ಕೊರೋನಾ: ರಾಜ್ಯದಲ್ಲಿ ನಿನ್ನೆ 17 ಮಂದಿಗೆ ಸೋಂಕು ದೃಢ

Published : Jun 02, 2025, 10:49 AM IST
covid 19

ಸಾರಾಂಶ

ರಾಜ್ಯದಲ್ಲಿ ಭಾನುವಾರ ಕೊರೋನಾ ಸೋಂಕು ಪ್ರಕರಣ ಸ್ವಲ್ಪಮಟ್ಟಿಗೆ ಇಳಿಮುಖವಾಗಿದ್ದು, 17 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸಕ್ರಿಯ ಸೋಂಕು ಪ್ರಕರಣ 253ಕ್ಕೆ ಏರಿಕೆಯಾಗಿದೆ.

 ಬೆಂಗಳೂರು : ರಾಜ್ಯದಲ್ಲಿ ಭಾನುವಾರ ಕೊರೋನಾ ಸೋಂಕು ಪ್ರಕರಣ ಸ್ವಲ್ಪಮಟ್ಟಿಗೆ ಇಳಿಮುಖವಾಗಿದ್ದು, 17 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸಕ್ರಿಯ ಸೋಂಕು ಪ್ರಕರಣ 253ಕ್ಕೆ ಏರಿಕೆಯಾಗಿದೆ.

ಭಾನುವಾರದ ವೇಳೆಗೆ 24 ಗಂಟೆಗಳಲ್ಲಿ 257 ಆರ್‌ಟಿ-ಪಿಸಿಆರ್‌, 19 ರ್‍ಯಾಪಿಡ್‌ ಆ್ಯಂಟಿಜೆನ್‌ 276 ಪರೀಕ್ಷೆ ನಡೆಸಲಾಗಿದೆ. ಈ ಪೈಕಿ ಶೇ.6.1 ಪಾಸಿಟಿವಿ ದರದಂತೆ 17 ಮಂದಿಗೆ ಸೋಂಕು ದೃಢಪಟ್ಟಿದೆ.

ಜ.1ರಿಂದ ಈವರೆಗೆ ಒಟ್ಟು 442 ಪ್ರಕರಣ ವರದಿಯಾಗಿದ್ದು, 185 ಮಂದಿ ಗುಣಮುಖರಾಗಿದ್ದಾರೆ. ಉಳಿದಂತೆ 4 ಮಂದಿ ಮೃತಪಟ್ಟಿದ್ದಾರೆ.

ಸದ್ಯ 253 ಸಕ್ರಿಯ ಸೋಂಕು ಪ್ರಕರಣಗಳು ಇದ್ದು, 250 ಮಂದಿ ಮನೆಯಲ್ಲೇ ಆರೈಕೆಯಲ್ಲಿದ್ದಾರೆ. ಮೂರು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರು ಖಾಸಗಿ ಹಾಗೂ ಒಬ್ಬರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಮೂರು ಮಂದಿಯ ಆರೋಗ್ಯವೂ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Read more Articles on

Recommended Stories

ಕೊಪ್ಪಳ ಜಿಲ್ಲೆಯಲ್ಲಿ ಮಣ್ಣು ತಿಂದು ರೈತ ಸಿಡಿಮಿಡಿ । ನಿಲ್ಲದ ರೈತರ ಯೂರಿಯಾ ಆಕ್ರೋಶ
ಡಿಕೆ ಮಹದಾಯಿ ಹೇಳಿಕೆಗೆ ಗೋವಾ ಸಿಎಂ ಆಕ್ರೋಶ