ರನ್ಯಾಗೆ ಗಿಫ್ಟ್‌ ಕೊಟ್ಟಿದ್ದೀನಾ? ಇಲ್ವಾ? ಅಂತ ಡಿಕೆಶೀನೇ ಕೇಳಿ : ಪರಂ ಗರಂ

Sujatha NRPublished : May 27, 2025 11:57 AM

ಚಿನ್ನದ ಕಳ್ಳಸಾಗಣೆ ಆರೋಪದಲ್ಲಿ ಜೈಲಿನಲ್ಲಿರುವ ನಟಿ ರನ್ಯಾ ರಾವ್‌ ವಿವಾಹದ ಸಂದರ್ಭದಲ್ಲಿ ಪರಮೇಶ್ವರ್ ‘ಗಿಫ್ಟ್‌’ ನೀಡಿರಬಹುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೀಡಿರುವ ಹೇಳಿಕೆಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

 ಬೆಂಗಳೂರು : ಚಿನ್ನದ ಕಳ್ಳಸಾಗಣೆ ಆರೋಪದಲ್ಲಿ ಜೈಲಿನಲ್ಲಿರುವ ನಟಿ ರನ್ಯಾ ರಾವ್‌ ವಿವಾಹದ ಸಂದರ್ಭದಲ್ಲಿ ಪರಮೇಶ್ವರ್ ‘ಗಿಫ್ಟ್‌’ ನೀಡಿರಬಹುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೀಡಿರುವ ಹೇಳಿಕೆಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

‘ರನ್ಯಾ ರಾವ್‌ಗೆ ಪರಮೇಶ್ವರ್‌ ಗಿಫ್ಟ್‌ ನೀಡಿದ್ದಾರೆ’ ಎಂದು ಶಿವಕುಮಾರ್‌ ಹೇಳಿದ್ದಾರಲ್ಲಾ ಎಂದು ಸೋಮವಾರ ಸುದ್ದಿಗಾರರು ಪ್ರಶ್ನಿಸಿದಾಗ, ಸಿಟ್ಟಾದ ಪರಮೇಶ್ವರ್‌, ‘ನೋ ಕಾಮೆಂಟ್ಸ್‌. ನಾನು ಅದರ ಬಗ್ಗೆ ಮಾತನಾಡುವುದಿಲ್ಲ. ಇಲ್ಲ ಮಾತನಾಡುವುದಿಲ್ಲ. ಈ ಬಗ್ಗೆ ಹೋಗಿ ಅವರನ್ನೇ(ಶಿವಕುಮಾರ್‌) ಕೇಳಿ’ ಎಂದು ಪ್ರತಿಕ್ರಿಯಿಸಿದರು.

ಸರ್ಕಾರದ ವಿರುದ್ಧ ಬಿಜೆಪಿಯವರು ಜಾಹೀರಾತು ನೀಡಿದ್ದಕ್ಕಾಗಿ ಮಾನನಷ್ಟ ಮೊಕದ್ದಮೆ ದಾಖಲಿಸಿ ಕಾನೂನು ಹೋರಾಟಕ್ಕೆ ಮುಂದಾಗಿದ್ದೀರಲ್ಲಾ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ‘ಅದು ಏನು ಎಂದು ನಾನು ನೋಡಿಲ್ಲ. ಇದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸುತ್ತೇನೆ’ ಎಂದು ಸ್ಪಷ್ಟಪಡಿಸಿದರು.

Read more Articles on