ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಡಿಜಿಟಲ್‌ ಟಿಸಿ

Published : May 22, 2026, 11:30 AM IST
Digital

ಸಾರಾಂಶ

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇದೇ ಮೊದಲ ಬಾರಿ ಫಲಿತಾಂಶದ ದಿನವೇ ‘ಡಿಜಿ ಲಾಕರ್’ ಮೂಲಕ ಡಿಜಿಟಲ್ ಅಂಕಪಟ್ಟಿ ನೀಡಿದ್ದ ಶಾಲಾ ಶಿಕ್ಷಣ ಇಲಾಖೆ ಇದೀಗ ಡಿಜಿಟಲ್ ವರ್ಗಾವಣೆ ಪ್ರಮಾಣ ಪತ್ರ(ಟಿಸಿ) ನೀಡಲು ಮುಂದಾಗಿದೆ.

  ಬೆಂಗಳೂರು :  ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇದೇ ಮೊದಲ ಬಾರಿ ಫಲಿತಾಂಶದ ದಿನವೇ ‘ಡಿಜಿ ಲಾಕರ್’ ಮೂಲಕ ಡಿಜಿಟಲ್ ಅಂಕಪಟ್ಟಿ ನೀಡಿದ್ದ ಶಾಲಾ ಶಿಕ್ಷಣ ಇಲಾಖೆ ಇದೀಗ ಡಿಜಿಟಲ್ ವರ್ಗಾವಣೆ ಪ್ರಮಾಣ ಪತ್ರ(ಟಿಸಿ) ನೀಡಲು ಮುಂದಾಗಿದೆ.

ಈ ಬಾರಿ ಪ್ರಾಯೋಗಿಕವಾಗಿ ದ್ವಿತೀಯ ಪಿಯು ತೇರ್ಗಡೆಯಾದ ಸರ್ಕಾರಿ ಪಿಯು ಕಾಲೇಜುಗಳ ತರಗತಿ ವಿದ್ಯಾರ್ಥಿಗಳಿಗೆ ಡಿಜಿಟಲ್ ‘ವರ್ಗಾವಣೆ ಪ್ರಮಾಣ ಪತ್ರ’ (ಟಿಸಿ) ನೀಡಲು ಪದವಿ ಪೂರ್ವ ಶಿಕ್ಷಣ ನಿದೇಶನಾಲಯಕ್ಕೆ ಅನುಮತಿ ನೀಡಿದೆ.

ಹೊಸ ವ್ಯವಸ್ಥೆ:

