ಪದವಿ ಕಾಲೇಜು ಬೋಧಕರ ವರ್ಗಕ್ಕೆ ವೇಳಾಪಟ್ಟಿ ಪ್ರಕಟ

Published : May 27, 2025, 10:02 AM IST
Mohan Yadav visited Holkar Science College in Indore

ಸಾರಾಂಶ

ಕಾಲೇಜು ಶಿಕ್ಷಣ ಇಲಾಖೆಯು 2025ನೇ ಸಾಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಿಸಿದೆ.

 ಬೆಂಗಳೂರು : ಕಾಲೇಜು ಶಿಕ್ಷಣ ಇಲಾಖೆಯು 2025ನೇ ಸಾಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಿಸಿದೆ.

ಮಂಜೂರಾದ ಬೋಧಕರ ಹುದ್ದೆಗಳ ಶೇ.9 ಮತ್ತು ಸಾರ್ವಜನಿಕ ಹಿತಾಸಕ್ತಿ ವರ್ಗಾವಣೆಗಳು ಹಾಗೂ ಶೇ.6 ವಿಶೇಷ ಪ್ರಕರಣಗಳ ಕೋರಿಕೆ ವರ್ಗಾವಣೆ ನಡೆಸಲು ಅವಕಾಶವಿದ್ದು, ಆ ಪ್ರಕಾರ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಲು ಉದ್ದೇಶಿಸಿದೆ.

ಸಾರ್ವಜನಿಕ ಹಿತಾಸಕ್ತಿಯ ವರ್ಗಾವಣೆಗೆ ಒಳಪಡಲಿರುವ ಬೋಧಕರ ವಲಯವಾರು ಮತ್ತು ವರ್ಗವಾರು ತಾತ್ಕಾಲಿಕ ಪಟ್ಟಿಯನ್ನು ಮೇ 29ರಂದು ಬಿಡುಗಡೆ ಮಾಡಲಾಗುವುದು. ವಿಶೇಷ ಪ್ರಕರಣಗಳಡಿ ಕೋರಿಕೆ ವರ್ಗಾವಣೆಗೆ ಮತ್ತು ಸಾರ್ವಜನಿಕ ವರ್ಗಾವಣೆಯಿಂದ ವಿನಾಯತಿ ಕೋರಿಗೆ ಅರ್ಜಿ ಸಲ್ಲಿಸಲು ಜೂ.6 ಮತ್ತು ಗಂಭೀರ ಕಾಯಿಲೆಗಳ ವರ್ಗದ ಅಡಿಯಲ್ಲಿ ವರ್ಗಾವಣೆ ಕ್ಲೈಮ್ ಮಾಡುವವರಿಗೆ ವೈದ್ಯಕೀಯ ಪರೀಕ್ಷೆ ಜೂ.9 ಕೊನೆಯ ದಿನವಾಗಿದೆ. 

ಸಾರ್ವಜನಿಕ ಹಿತಾಸಕ್ತಿಯ ವರ್ಗಾವಣೆ ಮತ್ತು ವಿಶೇಷ ಪ್ರಕರಣಗಳ ತಾತ್ಕಾಲಿಕ ವರ್ಗಾವಣೆ ಆದ್ಯತಾ ಪಟ್ಟಿಯನ್ನು ಜೂ.16ರಂದು ಪ್ರಕಟಿಸಲಿದೆ. ತಾತ್ಕಾಲಿಕ ವರ್ಗಾವಣಾ ಆದ್ಯತಾ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಜೂ.19 ಕೊನೆಯ ದಿನ. ಜೂ.23ರಂದು ಕೌನ್ಸೆಲಿಂಗ್ ಆರಂಭವಾಗಲಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

PREV
Read more Articles on

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್