ಕುಸಿದ ಕರ್ನಾಟಕ ಕ್ರಿಕೆಟ್‌ ಗುಣಮಟ್ಟ - ಈ ಸಲ 7 ಟಿ20ಯಲ್ಲಿ ಗೆದ್ದಿದ್ದು ಕೇವಲ 2

Published : Dec 11, 2025, 12:51 PM IST
Cricket

ಸಾರಾಂಶ

ಈ ಬಾರಿ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಕರ್ನಾಟಕ 7 ಪಂದ್ಯಗಳಲ್ಲಿ ಕೇವಲ 2ರಲ್ಲಿ ಮಾತ್ರ ಗೆದ್ದು, ಗುಂಪು ಹಂತದಲ್ಲೇ ಹೊರಬಿದ್ದಿದೆ. ಟಿ20ಯಲ್ಲಿ ತಂಡದ ಕಳಪೆ ಪ್ರದರ್ಶನ ಈ ಬಾರಿ ಹೊಸದೇನಲ್ಲ

  ಬೆಂಗಳೂರು :  ಈ ಬಾರಿ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಕರ್ನಾಟಕ 7 ಪಂದ್ಯಗಳಲ್ಲಿ ಕೇವಲ 2ರಲ್ಲಿ ಮಾತ್ರ ಗೆದ್ದು, ಗುಂಪು ಹಂತದಲ್ಲೇ ಹೊರಬಿದ್ದಿದೆ. ಟಿ20ಯಲ್ಲಿ ತಂಡದ ಕಳಪೆ ಪ್ರದರ್ಶನ ಈ ಬಾರಿ ಹೊಸದೇನಲ್ಲ. ತಂಡ ಸತತ 3 ಆವೃತ್ತಿಗಳಲ್ಲೂ ನಾಕೌಟ್‌ ಪ್ರವೇಶಿಸಲು ವಿಫಲವಾಗಿದ್ದು, ಚುಟುಕು ಕ್ರಿಕೆಟ್‌ನಲ್ಲಿ ಕರ್ನಾಟಕ ಕ್ರಿಕೆಟ್‌ನ ಗುಣಮಟ್ಟ ಕುಸಿಯುತ್ತಿದೆಯೇ ಎಂಬ ಅನುಮಾನ ಕಾಡುವುದು ಸಹಜ.

2018-19, 2019-20ರಲ್ಲಿ ಸತತವಾಗಿ ಚಾಂಪಿಯನ್‌ ಆಗಿದ್ದ ಕರ್ನಾಟಕ, 2022-23ರಲ್ಲಿ ಕೊನೆ ಬಾರಿ ಕ್ವಾರ್ಟರ್‌ ಫೈನಲ್‌ಗೇರಿತ್ತು. ಆ ಬಳಿಕ ತಂಡ ನಾಕೌಟ್‌ಗೇರಿಲ್ಲ. 2023-24ರಲ್ಲಿ 3, 2024-25ರಲ್ಲಿ 3 ಪಂದ್ಯ ಗೆದ್ದಿದ್ದ ತಂಡ, ಈ ಬಾರಿ ಕೇವಲ 2ರಲ್ಲಿ ಜಯಗಳಿಸಿದೆ. ಟೂರ್ನಿಯಲ್ಲಿ ಒಟ್ಟು 32 ತಂಡಗಳಿದ್ದು, 2 ಅಥವಾ ಅದಕ್ಕಿಂತ ಕಡಿಮೆ ಪಂದ್ಯದಲ್ಲಿ ಗೆದ್ದ ತಂಡಗಳು 8. ಇದರಲ್ಲಿ ಕರ್ನಾಟಕವೂ ಒಳಗೊಂಡಿದೆ.

ಕೈಕೊಟ್ಟ ಸ್ಟಾರ್‌ಗಳು:

ಈ ಬಾರಿ ಟೂರ್ನಿಯ ಅಂಕಿ ಅಂಶ ಗಮನಿಸಿದರೆ ದೇವದತ್‌ ಪಡಿಕ್ಕಲ್‌(309 ರನ್‌) ಮತ್ತು ಆರ್‌.ಸ್ಮರಣ್‌(319 ರನ್‌) ಹೊರತುಪಡಿಸಿ ಇತರೆಲ್ಲರೂ ವಿಫಲರಾಗಿದ್ದಾರೆ. ನಾಯಕ ಮಯಾಂಕ್‌ 7 ಪಂದ್ಯದಲ್ಲಿ 135, ಕರುಣ್‌ ನಾಯರ್‌ 6 ಪಂದ್ಯದಲ್ಲಿ 71 ರನ್‌, ಶ್ರೀಜಿತ್‌ 3 ಪಂದ್ಯದಲ್ಲಿ 13, ಅಭಿನವ್‌ ಮನೋಹರ್‌ 4 ಪಂದ್ಯದಲ್ಲಿ 27 ರನ್‌ ಕಲೆಹಾಕಿದ್ದಾರೆ. ಬೌಲರ್‌ಗಳೂ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ವೈಶಾಖ್‌ 8.9ರ ಎಕಾನಮಿಯಲ್ಲಿ 9 ವಿಕೆಟ್‌, ವಿದ್ವತ್‌ 10.5ರ ಎಕಾನಮಿಯಲ್ಲಿ 3, ವಿದ್ಯಾಧರ್‌ ಪಾಟೀಲ್‌ 10.34ರ ಎಕಾನಮಿಯಲ್ಲಿ 8 ವಿಕೆಟ್‌ ಪಡೆದಿದ್ದಾರೆ.

ವಿಜಯ್‌ ಹಜಾರೆಯಲ್ಲಿ ತಂಡಕ್ಕೆ ಅಗ್ನಿಪರೀಕ್ಷೆ

ವಿಜಯ್ ಹಜಾರೆ ಏಕದಿನ ಟೂರ್ನಿ ಡಿ.24ರಿಂದ ಆರಂಭಗೊಳ್ಳಲಿದ್ದು, ಕರ್ನಾಟಕಕ್ಕೆ ಅಗ್ನಿಪರೀಕ್ಷೆ ಎದುರಾಗಲಿದೆ. ಕಳೆದ ಬಾರಿ ಚಾಂಪಿಯನ್‌ ಆಗಿದ್ದರೂ ಈ ಬಾರಿ ತಾರಾ ಆಟಗಾರರು ಫಾರ್ಮ್‌ನಲ್ಲಿಲ್ಲ. ದೇವದತ್‌, ಸ್ಮರಣ್‌ ಮಾತ್ರವಲ್ಲದೆ ಕರುಣ್‌ ನಾಯರ್‌, ಮಯಾಂಕ್‌, ಅಭಿನವ್‌, ಶ್ರೇಯಸ್‌ ಕೂಡಾ ಮಿಂಚಿದರಷ್ಟೇ ತಂಡ ಟ್ರೋಫಿ ತನ್ನಲ್ಲೇ ಉಳಿಸಿಕೊಳ್ಳಲಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ರೈಲುಗಳಲ್ಲಿ ಹೆಚ್ಚಾಗುತ್ತಲೇ ಇದೆ ಗಾಂಜಾ ಸಾಗಣೆ
ಯತೀಂದ್ರ ಹೇಳಿಕೆಯಿಂದ ರಾಜ್ಯದಲ್ಲಿ ಮತ್ತೆ ಸಿಎಂ ಕುರ್ಚಿ ಕಿಚ್ಚು