ದೇವನೂರುಗೆ ಪಂಪ, ಪ್ರಸನ್ನಗೆ ಕಾರಂತ ಪ್ರಶಸ್ತಿ

Published : Apr 16, 2026, 08:53 AM IST
Devanur Mahadev

ಸಾರಾಂಶ

2025-26ನೇ ಸಾಲಿನ ಬಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಜಕಣಾಚಾರಿ ವಿವಿಧ ಪ್ರಶಸ್ತಿಗಳು ಪ್ರಕಟಗೊಂಡಿವೆ. ಪಂಪ ಪ್ರಶಸ್ತಿಗೆ ದೇವನೂರು ಮಹಾದೇವ, ಬಿ.ವಿ.ಕಾರಂತ ಪ್ರಶಸ್ತಿಗೆ ಹಿರಿಯ ರಂಗಕರ್ಮಿ ಪ್ರಸನ್ನ ಮತ್ತು ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರ ಪ್ರಶಸ್ತಿಗೆ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ಆಯ್ಕೆ

 ಬೆಂಗಳೂರು :  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 2025-26ನೇ ಸಾಲಿನ ಬಸವ ರಾಷ್ಟ್ರೀಯ ಪ್ರಶಸ್ತಿ, ಪಂಪ ಪ್ರಶಸ್ತಿ, ಜಕಣಾಚಾರಿ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳು ಪ್ರಕಟಗೊಂಡಿವೆ. ಪಂಪ ಪ್ರಶಸ್ತಿಗೆ ದೇವನೂರು ಮಹಾದೇವ, ಬಿ.ವಿ.ಕಾರಂತ ಪ್ರಶಸ್ತಿಗೆ ಹಿರಿಯ ರಂಗಕರ್ಮಿ ಪ್ರಸನ್ನ ಮತ್ತು ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರ ಪ್ರಶಸ್ತಿಗೆ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ.

ಬಸವ ರಾಷ್ಟ್ರೀಯ ಪ್ರಶಸ್ತಿಗೆ ಬೀದರ್‌ ಜಿಲ್ಲೆಯ ಸಿದ್ದರಾಮ ಶರಣು ಬೆಲ್ದಾಳ, ಶ್ರೀ ಭಗವಾನ್‌ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿಗೆ ಮಂಡ್ಯ ಜಿಲ್ಲೆಯ ಕಂಬದಹಳ್ಳಿಯ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರನ್ನು ಆಯ್ಕೆ ಮಾಡಲಾಗಿದೆ.

ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಭಾಗ:

ಸಂಗೊಳ್ಳಿ ರಾಯಣ್ಣ ಪ್ರಶಸ್ತಿಗೆ ಸಿದ್ದನಗೌಡ ಪಾಟೀಲ್‌(ಧಾರವಾಡ), ಅಕ್ಕಮಹಾದೇವಿ ಪ್ರಶಸ್ತಿಗೆ ಕೆ.ನೀಲಾ (ಕಲಬುರಗಿ), ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರ ಪ್ರಶಸ್ತಿಗೆ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ (ತುಮಕೂರು) ಅವರು ಆಯ್ಕೆಗೊಂಡಿದ್ದಾರೆ.

ಸಾಹಿತ್ಯ ಹಾಗೂ ನಾಟಕ ವಿಭಾಗ:

ಪಂಪ ಪ್ರಶಸ್ತಿಗೆ ದೇವನೂರು ಮಹಾದೇವ (ಮೈಸೂರು), ಪ್ರೊ.ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿಗೆ ಅಲ್ಲಾಬಕ್ಷ ಮೀರಾಸಾಹೇಬ ಮಿರ್ಜಿ (ವಿಜಯಪುರ), ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಡಾ। ಸುಕನ್ಯಾ ಮಾರುತಿ (ಬಳ್ಳಾರಿ), ಡಾ। ಗುಬ್ಬಿ ವೀರಣ್ಣ ಪ್ರಶಸ್ತಿಗೆ ಜಿ.ವಿ.ಶಾರದಾ (ತುಮಕೂರು), ಬಿ.ವಿ.ಕಾರಂತ ಪ್ರಶಸ್ತಿಗೆ ಪ್ರಸನ್ನ (ಶಿವಮೊಗ್ಗ) ಮತ್ತು ಡಾ। ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿಗೆ ಗಂಗಾರಾಮ ಚಂಡಾಳ (ಕೋಲಾರ) ಆಯ್ಕೆಯಾಗಿದ್ದಾರೆ.

ಕಲಾ ವಿಭಾಗ:

ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿಗೆ ವಿ.ಹರಿರಾಮ್‌ (ಬೆಂಗಳೂರು), ಜಕಣಾಚಾರಿ ಪ್ರಶಸ್ತಿಗೆ ಅಶೋಕ್‌ ಗುಡಿಗಾರ್ (ಶಿವಮೊಗ್ಗ), ಜಾನಪದ ಶ್ರಿ ಪ್ರಶಸ್ತಿಗೆ ಎಂ.ಮಹದೇವಸ್ವಾಮಿ (ಮಂಡ್ಯ) ಮತ್ತು ಬಿ.ಲಕ್ಷ್ಮಣ (ಯಾದಗಿರಿ) ಅವರು ಆಯ್ಕೆಗೊಂಡಿದ್ದಾರೆ.

ಸಂಗೀತ-ನೃತ್ಯ ವಿಭಾಗ:

ಕುಮಾರವ್ಯಾಸ ಪ್ರಶಸ್ತಿಗೆ ಕಲ್ಲಿನಾಥಶಾಸ್ತ್ರಿ (ಗದಗ) ಮತ್ತು ಶಾಂತಲಾ ನಾಟ್ಯರಾಣಿ ಪ್ರಶಸ್ತಿಗೆ ಪ್ರತಿಭಾ ಪ್ರಹ್ಲಾದ್‌ (ಮೈಸೂರು) ಅವರನ್ನು ಆಯ್ಕೆ ಮಾಡಲಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ರಾಜ್ಯದ 12 ಜಿಲ್ಲೆಗೆ 4 ದಿನ ಕಾಲ ಹೀಟ್‌ವೇವ್‌ ಅಲರ್ಟ್‌ - ಬಿಸಿಗಾಳಿ, ದಗೆ ಮತ್ತಷ್ಟು ಹೆಚ್ಚಳ
ಘನತ್ಯಾಜ್ಯ ನಿರ್ವಹಣೆ ಮಾಡದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ : ಆಯುಕ್ತ