ದಾಬಸ್‍ಪೇಟೆ: ವಿದ್ಯಾರ್ಥಿಗಳು ಕಲಿಕೆ ಹಂತದಲ್ಲೇ ಬದುಕಿನ ಗುರಿಯತ್ತ ಸಾಗಬೇಕು. ಗುರಿ ಸಾಧನೆಗೆ ಪರಿಶ್ರಮ ಮತ್ತು ಸಂಸ್ಕಾರಯುತ ಕಲಿಕೆ ಅಗತ್ಯ ಎಂದು ನಿವೃತ್ತ ಉಪನ್ಯಾಸಕಿ ಸಿ.ಎನ್.ಭುವನೇಶ್ವರಿ ಹೇಳಿದರು.ತ್ಯಾಮಗೊಂಡ್ಲು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2025-26ನೇ ಶೈಕ್ಷಣಿಕ ಸಾಲಿನ ಎನ್‍ಎಸ್‍ಎಸ್, ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಾಂಶುಪಾಲರಾದ ಪ್ರೊ. ಜಯಶ್ರೀ ಮಾತನಾಡಿ, ಖಾಸಗಿ ಕಾಲೇಜುಗಳ ಹಾವಳಿಯಿಂದ ಸರ್ಕಾರಿ ಕಾಲೇಜುಗಳ ದಾಖಲಾತಿ ಕುಸಿಯುತ್ತಿದೆ. ಸರ್ಕಾರಿ ಕಾಲೇಜುಗಳಿಗೆ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳ ದಾಖಲಾತಿಯೇ ಹೆಚ್ಚು. ಅವರನ್ನು ಉಪನ್ಯಾಸಕರು ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗುವಂತೆ ತಯಾರು ಮಾಡಲು ಪೋಷಕರ ಸಹಕಾರ ಅಗತ್ಯ ಎಂದರು. ಕಾರ್ಯಕ್ರಮದಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಗ್ರಾಪಂ ಸದಸ್ಯ ಮಹಿಮಣ್ಣ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರಾಜಣ್ಣ, ಮಾರುತಿ, ಮಾಜಿ ಅಧ್ಯಕ್ಷ ನಾಗರಾಜು, ಕಂಟಲಗೆರೆ ಸಣ್ಣಹೊನ್ನಯ್ಯ, ಉಪನ್ಯಾಸಕರಾದ ಪ್ರಕಾಶ್, ಶಿವಕುಮಾರ್, ಅಕ್ಷತ, ಬಸವರಾಜೇಶ್ವರಿ, ಮಧುರ, ವಿಶ್ಲೇಶ್, ಶೋಭಾ, ಮಂಜುನಾಥ್, ಶ್ರೀನಿವಾಸ್, ಶಾಂತಕುಮಾರ್, ಸಿಬ್ಬಂದಿ ದೇವರಾಜು ಉಪಸ್ಥಿತರಿದ್ದರು.ಪೋಟೋ 4: ತ್ಯಾಮಗೊಂಡ್ಲು ಸರ್ಕಾರಿ ಪದವಿ ಪೂರ್ವ ಕಾಲೇಜಿನ 2025-26ನೇ ಶೈಕ್ಷಣಿಕ ಸಾಲಿನ ಎನ್‍ಎಸ್ ಎಸ್. ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ನಿವೃತ್ತ ಉಪನ್ಯಾಸಕ ಸಿ.ಎನ್.ಭುವನೇಶ್ವರಿ, ಮತ್ತಿತರ ಗಣ್ಯರು ಉದ್ಘಾಟಿಸಿದರು.
ಗುರಿ ಸಾಧನೆಗೆ ಶ್ರಮ ಮುಖ್ಯ: ಭುವನೇಶ್ವರಿ
ದಾಬಸ್‍ಪೇಟೆ: ವಿದ್ಯಾರ್ಥಿಗಳು ಕಲಿಕೆ ಹಂತದಲ್ಲೇ ಬದುಕಿನ ಗುರಿಯತ್ತ ಸಾಗಬೇಕು. ಗುರಿ ಸಾಧನೆಗೆ ಪರಿಶ್ರಮ ಮತ್ತು ಸಂಸ್ಕಾರಯುತ ಕಲಿಕೆ ಅಗತ್ಯ ಎಂದು ನಿವೃತ್ತ ಉಪನ್ಯಾಸಕಿ ಸಿ.ಎನ್.ಭುವನೇಶ್ವರಿ ಹೇಳಿದರು
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.