರುವ ರಸ್ತೆ ಗುಂಡಿಗಳನ್ನು ಮುಚ್ಚಿ ಎಂದು ಹಾಲಿವುಡ್‌ನ ಖ್ಯಾತ ನಟ ಟಾಮ್ ಕ್ರೂಸ್ ಬಿಬಿಎಂಪಿ ಆಯುಕ್ತರಿಗೆ ಮನವಿ ಮಾಡಿದ್ದಾರೆ!
ಬೆಂಗಳೂರು : ನಗರದ ಹಲವೆಡೆ ಬಾಯ್ತೆರೆದಿರುವ ರಸ್ತೆ ಗುಂಡಿಗಳನ್ನು ಮುಚ್ಚಿ ಎಂದು ಹಾಲಿವುಡ್‌ನ ಖ್ಯಾತ ನಟ ಟಾಮ್ ಕ್ರೂಸ್ ಬಿಬಿಎಂಪಿ ಆಯುಕ್ತರಿಗೆ ಮನವಿ ಮಾಡಿದ್ದಾರೆ!
‘ಹೇ ಬೆಂಗಳೂರು ಬಿಬಿಎಂಪಿ ಕಮೀಷನರ್, ರಸ್ತೆಗುಂಡಿಗಳನ್ನು ಕ್ಲಿಯರ್ ಮಾಡಿ’ ಎಂದು ಭಿತ್ತಿಪತ್ರ ಹಿಡಿದುಕೊಂಡು ರಸ್ತೆ ಗುಂಡಿ ಮುಂದೆ ನಿಂತು ಮನವಿ ಮಾಡುವಂತೆ ಎ.ಐ ಸೃಷ್ಟಿತ ಛಾಯಾಚಿತ್ರವನ್ನು ನಮ್ಮ ಬೆಂಗಳೂರು ಬಿಬಿಎಂಪಿ ಹೆಸರಿನ ಎಕ್ಸ್ ಖಾತೆಗೆ ಲಿಂಕ್ ಮಾಡಲಾಗಿದೆ.
ನಗರದ ಅನೇಕ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲಿ ಗುಂಡಿಗಳು ಇನ್ನಷ್ಟು ಹೆಚ್ಚಾಗಿವೆ. ಅದರ ಜೊತೆಗೆ ನಗರದ ವಿವಿಧೆಡೆ ವಿದ್ಯುತ್ ವೈರ್‌ಗಳನ್ನು ಅಳವಡಿಸಲು ಕೆಪಿಟಿಸಿಎಲ್ ಕೂಡ ರಸ್ತೆ ಅಗೆದಿರುವ ಕಾರಣ ರಸ್ತೆ ಯಾವುದು, ಗುಂಡಿ ಯಾವುದು ಎಂದು ಗುರಿತಿಸಲಾಗದೇ ವಾಹನ ಸವಾರರು ಸಂಕಷ್ಟ ಎದುರಿಸುತ್ತಿದ್ದಾರೆ.
ಮುಖ್ಯರಸ್ತೆಗಳು, ಮೇಲ್ಸೆತುವೆಗಳು, ಸಂಪರ್ಕ ರಸ್ತೆ, ಬಡಾವಣೆ ರಸ್ತೆಗಳು ಸೇರಿ ಬಹಳಷ್ಟು ಕಡೆಗಳಲ್ಲಿ ರಸ್ತೆಗಳಲ್ಲಿ ಗುಂಡಿಯಾಗಿವೆ. ಇದರಿಂದ ಟ್ರಾಫಿಕ್ ಜಾಮ್ ಆಗಿ ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಜೊತೆಗೆ ಧೂಳು ಏಳುತ್ತಿರುವುದರಿಂದ ವಾಹನ ಸವಾರರಿಗೆ ಹಾಗೂ ರಸ್ತೆಯ ಅಕ್ಕ ಪಕ್ಕದ ಅಂಗಡಿ, ಮನೆಗಳ ವಾಸಿಗಳಿಗೆ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಈ ವಿಚಾರದ ಬಗ್ಗೆ ಬಿಬಿಎಂಪಿ ಮತ್ತು ಸರ್ಕಾರದ ಗಮನ ಸೆಳೆಯಲು ಟಾಮ್ ಕ್ರೂಸ್ ಹೆಸರಿನಲ್ಲಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ.