ಪಶ್ಚಿಮಘಟ್ಟದ ಧಾರಣಾ ಸಾಮರ್ಥ್ಯ ಅಧ್ಯಯನಕ್ಕೆ ರಾಜ್ಯ ಸರ್ಕಾರ ಸೂಚನೆ

Published : Jun 02, 2025, 09:52 AM IST
Western Ghat

ಸಾರಾಂಶ

ಮಳೆಗಾಲದಲ್ಲಿ ಗುಡ್ಡ ಕುಸಿತ, ಬೇಸಿಗೆಯಲ್ಲಿ ನೀರಿನ ಅಭಾವ, ಜೀವವೈವಿಧ್ಯಕ್ಕೆ ಬಂದಿರುವ ಕುತ್ತು ಸೇರಿ ಇತರೆ ದುಷ್ಪರಿಣಾಮಗಳಿಂದ ಎಚ್ಚೆತ್ತ ಸರ್ಕಾರ ರಾಜ್ಯದ ಪಶ್ಚಿಮಘಟ್ಟ ಪ್ರದೇಶದ ಧಾರಣಾ ಸಾಮರ್ಥ್ಯ ಅಧ್ಯಯನ ನಡೆಸಿ ವರದಿ ಪಡೆಯಲು ಮುಂದಾಗಿದೆ.

 ಬೆಂಗಳೂರು : ಮಳೆಗಾಲದಲ್ಲಿ ಗುಡ್ಡ ಕುಸಿತ, ಬೇಸಿಗೆಯಲ್ಲಿ ನೀರಿನ ಅಭಾವ, ಜೀವವೈವಿಧ್ಯಕ್ಕೆ ಬಂದಿರುವ ಕುತ್ತು ಸೇರಿ ಇತರೆ ದುಷ್ಪರಿಣಾಮಗಳಿಂದ ಎಚ್ಚೆತ್ತ ಸರ್ಕಾರ ರಾಜ್ಯದ ಪಶ್ಚಿಮಘಟ್ಟ ಪ್ರದೇಶದ ಧಾರಣಾ ಸಾಮರ್ಥ್ಯ ಅಧ್ಯಯನ ನಡೆಸಿ ವರದಿ ಪಡೆಯಲು ಮುಂದಾಗಿದೆ.

ಧಾರಣಾ ಸಾಮರ್ಥ್ಯ ಕುರಿತು ಅಧ್ಯಯನ ನಡೆಸಿ ಮೂರು ತಿಂಗಳ ಒಳಗಾಗಿ ಸಮಗ್ರ ವರದಿಯನ್ನು ಕಡತದಲ್ಲಿ ಸಲ್ಲಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಸೂಚಿಸಿದ್ದಾರೆ.

ಕರ್ನಾಟಕದ ಅರಣ್ಯಗಳ ಪೈಕಿ ಶೇ.60ರಷ್ಟು ಜೀವವೈವಿಧ್ಯತೆಯ ತಾಣವಾದ ಪಶ್ಚಿಮಘಟ್ಟ ಪ್ರದೇಶದಲ್ಲಿದೆ. ಇದು ಸಸ್ಯಸಂಕುಲ, ಪ್ರಾಣಿ ಸಂಕುಲ, ಕೀಟ ಸಂಕುಲಗಳ ನೆಲೆವೀಡಾಗಿದೆ. ಮಿಗಿಲಾಗಿ ಮಾರುತಗಳನ್ನು ತಡೆದು ದೇಶಾದ್ಯಂತ ಮಳೆ ಸುರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇಂಥ ಮಹತ್ವದ ಪಶ್ಚಿಮಘಟ್ಟ ಪ್ರದೇಶದಲ್ಲಿ ಹಲವು ರಸ್ತೆಗಳು, ಯೋಜನೆಗಳು ಕಾರ್ಯಗತವಾಗುತ್ತಿದ್ದು, ಇದರಿಂದ ಪಶ್ಚಿಮಘಟ್ಟ ಅಪಾಯಕ್ಕೆ ಸಿಲುಕಿ, ಭೂಕುಸಿತಗಳು ಸಂಭವಿಸುತ್ತಿದೆ. ಇದರಿಂದ ಅಮೂಲ್ಯ ಜೀವಹಾನಿ, ಆಸ್ತಿ ಹಾನಿ ಹಾಗೂ ಬೆಳೆ ಹಾನಿ ಸಂಭವಿಸುತ್ತಿದ್ದು, ಸಸ್ಯಸಂಕುಲ, ಪ್ರಾಣಿಸಂಕುಲಕ್ಕೂ ಸಂಕಷ್ಟ ಎದುರಾಗಿದೆ. ಜೊತೆಗೆ ಮುಂಬರುವ ದಿನಗಳಲ್ಲಿ ರಾಜ್ಯಕ್ಕೆ ತೀವ್ರ ಜಲ ಕ್ಷಾಮ ಎದುರಾಗುವ ಭೀತಿ ಇದೆ ಎಂದು ಪರಿಸರ ತಜ್ಞರು, ವಿಜ್ಞಾನಿಗಳು ಹಾಗೂ ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಪಶ್ಚಿಮಘಟ್ಟದ ತಾಳಿಕೊಳ್ಳುವ (ಧಾರಣ) ಸಾಮರ್ಥ್ಯ ಕುರಿತು ಅಧ್ಯಯನ ನಡಸಿ ಸಮಗ್ರ ವರದಿ ಸಲ್ಲಿಸಲು ಸೂಚಿಸಲಾಗಿದೆ.

PREV
Read more Articles on

Recommended Stories

ಮಕ್ಕಳ ಕುಬ್ಜ ಬೆಳವಣಿಗೆ: 2 ಜಿಲ್ಲೆಯ ಸ್ಥಿತಿ ಕಳವಳ
ಕೊಪ್ಪಳ ಜಿಲ್ಲೆಯಲ್ಲಿ ಮಣ್ಣು ತಿಂದು ರೈತ ಸಿಡಿಮಿಡಿ । ನಿಲ್ಲದ ರೈತರ ಯೂರಿಯಾ ಆಕ್ರೋಶ