ಮಿನಿಮಮ್‌ ಬ್ಯಾಲೆನ್ಸ್‌ ಶುಲ್ಕ ಮನ್ನಾ ಮಾಡಿದ ಕೆನರಾ ಬ್ಯಾಂಕ್

Published : Jun 02, 2025, 09:56 AM IST
Canara Bank

ಸಾರಾಂಶ

ಕೆನರಾ ಬ್ಯಾಂಕ್ ಖಾತೆಗಳಲ್ಲಿ  ಕನಿಷ್ಠ ತಿಂಗಳ ಮೊತ್ತ  ಕಾಯ್ದುಕೊಳ್ಳದಿದ್ದರೆ ವಿಧಿಸುತ್ತಿದ್ದ ದಂಡ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡುವುದಾಗಿ ಘೋಷಿಸಿದೆ.

 ಬೆಂಗಳೂರು : ಸಾರ್ವಜನಿಕ ವಲಯದಲ್ಲಿ ಪ್ರಮುಖವಾದ ಕೆನರಾ ಬ್ಯಾಂಕ್ ತನ್ನ ಉಳಿತಾಯ ಖಾತೆ, ವೇತನ ಖಾತೆ, ಅನಿವಾಸಿ ಭಾರತೀಯ (ಎನ್‌ಆರ್‌ಐ ಎಸ್‌ಬಿ) ಉಳಿತಾಯ ಖಾತೆಗಳೂ ಸೇರಿ ಎಲ್ಲಾ ರೀತಿಯ ಉಳಿತಾಯ ಬ್ಯಾಂಕ್ ಖಾತೆಗಳಲ್ಲಿ (ಎಸ್‌ಬಿ) ಕನಿಷ್ಠ ತಿಂಗಳ ಮೊತ್ತ (ಎಎಂಬಿ) ಕಾಯ್ದುಕೊಳ್ಳದಿದ್ದರೆ ವಿಧಿಸುತ್ತಿದ್ದ ದಂಡ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡುವುದಾಗಿ ಘೋಷಿಸಿದೆ.

ಜೂ.1ರಿಂದ ಅನ್ವಯಿಸುವಂತೆ ಕೆನರಾ ಬ್ಯಾಂಕ್ ಎಲ್ಲಾ ರೀತಿಯ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಮೊತ್ತ ಇಲ್ಲದಿದ್ದರೂ ಗ್ರಾಹಕರಿಗೆ ದಂಡ ವಿಧಿಸುವುದಿಲ್ಲ. ಈ ಮೊದಲು, ಬ್ಯಾಂಕ್‌ನ ಗ್ರಾಹಕರು ತಮ್ಮ ಖಾತೆಯಲ್ಲಿ ತಿಂಗಳಿಗೆ ಕನಿಷ್ಠ ಮೊತ್ತ ಇಟ್ಟುಕೊಳ್ಳಬೇಕಿತ್ತು. ಬ್ಯಾಂಕ್‌ನ ಹೊಸ ನಿರ್ಧಾರದಿಂದ ವೇತನ ವರ್ಗ, ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಎನ್‌ಆರ್‌ಐ ಮತ್ತು ಮೊದಲ ಬಾರಿಗೆ ಬ್ಯಾಂಕಿಂಗ್ ಸೇವೆ ಬಳಸುವವರಿಗೆ ಅನುಕೂಲ ಆಗಲಿದೆ.

PREV
Read more Articles on

Recommended Stories

ಕೊಪ್ಪಳ ಜಿಲ್ಲೆಯಲ್ಲಿ ಮಣ್ಣು ತಿಂದು ರೈತ ಸಿಡಿಮಿಡಿ । ನಿಲ್ಲದ ರೈತರ ಯೂರಿಯಾ ಆಕ್ರೋಶ
ಡಿಕೆ ಮಹದಾಯಿ ಹೇಳಿಕೆಗೆ ಗೋವಾ ಸಿಎಂ ಆಕ್ರೋಶ