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಕೆಎಸ್ಇಎಬಿ) ದ್ವಿತೀಯ ಪಿಯುಸಿಯ ಪರೀಕ್ಷೆ-2ರ ಫಲಿತಾಂಶದ ದತ್ತಾಂಶವನ್ನು ಬಳಸಿಕೊಂಡು ಸ್ವಯಂಚಾಲಿತವಾಗಿ ಡಿಜಿಟಲ್ ಟಿಸಿಯನ್ನು ಸೃಜಿಸಲಾಗುತ್ತದೆ. ಈ ಟಿಸಿಯನ್ನು ವಿದ್ಯಾರ್ಥಿಗಳು ನೇರವಾಗಿ ತಮ್ಮ ಡಿಜಿಲಾಕರ್ ಖಾತೆ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಫಲಿತಾಂಶ ಪ್ರಕಟವಾದ ತಕ್ಷಣವೇ ಡಿಜಿಲಾಕರ್‌ನಲ್ಲಿ ಟಿಸಿ ಲಭ್ಯವಾಗುವುದರಿಂದ, ಪ್ರಾಂಶುಪಾಲರ ಭೌತಿಕ ಸಹಿಗಾಗಿ ವಿದ್ಯಾರ್ಥಿಗಳು ಕಾಲೇಜುಗಳಿಗೆ ಅಲೆಯುವುದು ತಪ್ಪುತ್ತದೆ. ಉನ್ನತ ಶಿಕ್ಷಣದ ಪ್ರವೇಶಾತಿಗೆ ಈ ಡಿಜಿಟಲ್ ಟಿಸಿ ಸಂಪೂರ್ಣ ಮಾನ್ಯತೆ ಹೊಂದಿರಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಖಾಸಗಿ ಅಥವಾ ಪುನರಾವರ್ತಿತ ವಿದ್ಯಾರ್ಥಿಗಳು ಈ ಹಿಂದಿನಂತೆ ಪ್ರಾಂಶುಪಾಲರಿಗೆ ಅರ್ಜಿ ಸಲ್ಲಿಸಿ ಕಾಲೇಜು ಹಂತದಲ್ಲಿ ಟಿಸಿ ಪಡೆಯಬೇಕು. ಮುಂದಿನ ದಿನಗಳಲ್ಲಿ ಎಲ್ಲರಿಗೂ ಈ ವ್ಯವಸ್ಥೆ ವಿಸ್ತರಿಸುವ ಆಲೋಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ಡಿಜಿಟಲ್ ಟಿಸಿ ವ್ಯವಸ್ಥೆ ಸುಲಭಗೊಳಿಸಲು, ಶುಲ್ಕ ಬಾಕಿ, ವಿದ್ಯಾರ್ಥಿ ವೇತನ ಹಾಗೂ ಹಾಜರಾತಿ ಲೆಕ್ಕಾಚಾರದಂಥ ಅನಗತ್ಯ ಕಾಲಂಗಳನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ. ವಿದ್ಯಾರ್ಥಿಯ ಶೈಕ್ಷಣಿಕ ದಾಖಲೆಗಳ ನಿಖರ ಜೋಡಣೆಗಾಗಿ ಸ್ಯಾಟ್ಸ್ ಸಂಖ್ಯೆ ಜೊತೆಗೆ ‘ಪರೀಕ್ಷಾ ನೋಂದಣಿ ಸಂಖ್ಯೆ’ ಮತ್ತು ‘ಅಪಾರ್ ಐಡಿ’ ಅನ್ನು ಡಿಜಿಟಲ್ ಟಿಸಿ ಹೊಂದಿರಲಿದೆ. ಇದರ ಜೊತೆಗೆ ಪ್ರಾಂಶುಪಾಲರು ನಿಗದಿತ ದಿನಾಂಕದೊಳಗೆ ಯಾವುದೇ ನಕಾರಾತ್ಮಕ ರಿಮಾರ್ಕ್ಸ್ ದಾಖಲಿಸದಿದ್ದರೆ, ತಂತ್ರಾಂಶ ಸ್ವಯಂಚಾಲಿತವಾಗಿ ವಿದ್ಯಾರ್ಥಿಯ ನಡತೆಯನ್ನು ‘ಉತ್ತಮ’ ಎಂದು ಮುದ್ರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ . ಡಿಜಿಟಲ್ ಟಿಸಿಗಳು ಸುರಕ್ಷಿತ ಕ್ಯೂಆರ್ ಕೋಡ್ ಹೊಂದಿರುವುದರಿಂದ, ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಆಧಾರ್ ಕೇಂದ್ರಗಳು ಇದರ ನೈಜತೆಯನ್ನು ತಕ್ಷಣವೇ ಪರಿಶೀಲಿಸಬಹುದು. ಇದರಿಂದ ನಕಲಿ ಟಿಸಿ ಹಾವಳಿ ತಪ್ಪುತ್ತದೆ ಎಂದು ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ.

- ‘ಡಿಜಿಟಲ್‌ ಅಂಕಪಟ್ಟಿ’ ಬಳಿಕ ಹೊಸ ಪ್ರಯೋಗ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಅಂಗನವಾಡಿ ಕೇಂದ್ರಗಳಿಗೆ ಶಾಲಾಪೂರ್ವ ಶಿಕ್ಷಣದ ಕಿಟ್‌
500 ಒಬಿಸಿ ವಿದ್ಯಾರ್ಥಿಗಳಿಗೆ ಉಚಿತ ಸಿಇಟಿ, ನೀಟ್‌ ತರಬೇತಿ