ಜೋಡಿ ಮಾರ್ಗ ಕಾಮಗಾರಿ : ಕೆಲ ರೈಲು ಸಂಚಾರ ರದ್ದು

Published : Nov 23, 2025, 09:50 AM IST
Train

ಸಾರಾಂಶ

ನಗರದ ಬೆಳ್ಳಂದೂರು ರಸ್ತೆ ಮತ್ತು ಕಾರ್ಮೆಲರಾಮ್ ನಡುವೆ ಜೋಡಿ ಮಾರ್ಗ ಕಾಮಗಾರಿ ನಡೆಯುತ್ತಿರುವ ಕಾರಣ ಕೆಲ ರೈಲುಗಳ ಸಂಚಾರ ರದ್ದುಪಡಿಸಲಾಗಿದೆ. ಕೆಲವು ನಿಲ್ದಾಣಗಳಲ್ಲಿ ಕೆಲ ರೈಲುಗಳ ನಿಲುಗಡೆ ಇರುವುದಿಲ್ಲ 

 ಬೆಂಗಳೂರು :  ನಗರದ ಬೆಳ್ಳಂದೂರು ರಸ್ತೆ ಮತ್ತು ಕಾರ್ಮೆಲರಾಮ್ ನಡುವೆ ಜೋಡಿ ಮಾರ್ಗ ಕಾಮಗಾರಿ ನಡೆಯುತ್ತಿರುವ ಕಾರಣ ಕೆಲ ರೈಲುಗಳ ಸಂಚಾರ ರದ್ದುಪಡಿಸಲಾಗಿದೆ.

ನ.25ರಂದು ಯಶವಂತಪುರ- ಹೊಸೂರು ಮೆಮು (66563), ಯಶವಂತಪುರ- ಹೊಸೂರು ಮೆಮು (66585) ಮತ್ತು ಯಶವಂತಪುರ- ಹೊಸೂರು ಮೆಮು (06591), ಹೊಸೂರು – ಯಶವಂತಪುರ ಮೆಮು (66564), ಹೊಸೂರು – ಯಶವಂತಪುರ ಮೆಮು (66586) ಮತ್ತು ಹೊಸೂರು – ಯಶವಂತಪುರ ಮೆಮು (06592) ಸೇವೆ ರದ್ದುಗೊಳಿಸಲಾಗಿದೆ.

ಮಾರ್ಗ ಬದಲಾವಣೆ: ,

. 25ರಂದು ಎಸ್ಎಂವಿಟಿ ಬೆಂಗಳೂರು - ಎರ್ನಾಕುಲಂ ಎಕ್ಸ್‌ಪ್ರೆಸ್‌ ರೈಲು (12677) ಎಸ್ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಜೋಲಾರ್‌ಪೇಟೆ ಎ ಕ್ಯಾಬಿನ್, ತಿರುಪತ್ತೂರು ಮತ್ತು ಸೇಲಂ ಮಾರ್ಗವಾಗಿ ಸಂಚರಿಸಲಿದ್ದು, ಕಾರ್ಮೆಲರಾಮ್, ಹೊಸೂರು ಮತ್ತು ಧರ್ಮಪುರಿ ನಿಲ್ದಾಣಗಳಲ್ಲಿ ನಿಲ್ಲುವುದಿಲ್ಲ.

ಕೆಲವೆಡೆ ನಿಲುಗಡೆ ಇರುವುದಿಲ್ಲ

ಎಸ್ಎಂವಿಟಿ ಬೆಂಗಳೂರು – ಕಾರೈಕ್ಕಾಲ್ ಎಕ್ಸ್‌ಪ್ರೆಸ್‌ ರೈಲು ಎಸ್ಎಂವಿಟಿ (16529) ಬೆಂಗಳೂರು, ಕೃಷ್ಣರಾಜಪುರಂ, ಜೋಲಾರ್ಪೇಟೆ ಎ ಕ್ಯಾಬಿನ್, ತಿರುಪತ್ತೂರು ಮತ್ತು ಸೇಲಂ ಮಾರ್ಗವಾಗಿ ಸಂಚರಿಸಲಿರುವುದರಿಂದ ಬೆಳಂದೂರು ರೋಡ್, ಕಾರ್ಮೆಲರಾಮ್, ಹೀಲಲಿಗೆ, ಆನೇಕಲ್ ರೋಡ್, ಹೊಸೂರು, ಕೆಲಮಂಗಲಂ, ಪೆರಿಯನಾಗತುನೈ, ರಾಯಕ್ಕೋಟ್ಟೈ, ಮಾರಂಡಹಳ್ಳಿ, ಪಾಲಕ್ಕೋಡು, ಧರ್ಮಪುರಿ, ಸಿವಾಡಿ, ಮುತ್ತಂಪಟ್ಟಿ, ತೋಪ್ಪೂರು, ಕಾರುವಳ್ಳಿ, ಸೆಮ್ಮಂದಪಟ್ಟಿ ಮತ್ತು ಓಮಲೂರ್ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

PREV
Read more Articles on

Recommended Stories

ಫಾರ್ಮಸಿ ಕೋರ್ಸ್ ಪ್ರವೇಶಕ್ಕೆ ನಿಯಮ ಪಾಲಿಸಿ : ಹೈಕೋರ್ಟ್
ನಾಗವಾರದಲ್ಲಿ ಆದಾಯಕ್ಕಾಗಿ ವಾಣಿಜ್ಯಸಂಕಿರ್ಣ ಕಟ್ಟಲು ಮೆಟ್ರೋ ಯೋಜನೆ